Virendra Sachdeva: ಯಮುನಾ ನದಿಯಲ್ಲಿ ಮುಳುಗಿ ಪ್ರತಿಭಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ, ಆಸ್ಪತ್ರೆಗೆ ದಾಖಲು

Virendra Sachdeva: ಎರಡು ದಿನಗಳ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ ಯಮುನಾ ನದಿಯಲ್ಲಿ ಸ್ನಾನ ಮಾಡಿದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಶನಿವಾರ ಬೆಳಿಗ್ಗೆ ಉಸಿರಾಟದ ತೊಂದರೆ ಮತ್ತು ತೀವ್ರ ಚರ್ಮದ ಕಿರಿಕಿರಿಯನ್ನು ಅನುಭವಿಸಿದ್ದು, ಇದೀಗ ನಗರದ ಆರ್‌ಎಂಎಲ್ ನರ್ಸಿಂಗ್ ಹೋಮ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದೆಹಲಿ ಸರ್ಕಾರದ “ಭ್ರಷ್ಟಾಚಾರ”ದ ವಿರುದ್ಧ ಪ್ರತಿಭಟಿಸಿ ಸಚ್‌ದೇವ ಅವರು ಗುರುವಾರ ಐಟಿಒ ಬಳಿಯ ಘಾಟ್‌ನಲ್ಲಿ ಯಮುನಾ ಸ್ನಾನ ಮಾಡಿದ್ದು, ನಂತರ ಅನಾರೋಗ್ಯಕ್ಕೆ ಒಳಗಾಗಿದ್ದರು.

ಅರವಿಂದ ಕ್ರೇಜಿವಾಲ್‌ ಅವರು ಯಮುನಾ ನದಿಯನ್ನು 2025 ರ ವೇಳೆ ಸ್ವಚ್ಛಗೊಳಿಸುವ ಭರವಸೆ ನೀಡಿದ್ದರು. ಆದರೆ ಇದನ್ನು ಸಫಲ ಮಾಡುವಲ್ಲಿ ಆಪ್‌ ಸರಕಾರ ವಿಫಲಗೊಂಡಿದೆ. ಇದನ್ನು ಪರಿಶೀಲಿಸಲೆಂದು ಮುಖ್ಯಮಂತ್ರಿ ಅತಿಶಿ ಹಾಗೂ ಅರವಿಂದ್‌ ಕೇಜ್ರಿವಾಲ್‌ ಅ.24 ರಂದು ಸವಾಲನ್ನು ಹಾಕಿದ್ದರು. ಆದರೆ ಸಚ್‌ದೇವ್‌ ಅವರ ಮಾತಿಗೆ ಬೆಲೆ ಕೊಡದ ಆಪ್‌ ನಾಯಕರು ಯಮುನಾ ನದಿ ತೀರಕ್ಕೆ ಬಂದಿಲ್ಲ. ಇದಕ್ಕೆ ಕಿಡಿಕಾರಿದ ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದೇನೆ ಎಂದು ಹೇಳಿ ಕಲುಷಿತಗೊಂಡಿರುವ ನದಿಯಲ್ಲಿ ಮುಳುಗೇಳಿದ್ದಾರೆ.

ಇದಾದ ಸ್ವಲ್ಪ ಹೊತ್ತಿನಲ್ಲೇ ಅವರ ಮೈಯಲ್ಲಿ ತುರಿಕೆ, ಉಸಿರಾಟದ ಸಮಸ್ಯೆ ಉಂಟಾಗಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave A Reply

Your email address will not be published.