Yogesh Operation: ಆಪರೇಷನ್ ಹಿಂದೆ ದಳಪತಿ ಶತ್ರುಪಡೆ! ಮಂಡ್ಯ ಲೋಕಾ ಗೆಲುವಿಗೆ ಇದು ಪ್ರತೀಕಾರವೇ?

Yogesh Operation: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್(C P Yogeshwar) ಅವರನ್ನು ಕಾಂಗ್ರೆಸ್‌ಗೆ(Congress) ಸೆಳೆಯುವಲ್ಲಿ ಕೃಷಿ ಸಚಿವ(Agriculutaral Minister) ಹಾಗೂ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿರುವ ಎನ್.ಚಲುವರಾಯಸ್ವಾಮಿ(N Chaluvarayaswami) ತಮ್ಮ ಆಪ್ತರನ್ನು ಮುಂದಿಟ್ಟುಕೊಂಡು ನಡೆಸಿದ ಆಪರೇಷನ್ ಹಸ್ತ(Operation congress) ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.

ದಳಪತಿ ಕುಮಾರಸ್ವಾಮಿ ಮತ್ತು ಚಲುವರಾಯಸ್ವಾಮಿ ಒಂದು ಕಾಲದ ಆಪ್ತಮಿತ್ರರು. ಪ್ರಸಕ್ತ ರಾಜಕಾರಣದಲ್ಲಿ ಕಡುವೈರಿಗಳಾಗಿ ಕಾದಾಡುತ್ತಿದ್ದಾರೆ. ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಬಹುದೊಡ್ಡ ಅಂತರದಿಂದ ಗೆದ್ದ ಕುಮಾರಸ್ವಾಮಿ ಅವರನ್ನು ಸ್ವತಃ ಅವರು ರಾಜೀನಾಮೆ ನೀಡಿ ಉಪ ಚುನಾವಣೆ ಎದುರು ಮಾಡಿರುವ ಚನ್ನಪಟ್ಟಣದಲ್ಲೇ ಹಣಿಯಬೇಕೆಂದು ಚಲುವರಾಯಸ್ವಾಮಿ ಹವಣಿಸಿದ್ದಾರೆ.

ತಮ್ಮಂತೆಯೇ ಕುಮಾರಸ್ವಾಮಿ ಅವರಿಗೆ ಬದ್ಧ ದ್ವೇಷಿಗಳಾಗಿರುವ ಮದ್ದೂರು ಶಾಸಕ ಉದಯ್, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರನ್ನು ಮುಂದಿಟ್ಟುಕೊಂಡೇ ಚಲುವರಾಯಸ್ವಾಮಿ ಆಪರೇಷನ್ ಹಸ್ತ ಕಾರ್ಯಾಚರಣೆ ರೂಪಿಸಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಪ್ತ ವಲಯ ಕೂಡಾ ಪ್ರಮುಖ ಪಾತ್ರ ವಹಿಸಿದೆ ಎನ್ನುವುದಕ್ಕೆ ಸಚಿವ ಜಮೀರ್ ಎಂಟ್ರಿಯೂ ಸಾಕ್ಷಿಯಾಗಿದೆ.

ಹೇಳಿಕೇಳಿ ಚನ್ನಪಟ್ಟಣವು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆಯ ಕ್ಷೇತ್ರ. ಡಿಕೆ ಬ್ರರ‍್ಸ್ಗೂ ಚನ್ನಪಟ್ಟಣ ಗೆದ್ದು, ತವರಿನಲ್ಲಿ ಪಾರುಪತ್ಯ ಸ್ಥಾಪಿಸಬೇಕೆನ್ನುವ ಇರಾದೆ ಇದ್ದೇ ಇತ್ತು. ಇದಕ್ಕಾಗಿಯೇ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ತೆಕ್ಕೆಗೆ ಹಾಕಿಕೊಳ್ಳುವ ವಿಚಾರದಲ್ಲಿ ಆಪರೇಷನ್ ನಡೆಸಿದ ಟೀಂನ ಸಲಹೆಗೆ ಒಪ್ಪಿಗೆ ಸೂಚಿಸಿದ್ದಾರೆ. ಇಲ್ಲಿ ಕಾಂಗ್ರೆಸ್‌ಗೆ ಚನ್ನಪಟ್ಟಣ ಗೆದ್ದು, ದಳಪತಿ ಹಣಿಯುವುದೇ ಟಾರ್ಗೆಟ್ ಅಲ್ಲದೆ ಮತ್ತಿನ್ನೇನೂ ಅಲ್ಲ.

