Rats: ಇಲಿಗಳ ಸಮಸ್ಯೆಯಿಂದ ಬೇಸತ್ತಿದ್ದೀರಾ? ಮನೆ ಮುಂದೆ ಈ ಸಸ್ಯ ನೆಟ್ಟರೆ ಇಲಿ ಕಾಟಕ್ಕೆ ಮುಕ್ತಿ

Rats: ಮನೆಯಲ್ಲಿ ಇಲಿಗಳ ಕಾಟದಿಂದ ಬೇಸತ್ತಿರುವವರಿಗೆ, ಇವುಗಳನ್ನು ಮನೆಯಿಂದ ಓಡಿಸಲು ಇಲ್ಲಿದೆ ಸುಲಭ ಟ್ರಿಕ್ಸ್‌. ಅದೇನೆಂದರೆ ಮನೆಯ ಮುಂದೆ ಈ ಗಿಡಗಳನ್ನು ನೆಟ್ಟರೆ ನಿಮ್ಮ ಮನೆಗೆ ಇಲಿಗಳು ಬರುವುದೇ ಇಲ್ಲ. ಬನ್ನಿ ಆ ಗಿಡಗಳು ಯಾವುದು? ತಿಳಿಯೋಣ.

ರೋಸ್ಮರಿ ಸಸ್ಯ: ಅರೊಮ್ಯಾಟಿಕ್‌ ಗುಣ ಹೊಂದಿರುವ ಈ ಸಸ್ಯ, ಕೂದಲ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ಗಿಡದ ಪರಿಮಳ ಇಲಿಗಳಿಗೆ ಇಷ್ಟ ಆಗುವುದಿಲ್ಲ.
ಲ್ಯಾವೆಂಡರ್‌ ಸಸ್ಯ: ಇದು ಕೂಡಾ ಪರಿಮಳಯುಕ್ತ ಸಸ್ಯವಾಗಿದ್ದು, ಮೇಣದ ಬತ್ತಿಗಳು, ಸಾರಭೂತ ತೈಲಗಳಲ್ಲಿ ಬಳಕೆಯಾಗುವ ಈ ಗಿಡದ ಪರಿಮಳವನ್ನು ಇಲಿಗಳು ಇಷ್ಟ ಪಡುವುದಿಲ್ಲ.
ಪುದೀನಾ ಸಸ್ಯ: ಪುದೀನ ಮನೆಯ ಅಡುಗೆಗಳಲ್ಲಿ ಬಳಕೆಯಾಗುವ ಸಸ್ಯ. ಇದರ ಪರಿಮಳ ಕೂಡಾ ಇಲಿಗಳಿಗೆ ಇಷ್ಟವಾಗುವುದಿಲ್ಲ.
ಚೆಂಡು ಹೂವಿನ ಸಸ್ಯ: ಈ ಗಿಡ ಮನೆ ಮುಂದೆ ನೆಟ್ಟರೆ ಮನಸ್ಸಿಗೆ ಎಷ್ಟು ಮುದ ನೀಡುತ್ತದೆಯೋ ಅಷ್ಟೇ ಕಷ್ಟ ನೀಡುತ್ತದೆ ಇಲಿಗೀಗೆ. ಹಾಗಾಗಿ ಇಲಿಗಳನ್ನು ಓಡಿಸಲು ಈ ಗಿಡ ಅಷ್ಟೇ ಪರಿಣಾಮಕಾರಿ.
ಡ್ಯಾಫೋಡಿಲ್‌ ಗಿಡ: ಡ್ಯಾಫೋಡಿಲ್‌ ಸಸ್ಯದಿಂದ ಹೊರಹೊಮ್ಮುವ ವಾಸನೆಯು ಇಲಿಗಳನ್ನು ದೂರ ಹೋಗುವಂತೆ ಮಾಡುತ್ತದೆ. ಮನೆ ಮುಂಭಾಗದಲ್ಲಿ ಇದನ್ನು ನೆಟ್ಟರೆ ಇಲಿಗಳ ಕಾಟದಿಂದ ಮುಕ್ತಿ ಖಂಡಿತ.

Leave A Reply

Your email address will not be published.