Black Pepper: ಶ್ರೀಲಂಕಾದಿಂದ ಆಮದಾಗುತ್ತಿದೆ ಕಾಳು ಮೆಣಸು: ದಿನದಿಂದ ದಿನಕ್ಕೆ ಕುಸಿಯುತ್ತಿರುವ ಕರಿ ಮೆಣಸು ದರ: ಆತಂಕದಲ್ಲಿ ರೈತರು
Black Pepper: ಭಾರತದ(Indian) ಮಾರುಕಟ್ಟೆಯಲ್ಲಿ(Market) ಕಾಳು ಮೆಣಸಿನ(Black pepper) ದರವು ಎರಡು ವಾರಗಳಲ್ಲಿ ಕಿಲೋಗೆ 19 ರೂಪಾಯಿಗಳಷ್ಟು ಇಳಿದಿದೆ(Low price). ಕಳೆದ ಐದು ವಾರಗಳಲ್ಲಿ ಒಟ್ಟು ಕೆಜಿಗೆ ₹ 35ರಷ್ಟು ಕುಸಿದಿದೆ. SAFTA(South Asian free Trade Area) ಅಡಿಯಲ್ಲಿ 8% ಸುಂಕದ ಅಡಿಯಲ್ಲಿ ಶ್ರೀಲಂಕಾದಿಂದ(Shri Lanka) ಅಮದು(Import) ಮಾಡಿದ ಉತ್ಪನ್ನಗಳ ಬೃಹತ್ ಆಗಮನವು ಬೆಲೆ ಕುಸಿತಕ್ಕೆ ಕಾರಣವೆಂದು ಬೆಳೆಗಾರ ಸಂಘಟನೆಗಳು ಆರೋಪಿಸಿವೆ.
ಸದ್ಯ ಕೊಚ್ಚಿ ಟರ್ಮಿನಲ್ ಮಾರ್ಕೆಟ್‌ನಲ್ಲಿ ಅನ್‌ಗಾರ್ಬಲ್ ಕಿಲೋಗೆ
627 ರೂ ಇದ್ರೆ ಗಾರ್ಬಲ್‌ಗೆ ₹ 647 ರಂತೆ ದರವಿದೆ. ಕೊಚ್ಚಿಯ ಕಾಳುಮೆಣಸಿನ ವ್ಯಾಪಾರಿ ಕಿಶೋರ್ ಶಾಮ್‌ಜಿ, ಮುಂಬೈನಿಂದ ಬಂದಿರುವ ಶ್ರೀಲಂಕಾದ ಕಾಳುಮೆಣಸು ಬಹುತೇಕ ಎಲ್ಲಾ ಮಾರುಕಟ್ಟೆಗಳನ್ನು ಆವರಿಸಿಕೊಂಡಿದೆ. ಅಲ್ಲದೆ ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿಯೂ ಮಾರಾಟವಾಗುತ್ತಿದೆ. ಶ್ರೀಲಂಕಾದ ಆಮದಿನ ಕಾರಣದಿಂದ ಸ್ಥಳೀಯವಾಗಿ ಬೆಳೆದ ಕಾಳುಮೆಣಸಿನ ಬೆಲೆ ಮೇಲೆ ಪರಿಣಾಮ ಬೀರಿದೆ. ಬೆಲೆ ಕುಸಿತದ ಆತಂಕದ ಹಿನ್ನೆಲೆಯಲ್ಲಿ ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಕಾಳು ಮೆಣಸು ಬೆಳೆಗಾರರು ತಮ್ಮಲ್ಲಿರುವ ಸ್ಟಾಕ್ ಅನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.
ಬೆಲೆ ಏರಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ಕೂಡ ತಮ್ಮ ದಾಸ್ತಾನು ಇಟ್ಟಿದ್ದ ಕಾಳುಮೆಣಸುನ್ನು ಮಾರಾಟ ಮಾಡುತ್ತಿದ್ದಾರೆ. ಅವರ ಪ್ರಕಾರ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಿಂದ ಒಟ್ಟು 10,433 ಟನ್ ಕಾಳು ಮೆಣಸು ಆಮದು ಆಗಿದೆ. ಅಲ್ಲದೆ ಇತರ ಕಾಳು ಮೆಣಸು ಉತ್ಪಾದಕ ದೇಶಗಳಿಂದ ಒಟ್ಟು 12,606 ಟನ್ ಆಮದಾಗಿದೆ. ಶ್ರೀಲಂಕಾ ವಾರ್ಷಿಕ 25 ಸಾವಿರ ಟನ್ ಕಾಳು ಮೆಣಸು ಉತ್ಪಾದನೆ ಮಾಡುತಿದೆ. ಆದರೆ ಅದರಲ್ಲಿ ಅರ್ದಕ್ಕಿಂತ ಹೆಚ್ಚು ಕಾಳು ಮೆಣಸನ್ನು ರಫ್ತು ಮಾಡಲೇಬೇಕು. ಯಾಕೆಂದರೆ ಅಲ್ಲಿನ ಅಂತರಿಕ ಬಳಕೆ ಕಡಿಮೆ ಇದೆ.
ಈ ಹಿನ್ನೆಲೆಯಲ್ಲಿ ತಮ್ಮ ಹೆಚ್ಚುವರಿ ದಾಸ್ತಾನುಗಳನ್ನು ಮಾರಾಟ ಮಾಡಲು ಭಾರತದತ್ತ ನೋಡುತ್ತಿದ್ದಾರೆ ಎಂದು ಭಾರತೀಯ ಮೆಣಸು ಮತ್ತು ಮಸಾಲೆಗಳ ವ್ಯಾಪಾರ ಸಂಘದ ನಿರ್ದೇಶಕರೂ ಆಗಿರುವ ಶಾಮ್ ಜಿ ಹೇಳಿದ್ದಾರೆ. ಆದರೆ ಅಮದು ಮಾಡಲಾದ ವಸ್ತುವು ಕಡಿಮೆ ಪ್ರಮಾಣದ ಸಾಂದ್ರತೆ, ಹೆಚ್ಚಿನ ಶೇಕಡಾವಾರು ತೇವಾಂಶ ಹಾಗೂ ಶಿಲೀಂಧ್ರ ಉಪಸ್ಥಿತಿ ಜಾಸ್ತಿ ಹೊಂದಿದೆ. ಭಾರತದ ಒಟ್ಟು ಉತ್ಪಾದನೆ 70 ಸಾವಿರ ಟನ್ ಗಳಷ್ಟಿದ್ದು ಇದರಲ್ಲಿ ಶೇಕಡಾ 45 ರಷ್ಟು ಕರ್ನಾಟಕದ ಪಾಲು ಆಗಿದೆ. ಇದೀಗ ವಿದೇಶ ಆಮದಿನಿಂದಾಗಿ ಕಾಳು ಮೆಣಸಿನ ದರ ಕುಸಿಯುತ್ತಿದ್ದು, ರೈತರು ಆತಂಕಕ್ಕೋಳಗಾಗಿದ್ದಾರೆ. ಇದನ್ನು ತಡೆಯಲು ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳುವಂತೆ ಸಂಘಟನೆಗಳು ಒತ್ತಾಯಿಸಿವೆ.