Kerala: ಪ್ರಾಣ ಉಳಿಸಲೆಂದೇ ಇರುವ ಏರ್‌ಬ್ಯಾಗ್‌ನಿಂದ 2 ವರ್ಷದ ಮಗು ದಾರುಣ ಸಾವು

Kerala: ಪ್ರಯಾಣಿಕರ ಪ್ರಾಣ ಉಳಿಸಲೆಂದು ಇರುವ ಏರ್‌ಬ್ಯಾಗ್‌ ಮಗುವೊಂದರ ಜೀವ ತೆಗೆದಿರುವ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಕಾರೊಂದು ಅಪಘಾತಕ್ಕೀಡಾಗಿದ್ದು, ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಏರ್‌ಬ್ಯಾಗ್‌ ತೆರೆದಿದ್ದು, ಉಸಿರುಗಟ್ಟಿ ಎರಡು ವರ್ಷದ ಮಗು ಸಾವಿಗೀಡಾಗಿದೆ.

 

ಈ ಘಟನೆ ಶುಕ್ರವಾರ ನಡೆದಿದೆ. ತನ್ನ ಕುಟುಂಬದವರೊಂದಿಗೆ ಕೊಟ್ಟಕ್ಕಲ್‌-ಪಡಪರಂಬು ಪ್ರದೇಶದ ಮೂಲಕ ಹಾದು ಹೋಗುತ್ತಿದ್ದ ಸಂದರ್ಭದಲ್ಲಿ ಕಾರು ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಏರ್‌ಬ್ಯಾಗ್‌ ತಕ್ಷಣವೇ ಓಪನ್‌ ಆಗಿದೆ. ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ತಾಯಿಯ ಮಡಿಲಿನಲ್ಲಿ ಇದ್ದ ಮಗುವಿನ ಮುಖಕ್ಕೆ ಏರ್‌ಬ್ಯಾಗ್‌ ಒತ್ತಿರುವ ಕಾರಣ ಮಗು ಉಸಿರುಗಟ್ಟಿ ಸಾವಿಗೀಡಾಗಿದೆ.

ಈ ದುರ್ಘಟನೆಯಲ್ಲಿ ತಾಯಿ ಸೇರಿ ಇತರ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.