College student: ಕಾಲೇಜು ವಿದ್ಯಾರ್ಥಿನಿಯನ್ನು ಚುಂಬಿಸಿದ ಸೆಕ್ಯುರಿಟಿ ಗಾರ್ಡ್‌!

Share the Article

College student: ಪೇಯಿಂಗ್‌ ಗೆಸ್ಟ್‌ (ಪಿಜಿ)ನಲ್ಲಿ ವಾಸವಿದ್ದ, ಪಶ್ಚಿಮ ಬಂಗಾಳದ 19 ವರ್ಷದ ಕಾಲೇಜು ವಿದ್ಯಾರ್ಥಿನಿಗೆ (College student) ಮುತ್ತು ನೀಡಿದ ಭದ್ರತಾ ಸಿಬ್ಬಂದಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

ಮಾಹಿತಿ ಪ್ರಕಾರ, ಅ.24ರ ರಾತ್ರಿ 11.30 ರ ಸುಮಾರಿನಲ್ಲಿ ಪಿಜಿಯ ಸ್ಟೇರ್ಕೇಸ್‌ ಮೇಲಿಟ್ಟಿದ್ದ ಲೈಟರ್‌ ತೆಗೆದುಕೊಳ್ಳಲು ಯುವತಿ ಹೋದಾಗ, ಆರೋಪಿ ಆಕೆಯನ್ನು ತಬ್ಬಿಕೊಂಡು ಮತ್ತು ನೀಡಿದ್ದ ನಂತರ ಪಿ.ಜಿ. ಮಾಲಿಕರು ಮತ್ತು ಮಹಿಳಾ ವಾರ್ಡನ್‌ಗೆ ಯುವತಿ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬಳಿಕ ಮಾಲಿಕರು ಹಾಗೂ ವಾರ್ಡನ್‌ ಸ್ಥಳಕ್ಕೆ ಬಂದು, ಆಕೆಯನ್ನು ಸಂತೈಸಿ, ಭದ್ರತಾ ಸಿಬ್ಬಂದಿ ಎಸಗಿದ್ದ ಕೃತ್ಯ ರೆಕಾರ್ಡ್‌ ಆಗಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿ ಅಳಿಸಿ ಹಾಕಿಸಿದ್ದರು.

ಆದರೆ, ಸಂತ್ರಸ್ತೆ ಆರೋಪಿಯ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ಪಿ.ಜಿ ಮಾಲೀಕರು ಮತ್ತು ವಾರ್ಡನ್‌ ಸಿಸಿ ಕ್ಯಾಮೆರಾ ದೃಶ್ಯಾವಳಿ ಅಳಿಸಿ ಹಾಕಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಅವರ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply