Lawyer Jagadish: ಬಿಗ್‌ಬಾಸ್‌ ಜಗದೀಶ್‌ ಮನೆ ಮೇಲೆ ದಾಳಿ ಪ್ರಯತ್ನ

Share the Article

Lawyer Jagadish: ಲಾಯರ್‌ ಜಗದೀಶ್‌ ಬಿಗ್‌ಬಾಸ್‌ ಮನೆಯಲ್ಲಿರುವಾಗಲೂ ಸುದ್ದಿಯಲ್ಲಿದ್ದರು, ಇದೀಗ ಮನೆಯಿಂದ ಹೊರ ಬಂದ ಮೇಲೆ ಕೂಡಾ ಭಾರೀ ಸುದ್ದಿಯಲ್ಲಿದ್ದಾರೆ. ಹೀಗಿರುವಾಗ ಲಾಯರ್‌ ಜಗದೀಶ್‌ ಅವರು ತಮ್ಮ ಮನೆಯ ಮೇಲೆ ದಾಳಿ ಪ್ರಯತ್ನ ನಡೆದಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಅ.25 ಇಂದು ಅವರು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ ಅವರನ್ನು ಭೇಟಿ ಮಾಡುವುದಾಗಿ ಈ ಕುರಿತು ಹೇಳುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದೆ.

ದಾಳಿ ಮಾಡಿರುವ ಕುರಿತು ಜಗದೀಶ್‌ ಅವರು ಈ ರೀತಿ ಹೇಳಿಕೊಂಡಿದ್ದಾರೆ. ಒಂದೂವರೆ ತಿಂಗಳಲ್ಲಿ ನನಗೆ ಇದು ಎರಡನೇ ಅಟ್ಯಾಕ್‌. ಒಂದೂವರೆ ತಿಂಗಳ ಹಿಂದೆ ಸುಮಾರು 25 ಪುಡಾರಿಗಳು ಮನೆ ಹತ್ತಿರ ಬಂದಿದ್ದು, ಏನು ಮಾಡಿದರು ಎನ್ನುವುದು ನಿಮಗೆ ಗೊತ್ತೇ ಇದೆ. ಇಂದು (ಅ.24) ರಂದು ಮೂರು ಸಾವಿರ ಜನರನ್ನು ಭೇಟಿ ಮಾಡಿದ್ದು, ಆಗ ಏನೂ ಸಮಸ್ಯೆ ಆಗಿರಲಿಲ್ಲ. ಆದರೆ ಮೂರು ಜನ ಕುಡಿದು ಮನೆ ಮೇಲೆ ಅಟ್ಯಾಕ್‌ ಮಾಡೋಕೆ ಬಂದ್ರು. ಅವರನ್ನು ಭದ್ರತಾ ಸಿಬ್ಬಂದಿ ತಡೆಯೋಕೆ ಹೋದರೂ ಅದು ಆಗಿಲ್ಲʼ ಎಂದು ಹೇಳಿದ್ದಾರೆ.

ನಂತರ ಪೊಲೀಸರಿಗೆ ಫೋನ್‌ ಮಾಡಿದೆವು. ಪೊಲೀಸರು ಬಂದು ಅವರನ್ನು ಕರೆದುಕೊಂಡು ಹೋಗಿದ್ದಾರೆ. ಅಭಿಮಾನ ಓಕೆ, ಏನೇ ಆದರೂ ಈ ರೀತಿ ಮನೆಗೆ ನುಗ್ಗೋದು ಎಷ್ಟು ಸರಿ? ಎಂದು ಜಗದೀಶ್‌ ಪ್ರಶ್ನೆ ಮಾಡಿದ್ದಾರೆ.

Leave A Reply