Shilpa Ganesh: ತುಳು ಚಿತ್ರರಂಗಕ್ಕೆ ಗೋಲ್ಡನ್‌ ಸ್ಟಾರ್‌ ಪತ್ನಿ ಶಿಲ್ಪಾ ಗಣೇಶ್‌ ಎಂಟ್ರಿ

Share the Article

Shilpa Ganesh: ಗೋಲ್ಡನ್‌ ಸ್ಟಾರ್‌ ಗಣೇಶ್‌ ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಇವರ ಪತ್ನಿ ಶಿಲ್ಪಾ ಗಣೇಶ್‌ ಇದೀಗ ತುಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ನಟಿಯಾಗಿ ಅಲ್ಲ ನಿರ್ಮಾಪಕಿಯಾಗಿ. ಮೂಲತಃ ಮಂಗಳೂರು ಮೂಲದವರಾದ ಶಿಲ್ಪಾ ಗಣೇಶ್‌ ಅವರು ತಮ್ಮ ತವರಿನಲ್ಲಿ ಸಿನಿಮಾ ಮಾಡುವ ಹಂಬಲದಲ್ಲಿದ್ದಾರೆ.

ಉತ್ತಮ ಬಜೆಟ್‌ನಲ್ಲಿ ಗುಣಮಟ್ಟದ ಸಿನಿಮಾ ನಿರ್ಮಾಣ ಮಾಡುವ ಉದ್ದೇಶ ಹೊಂದಿರುವ ಶಿಲ್ಪಾ ಅವರು ಒಂದು ಒಳ್ಳೆಯ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಈ ಸಿನಿಮಾವನ್ನು ಸಂದೀಪ್‌ ಬೆದ್ರ ಅವರು ನಿರ್ದೇಶನ ಮಾಡಲಿದ್ದಾರೆ. ಕತೆ, ಚಿತ್ರಕತೆಯನ್ನು ಮೋಹನ್‌ ಭಟ್ಕಳ್‌ ಬರೆದಿದ್ದಾರೆ. ಸಂತೋಷ್‌ ರೈ ಪಾತಾಜೆ ಕ್ಯಾಮೆರಾಮನ್‌ ಆಗಿ ಕೆಲಸ ಮಾಡಲಿದ್ದಾರೆ.

ಹರಿಕೃಷ್ಣ ಬಂಟ್ವಾಳ (ಬಿಜೆಪಿ ಹಾಗೂ ಬಿಲ್ಲವ ಸಮುದಾಯದ ಮುಖಂಡರು) ಅವರ ಪುತ್ರ ನಿತ್ಯ ಪ್ರಕಾಶ್‌ ಬಂಟ್ವಾಳ ಸಿನಿಮಾದ ನಾಯಕನಾಗಿ ಮಿಂಚಲಿದ್ದಾರೆ. ನಾಯಕಿ ಪಾತ್ರಕ್ಕೆ ಹೊಸ ಮುಖವನ್ನು ಪರಿಚಯ ಮಾಡಲಿದ್ದಾರೆ ಶಿಲ್ಪಾ ಗಣೇಶ್‌.

ಸಿನಿಮಾದ ಚಿತ್ರೀಕರಣ ಡಿಸೆಂಬರ್‌ ತಿಂಗಳಲ್ಲಿ ಪ್ರಾರಂಭವಾಗಲಿದೆ. ಈ ಸಿನಿಮಾದಲ್ಲಿ ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅತಿಥಿ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕೌಟುಂಬಿಕ ಕತೆ ಒಳಗೊಂಡಿರುವ ಈ ಸಿನಿಮಾವು ಹಾಸ್ಯ ಪ್ರಧಾನ ಒಳಗೊಂಸಿದೆ. ಉಡುಪಿ, ಮೂಡುಬಿದಿರೆ, ಬಂಟ್ವಾಳ ಸೇರಿ ಕರಾವಳಿ ಭಾಗದಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ.

Leave A Reply