H Vishwanath: ‘ನೀವು ಎಷ್ಟೇ ಸತ್ಯ ಹರಿಶ್ಚಂದ್ರ ಎಂದು ಹೇಳಿದರೂ ಜನ ನಂಬಲು ದಡ್ಡರಲ್ಲʼ- ಹೆಚ್‌ ವಿಶ್ವನಾಥ್‌ ಸಿಎಂ ವಿರುದ್ಧ ವಾಗ್ದಾಳಿ

H Vishwanath: ಸರಕಾರಿ ಕಾರ್ಯಕ್ರಮದಲ್ಲಿ ನೀವು ಎಷ್ಟೇ ಸತ್ಯಹರಿಶ್ಚಂದ್ರ ಎಂದು ಹೇಳಿಕೊಂಡರೂ ನಂಬಲು ರಾಜ್ಯದ ಜನರು ದಡ್ಡರಲ್ಲ ಎಂದು ವಿಧಾನ ಪರಿಷತ್ಸದಸ್ಯ ಎಚ್‌. ವಿಶ್ವನಾಥ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ನಾನೊಬ್ಬ ಪ್ರಾಮಾಣಿಕ, ನನ್ನ ಹೆಸರಿನಲ್ಲಿ ಒಂದೇ ಒಂದು ಸೂರು ಇಲ್ಲ ಅಂತ ಸುಳ್ಳು ಹೇಳುತ್ತೀರಿ. ಮಗ ಮತ್ತು ಸೊಸೆಯ ಹೆಸರಿನಲ್ಲಿ ಮಾಡಿರುವ 350 ಕೋಟಿ ರೂ.ನ ಪಬ್‌ ಅನ್ನು ಭೈರತಿ ಸುರೇಶ್‌ ನೋಡಿಕೊಳ್ಳುತ್ತಿಲ್ಲವೇ ? ಆತನನ್ನು ಮೊದಲು ಒದ್ದು ಒಳಗೆ ಹಾಕಿದರೆ ಸತ್ಯ ಹೊರಗೆ ಬರುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದರು.

ಮಾತೆತ್ತಿದರೆ, ನಾನೊಬ್ಬ ಪ್ರಾಮಾಣಿಕ ಎಂದು ಪದೇ ಪದೇ ಹೇಳಿಕೊಳ್ಳುವ ನೀವು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಏನಾಯಿತು? ನಿಮಗೆ ಗೊತ್ತಿಲ್ಲವೇ? ಜೈಲಿಗೆ ಹೋಗಿ ಬಂದ ಮಾಜಿ ಸಚಿವನಿಗೆ ಮೈಸೂರು ಪೇಟ ತೊಡಿಸಿ ಸನ್ಮಾನ ಮಾಡುತ್ತೀರಿ ಎಂದು ನಿಮಗೆ ನಾಚಿಕೆ ಆಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಮಾಡಿದ್ದಾರೆ.

Leave A Reply

Your email address will not be published.