Shirt Collar stains: ಶರ್ಟ್ ಕಾಲರ್ ನಲ್ಲಿ ಅಂಟಿರುವ ಬೆವರಿನ ಜಿಡ್ಡನ್ನು ಒಂದೇ ನಿಮಿಷದಲ್ಲಿ ಈ ರೀತಿ ತೆಗೆಯಲು ಸಾಧ್ಯ!
Shirt Collar stains: ಶರ್ಟ್ ಕಾಲರ್ ನಲ್ಲಿ ಬೆವರಿನ ಜಿಡ್ಡು ಅಂಟಿಕೊಂಡರೆ ಹರಾಸಾಹಸ ಪಟ್ಟು ಉಜ್ಜಿದರು ಕಾಲರ್ ಸವೆದು ಹೋಗುವುದೇ ಹೊರತು ಬೆವರಿನ ಕಲೆ ಹೋಗಲ್ಲ ಅನ್ನೋರಿಗೆ ಇಲ್ಲಿದೆ ಸೂಪರ್ ಟಿಪ್ಸ್.
ಹೌದು, ಶರ್ಟ್ ಕಾಲರ್ ಸವೆಯದಂತೆ, ಕಾಲರ್ ಬಳಿಯ ಬಣ್ಣ ಕೂಡಾ ಮಾಸದೆ ಸುಲಭವಾಗಿ ಕಾಲರ್ ಕಲೆಯನ್ನು ಅನ್ನು ತೆಗೆದು ಹಾಕಲು ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ.
ಬೇಕಿಂಗ್ ಸೋಡಾ ಮತ್ತು ವಾಟರ್ ಪೇಸ್ಟ್:
ಸ್ವಲ್ಪ ನೀರಿನೊಂದಿಗೆ 2-3 ಚಮಚ ಅಡಿಗೆ ಸೋಡಾವನ್ನು ಬೆರೆಸಿ ಪೇಸ್ಟ್ ತಯಾರಿಸಿ ಶರ್ಟ್‌ನ ಕಾಲರ್‌ನಲ್ಲಿರುವ ಬೆವರು ಕಲೆಗಳ ಮೇಲೆ ಈ ಪೇಸ್ಟ್ ಅನ್ನು ಹಚ್ಚಿ 30 ನಿಮಿಷಗಳ ಹಾಗೆಯೇ ಬಿಡಬೇಕು.ನಂತರ, ಸಾಮಾನ್ಯ ನೀರಿನಿಂದ ಶರ್ಟ್ ಅನ್ನು ನಿಧಾನವಾಗಿ ಉಜ್ಜಿ ತೊಳೆಯಬೇಕು. ಹೀಗೆ ಮಾಡಿದರೆ ಕಲೆ ಮಾಯವಾಗುತ್ತದೆ.
ಬಿಳಿ ವಿನೆಗರ್ ಮತ್ತು ನೀರು :
ಎರಡು ಚಮಚ ನೀರಿನಲ್ಲಿ ಒಂದು ಚಮಚ ಬಿಳಿ ವಿನೆಗರ್ ಅನ್ನು ಮಿಶ್ರಣ ಮಾಡಿ ಕಲೆ ಇರುವ ಜಾಗಕ್ಕೆ ಹಚ್ಚಿ, 20-30 ನಿಮಿಷಗಳ ಕಾಲ ಬಿಡಿ. ಇದರ ನಂತರ ಸಾಮಾನ್ಯ ಸೋಪ್ ಅಥವಾ ಡಿಟರ್ಜೆಂಟ್ ನಿಂದ ಶರ್ಟ್ ಅನ್ನು ತೊಳೆಯಿರಿ.
ನಿಂಬೆ ರಸ ಮತ್ತು ಉಪ್ಪು :
ಶರ್ಟ್‌ನ ಕಾಲರ್‌ಗೆ ನಿಂಬೆ ರಸವನ್ನು ಹಚ್ಚಿ ಅದರ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ. ಸ್ವಲ್ಪ ಸಮಯ ಬಿಟ್ಟು ನಂತರ ಮೆಲ್ಲಗೆ ಕೈಗಳಿಂದ ಉಜ್ಜಿ. ನಂತರ ಶರ್ಟ್ ಅನ್ನು ತೊಳೆಯಿರಿ.
ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಡಿಟರ್ಜೆಂಟ್ :
ಒಂದು ಭಾಗ ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಒಂದು ಭಾಗ ಡಿಟರ್ಜೆಂಟ್ ಮಿಶ್ರಣ ಮಾಡಿ ಮತ್ತು ಅದನ್ನು ಕಲೆಯಿರುವ ಜಾಗಕ್ಕೆ ಹಚ್ಚಿ, 15-20 ನಿಮಿಷಗಳ ಕಾಲ ಬಿಡಬೇಕು. ನಂತರ ಶರ್ಟ್ ಅನ್ನು ತೊಳೆಯಬೇಕು. ಹೀಗೆ ಮಾಡಿದಲ್ಲಿ ಎಷ್ಟೇ ಕಲೆಯಾಗಿದ್ದರೂ ಸುಲಭವಾಗಿ ಹೋಗುತ್ತೆ.