Roopesh Shetty: ಬಿಗ್ ಬಾಸ್ 9 ವಿನ್ನರ್ ರೂಪೇಶ್ ಶೆಟ್ಟಿ ಜೋಡಿಯಾಗಿ ಕುಡ್ಲದ ಬೆಡಗಿ ಆಯ್ಕೆ!

Share the Article

Roopesh Shetty: ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada 9) ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ಅವರು ‘ಜೈ’ (Jai Film) ಎಂಬ ತುಳು ಸಿನಿಮಾದಲ್ಲಿ ಶೀಘ್ರದಲ್ಲಿ ಕಾಣಿಸಿಕೊಳ್ಳಲಿದ್ದು. ಈ ಚಿತ್ರಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ (Adhvithi Shetty) ಆಯ್ಕೆ ಮಾಡಲಾಗಿದೆ . ಇದೀಗ ಮೊದಲ ಬಾರಿಗೆ ತುಳು ಸಿನಿಮಾದಲ್ಲಿ ನಟಿಸುತ್ತಿರುವ ಖುಷಿಯನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಜೈ’ (Jai Film) ಸಿನಿಮಾದಲ್ಲಿ ಹೀರೋಯಿನ್ ಆಗಿ ಅದ್ವಿತಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲೂ ಅವರು ಪಾಲ್ಗೊಂಡಿದ್ದಾರೆ.

ಅದ್ವಿತಿ ಶೆಟ್ಟಿ ಬಗ್ಗೆ ಹೇಳುವುದಾದರೆ, ಅವರು ಮೂಲತಃ ಮಂಗಳೂರಿನವರು. ಮಾತೃ ಭಾಷೆ ತುಳು ಆಗಿದ್ದರೂ ಸಹ ಅವರು ಮೊದಲ ಬಾರಿಗೆ ತುಳು ಭಾಷೆಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಜೈ’ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ತುಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಕುರಿತು ನಟಿ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ರೂಪೇಶ್ ಮತ್ತು ಇಡೀ ತಂಡಕ್ಕೆ ನಟಿ ಧನ್ಯವಾದ ತಿಳಿಸಿದ್ದಾರೆ.

Leave A Reply