Bengaluru: ‘ಪ್ಲೀಸ್.. ಪೋಸ್ಟ್ ಮಾರ್ಟಂ ಮಾಡ್ಬೇಡಿ, ಇನ್ವೇಸ್ಟಿಗೇಶನ್ ನಡೆಸ್ಬೇಡಿ’ – ಪತ್ರ ಬರೆದಿಟ್ಟು ಯುವತಿ ಆತ್ಮಹತ್ಯೆ !!

Bengaluru: ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ನಾನು ಸತ್ತ ಬಳಿಕ ನನ್ನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಬಾರದು ಹಾಗೂ ಯಾವುದೇ ತನಿಖೆ ನಡೆಸಬಾರದು ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ(Bengaluru) ಪ್ರಶಾಂತ್‌ ಲೇಔಟ್‌ ನಲ್ಲಿರುವ ಪಿಜಿ ಯೊಂದರಲ್ಲಿ ನಡೆದಿದೆ. ಮೃತ ಯುವತಿ ಗೌತಮಿ (25). ಆಂಧ್ರಪ್ರದೇಶದ(AP) ಕಡಪಾ ಮೂಲದ ಗೌತಮಿ(Kadapa) ಐಟಿ ಕಂಪನಿಯೊಂದರಲ್ಲಿ ಡೆವಲಪರ್‌ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ಸಂಜೆ ಕೆಲಸದಿಂದ ಮರಳಿದ ಬಳಿಕ ಪತ್ರ ಬರೆದಿಟ್ಟು ಐದನೇ ಮಹಡಿಯಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್​ನೋಟ್​ನಲ್ಲಿ ಏನಿದೆ? ಯುವತಿ ಆತ್ಮಹತ್ಯೆ ಮಾಡಿಕೊಳ್ಳು ಮುನ್ನ ಡೆತ್‌ನೋಟ್​ ಬರೆದಿಟ್ಟಿದ್ದು, ‘ನನ್ನ ಮೃತ ದೇಹವನ್ನು ಪಿಎಂ(ಪೋಸ್ಟ್​ ಮಾರ್ಟಂ) ಮಾಡಬೇಡಿ. ಯಾವುದೇ ರೀತಿಯ ತನಿಖೆ ಸಹ ನಡೆಸಬೇಡಿ. ನನ್ನ ಪೋಷಕರಿಗೆ‌ ನನ್ನ ಮೃತ ದೇಹ ನೀಡಿ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೌತಮಿಯ ಪೋಷಕರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಆಕೆಯ ಮೃತದೇಹವನ್ನು ಹಸ್ತಾಂತರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವೈಟ್‌ ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

1 Comment
  1. slot gacor says

    Daftar sekarang resmi situs disitus slot Terpercaya

Leave A Reply

Your email address will not be published.