Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿಯೇ? ಚಿತ್ರಗಳಲ್ಲಿ ಬೇಬಿ ಬಂಪ್ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಂದ ಅಭಿನಂದನೆ

Share the Article

Sonakshi Sinha: ಜೂನ್ 24 ರಂದು ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ವಿವಾಹವಾಗಿದ್ದರು. ಇತ್ತೀಚೆಗಷ್ಟೇ ಸೋನಾಕ್ಷಿ ಸಿನ್ಹಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಇದರಲ್ಲಿ ನಟಿಯ ಬೇಬಿ ಬಂಪ್ ನೋಡಿದ ಅಭಿಮಾನಿಗಳು ಆಕೆಯನ್ನು ಅಭಿನಂದಿಸಲು ಆರಂಭಿಸಿದ್ದಾರೆ.

ಸೋನಾಕ್ಷಿ ಸಿನ್ಹಾ ಅವರು ಜಹೀರ್ ಇಕ್ಬಾಲ್ ಅವರೊಂದಿಗೆ ಕೆಂಪು ಸೂಟ್ ಧರಿಸಿ, ಹಣೆಗೆ ಸಿಂಧೂರ ಹಚ್ಚಿ, ಕುತ್ತಿಗೆಗೆ ಹಾರ ಮತ್ತು ಹಣೆಯ ಮೇಲೆ ಬಿಂದಿಯನ್ನು ಹಾಕಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

https://www.instagram.com/p/DBp-Exdougu/?utm_source=ig_web_copy_link

ಕೂದಲಿಗೆ ಹೂವನ್ನು ಧರಿಸಿದ ನಟಿ ತುಂಬಾ ಸುಂದರವಾಗಿ ಕಾಣುತ್ತಿದ್ದು, ಜಹೀರ್ ಕೂಡ ಕಪ್ಪು ಕುರ್ತಾದಲ್ಲಿ ಚೆನ್ನಾಗಿ ಕಾಣುತ್ತಿದ್ದಾರೆ. ಚಿತ್ರಗಳಲ್ಲಿ ದಂಪತಿಗಳೊಂದಿಗೆ ನಾಯಿ ಕೂಡ ಕಾಣಿಸಿಕೊಂಡಿದೆ.

ಸೋನಾಕ್ಷಿ ಸಿನ್ಹಾ ಅವರ ಈ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಅವರು ಗರ್ಭಿಣಿ ಎಂದು ಕಮೆಂಟ್ಸ್‌ ಮಾಡುತ್ತಿದ್ದರೆ. ‘ಗರ್ಭಧಾರಣೆಗೆ ಅಭಿನಂದನೆಗಳುʼ, ‘ನಿಜವಾಗಿಯೂ ನನಗೂ ಅವಳು ಗರ್ಭಿಣಿ ಎಂದು ಅನಿಸುತ್ತಿದೆ.’ ಹೀಗೆ ನಾನ ಕಮೆಂಟ್‌ಗಳ ಮೂಲಕ ಬಳಕೆದಾರರು ಪ್ರಶ್ನಿಸುತ್ತಿದ್ದಾರೆ.

Leave A Reply