Lawyer Jagadish: ಬಿಗ್ ಬಾಸ್ ನ ಲಾಯರ್ ಜಗದೀಶ್ ಫ್ಯಾನ್ಸ್ಗೆ ಗುಡ್ ನ್ಯೂಸ್! ಕಲರ್ಸ್ ಶೋಗೆ ಮತ್ತೆ ಮರಳಿದ ಜಗದೀಶ್
Lawyer Jagadish: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿ ಆಗಿರುವ ಲಾಯರ್ ಜಗದೀಶ್ ಕೇವಲ 2ವಾರ ಕಳೆಯುವಷ್ಟರಲ್ಲಿ ಬಿಗ್ ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿ ಮನೆಯಿಂದ ಹೊರ ಬಂದಿದ್ದಾರೆ. ಆದ್ರೆ ಬಿಗ್ ಮನೆಯಲ್ಲಿ ಲಾಯರ್ ಜಗದೀಶ್ (Lawyer Jagadish) ಹವಾ ತುಂಬಾ ಜೋರಾಗಿಯೇ ಇತ್ತು. ದೊಡ್ಮನೆ ಎಲ್ಲಾ ಆಟಗಾರರನ್ನು ಖುಷಿ ಪಡಿಸುವಲ್ಲಿ ಮತ್ತು ಟ್ರಿಗರ್ ಮಾಡುವರಲ್ಲಿ ಎತ್ತಿದ ಕೈ ಅವರದಾಗಿತ್ತು.
ಆದ್ರೆ ಬಿಗ್ ಬಾಸ್ ಮನೆಯಿಂದ ಜಗದೀಶ್ ಹೊರ ಹೋಗಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಜಗದೀಶ್ ಅವರನ್ನು ಮರಳಿ ಕರೆಸಬೇಕು ಎನ್ನುವ ಆಗ್ರಹ ಕೂಡಾ ಬಿಗ್ ಬಾಸ್ನಲ್ಲಿ ಜೋರಾಗಿದೆ. ಹೀಗಿರುವಾಗಲೇ ಜಗದೀಶ್ ಅವರು ಕಲರ್ಸ್ ಕನ್ನಡದ ಶೋಗೆ ಅತಿಥಿಯಾಗಿ ಬಂದಿದ್ದಾರೆ. ಹೌದು, ಕಲರ್ಸ್ನ ‘ಸಚಿರುಚಿ ಸೀಸನ್ 3’ ಶೋಗೆ ಶೆಫ್ ಆಗಿ ಜಗದೀಶ್ ಬಂದಿದ್ದಾರೆ.
ಈ ಸಚಿರುಚಿ ಸೀಸನ್ 3 ನಲ್ಲಿ ಜಗದೀಶ್ ಅವರು ಅಡುಗೆ ಮಾಡುವುದನ್ನು ತೋರಿಸಲಾಗಿದೆ. ಆ್ಯಂಕರ್ ಜಾಹ್ನವಿ ಅವರು ಜಗದೀಶ್ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಲ್ಲಿ ಹೈಲೈಟ್ ಆಗಿದ್ದು ‘ಹಂಸ ಮೇಲೆ ನಿಮಗೆ ಕ್ರಶ್’ ಆಗಿತ್ತಾ ಎಂಬುದು. ಇದಕ್ಕೆ ಜಗದೀಶ್ ಅವರು ನಕ್ಕಿದ್ದಾರೆ. ಜಗದೀಶ್ ಅವರು ನಗುವಿನಲ್ಲೇ ಜನರಿಗೆ ಉತ್ತರ ಸಿಕ್ಕಿದೆ.
ಆದ್ರೆ ಬಿಗ್ ಬಾಸ್ ಶೋ ಮಾತ್ರ ಜಗದೀಶ್ ಪಾಲಿಗೆ ಜಗದೀಶ್ ಮುಗಿದ ಅಧ್ಯಾಯ. ಯಾಕೆಂದರೆ ಹಾಗೆ ಕರೆಸೋದಾದರೆ ಹುಚ್ಚ ವೆಂಕಟ್ ಅವರನ್ನೂ ಕರೆಸಬೇಕಾಗುತ್ತದೆ’ ಎಂದು ಸುದೀಪ್ ಹೇಳಿದ್ದರು. ಈ ಮೂಲಕ ಜಗದೀಶ್ ಅವರನ್ನು ಮರಳಿ ಶೋಗೆ ಕರೆಸೋದೇ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.