ವಿಧಾನಸಭೆ ಚುನಾವಣೆಯಲ್ಲಿ ೧೫ ಸಾವಿರದಷ್ಟು ಮತಗಳನ್ನು ಪಡೆದು, ಠೇವಣಿ ಜಪ್ತಿ ಮಾಡಿಕೊಂಡಿದ್ದ ಕಾಂಗ್ರೆಸ್ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಮತ ಗಳಿಕೆ ಪ್ರಮಾಣವನ್ನು 85 ಸಾವಿರಕ್ಕೆ ಹೆಚ್ಚಿಸಿಕೊಂಡಿತ್ತು. ಯೋಗೇಶ್ವರ್ ಗಂಭೀರವಾಗಿ ಚುನಾವಣೆ ಮಾಡಿಲ್ಲವೆನ್ನುವುದು ಕುಮಾರಸ್ವಾಮಿ ಆರೋಪವಾಗಿದೆ. ಎನ್‌ಡಿಎ ಟಿಕೆಟ್ ಕುರಿತಂತೆಯೂ ಯೋಗೇಶ್ವರ್ ಮೇಲೆ ಅಷ್ಟೇನೂ ಆಸಕ್ತಿ ತೋರಿರಲಿಲ್ಲ. ಕಡೆಗೆ, ಬಿಜೆಪಿ ನಾಯಕರ ಕೋರಿಕೆಯಂತೆ ಜೆಡಿಎಸ್‌ನಿAದ ಸ್ಪರ್ಧೆಗೆ ಸಮ್ಮತಿಸಿದ್ದಾಗಿ ಸ್ವತಃ ಬಹಿರಂಗಪಡಿಸಿದರು.

ಒಂದೊಮ್ಮೆ ತಾವು ಜೆಡಿಎಸ್ ಅಭ್ಯರ್ಥಿಯಾದಲ್ಲಿ ಚುನಾವಣೆ ಸಂಪನ್ಮೂಲಕ್ಕೆ ತೊಂದರೆ ಎದುರಿಸಬೇಕಾಗುತ್ತದೆ. ಕುಮಾರಸ್ವಾಮಿ ಅವರು ಟಿಕೆಟ್ ಕೊಟ್ಟು, ಭಾರವನ್ನೆಲ್ಲಾ ತಮ್ಮ ಮೇಲೆಯೇ ಹೇರಬಹುದೆಂದು ಯೋಗೇಶ್ವರ್ ತಮಗೆ ಬಿಜೆಪಿ
ಚಿನ್ಹೆಯಡಿಯೇ ಟಿಕೆಟ್ ಬೇಕೆಂದು ಪಟ್ಟು ಹಿಡಿದರು. ಈ ಹಂತದಲ್ಲಿ ಜೆಡಿಎಸ್ ಪಾಳೆಯದಿಂದಲೂ ವಿರೋಧ ಎದುರಾಗಿದೆ. ಪರಿಸ್ಥಿತಿ ಲಾಭ ಪಡೆದುಕೊಂಡ ಆಪರೇಷನ್ ಹಸ್ತದ ರೂವಾರಿಗಳು ಯೋಗೇಶ್ವರ್ ಅವರನ್ನು ಸಂಪರ್ಕಿಸಿ, ಸಂಪನ್ಮೂಲ ಸಹಿತ ಬಿಗ್ ಆಫರ್‌ಗಳೊಂದಿಗೆ ಟಿಕೆಟ್ ಆಮಿಷವೊಡ್ಡಿ ಸೆಳೆಯುವಲ್ಲಿ ಸಫಲರಾಗಿದ್ದಾರೆ. ಚನ್ನಪಟ್ಟಣದ ಹಿರಿಯ ನಾಯಕ ಯೋಗೇಶ್ವರ್ ಅವರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಮೂಲಕವೇ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಅವರು ಪಕ್ಷದ ತತ್ವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಮರಳಿದ್ದಾರೆ.

ಚನ್ನಪಟ್ಟಣದಲ್ಲಿ ವಿಶೇಷ ಜನ ಬೆಂಬಲವಿರುವ ಜತೆಗೆ ರಾಜಕೀಯಕ್ಕಿಂತ ಹೆಚ್ಚಾಗಿ ಅಭಿವೃದ್ಧಿ ಕುರಿತಾಗಿಯೇ ಚಿಂತಿಸುವ ಯೋಗೇಶ್ವರ್ ಅವರ ನಿರ್ಧಾರವನ್ನು ಸ್ವಾಗತಿಸುವುದಾಗಿ ಸಚಿವ ಎನ್. ಚಲುವರಾಯಸ್ವಾಮಿ ತಮ್ಮ ಸೋಷಿಯಲ್  ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಿಜೆಪಿ ಸೇರಿ ಕ್ಷೇತ್ರದಲ್ಲಿ ನೆಲೆಯೇ ಇಲ್ಲದಿದ್ದ ಆ ಪಕ್ಷಕ್ಕೆ ನೆಲೆ ಕಲ್ಪಿಸಲು ಸಾಕಷ್ಟು ಕಾಲ ಬೆವರು ಹರಿಸಿದ್ದಾರೆ, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲೂ ಅವರ ಶ್ರಮವೂ ಇದೆ. ಆದರೆ, ನಂಬಿಸಿ ದ್ರೋಹ ಬಗೆದವರನ್ನು ತೊರೆದು ರಾಜಕೀಯವಾಗಿ ಜನ್ಮ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಆಗಮಿಸಿದ್ದಾರೆ. ಉಪ
ಚುನಾವಣೆಯಲ್ಲಿ ಅವರೇ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ಎನ್‌ಡಿಎ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ಪಕ್ಷ ದಾಖಲೆಯ ಅಂತರದ ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.