Praveen Nettar murder Case: ಬೆಳ್ಳಾರೆ ಮಸೀದಿಯಲ್ಲಿ ಭಯೋತ್ಪದನಾ ಚಟುವಟಿಕೆ: ಪ್ರವೀಣ್‌ ನೆಟ್ಟಾರ್‌ ಕೊಲೆಗೆ ಸ್ಕೆಚ್‌ ಹಾಕಿದ್ದೇ ಇಲ್ಲಿ: ಪೋಸ್ಟ್ ವೈರಲ್

Praveen Nettar murder Case: ಸುಳ್ಯ(Sulia) ತಾಲೂಕು ಬೆಳ್ಳಾರೆಯ ಯುವ ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರ್‌(Praveen Nettar) ಕೊಲೆ ಪ್ರಕರಣ(Murder case) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆದರೆ ಈವರೆಗೆ ಕೊಲೆ ಆರೋಪಿಗಳು ಯಾರೆಂದು ಪತ್ತೆಯಾಗಿಲ್ಲ. ಕೆಲವು ಮಂದಿಯನ್ನು ಬಂಧನ ಮಾಡಲಾಯ್ತಾದರು ಅದಕ್ಕೆ ಇನ್ನು ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಇದೀಗ ಸ್ವತಃ ಮುಸಲ್ಮಾನ ವ್ಯಕ್ತಿಯೊಬ್ಬರು ಬೆಳ್ಳಾರೆ ಮಸೀದಿಯಲ್ಲಿ ಭಯೋತ್ಪಾದಕ(Terrorism) ಚಟುವಟಿಕೆ ನಡೆಯುತ್ತಿದೆ. ಪ್ರವೀಣ್‌ ನೆಟ್ಟಾರ್‌ ಕೊಲೆಗೆ ಇಲ್ಲೆ ಮೊದಲು ಸ್ಕೆಚ್‌ ಹಾಕಿದ್ದು ಎಂದು ಸ್ಫೋಟಕ ಬರಹವೊಂದನ್ನು ತಮ್ಮ ಫೇಸ್‌ಬುಕ್‌(Face book) ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬೆಳ್ಳಾರೆಯ ಝಕರಿಯಾ ಜುಮಾ ಮಸೀದಿ ಮತ್ತು SKSSF ವಿಖಾಯ ಕಾರ್ಯಕರ್ತರಾದ ಅಝರ್ ಹಾಗೂ ಜಮಾಲ್ ಅವರಿಬ್ಬರ ಮೇಲೆ ಸಲಫಿ ನಾಯಕ ಇಬ್ರಾಹಿಂ ಖಲೀಲ್ ಸಮಹಾದಿ ಎಂಬವರು ಉಗ್ರವಾದ ಭಯೋತ್ಪಾದನೆ ಆರೋಪ ಹೊರಿಸಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದೀಗ ಈ ಪೋಸ್ಟ್ ಪ್ರವೀಣ್‌ ನೆಟ್ಟಾರ್‌ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ನೀಡಿದೆ. ಅಲ್ಲದೆ ಈ ಬಗ್ಗೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಇಬ್ರಾಹಿಂ ಖಲೀಲ್ ಸಮಹಾದಿ ತನ್ನ ಫೇಸ್ಟುಕ್ ಖಾತೆಯಲ್ಲಿ ‘ಪ್ರವೀಣ್ ನೆಟ್ಟಾರು ಕೊಲೆ ಮಾಡಲು ಮೊತ್ತ ಮೊದಲು ಬೆಳ್ಳಾರೆ ಝಕರಿಯಾ ಮಸ್ಟಿದ್ ವಠಾರದಲ್ಲಿ ಮಾತಕತೆ ನಡೆದಿದೆ. ಅದನ್ನು ಮಾಡಿದವರು Jamalks Bellare ಮತ್ತು Azaruddin bellare ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ನಾನು ಎಲ್ಲಿ ಬೇಕಾದ್ರೂ ಹೇಳಲು ತಯಾರಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಹಾಗೆ ಈ ಬಗ್ಗೆ ಖಾಸಗಿ ಚಾನೆಲ್‌ ವರದಿಗಾರರೊಬ್ಬರು ಕಾಲ್ ಮಾಡಿದಾಗ ಸಂಪೂರ್ಣ ಘಟನೆ ಬಗ್ಗೆ ಮಾಹಿತಿ ನೀಡಿದ್ದೇನೆ. ಅವರಲ್ಲಿ ನಾನು ಸತ್ಯ ಹೇಳಿರುತ್ತೇನೆ. ಸತ್ಯ ಹೇಳಲು ಭಯಪಡಬೇಕಾಗಿಲ್ಲಿ. ಎಲ್ಲಿ ಬೇಕಾದರು ಬಂದು ಹೇಳುತ್ತೇನೆ. ಈ ಇಬ್ಬರನ್ನು ಮತ್ತು ಮಸ್ಜಿದ್ ಅಧ್ಯಕ್ಷರು ಮಂಗಳ ವಾ ಇಲ್ಲ ಸುಮಂಗಲವಾ.. ಅವರು ಯಾರೇ ಆಗಲಿ ಕೋರ್ಟ್ ಹತ್ತಿಸಿಯೇ ತೀರುವೆನು. ಬೆಳ್ಳಾರೆಯಾ ಕೇಂದ್ರ ಮಸ್ಟಿದ್ ನಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ ಎಂದು ಘಂಟಾಗೋಷವಾಗಿ ಬರೆದುಕೊಂಡಿದ್ದಾರೆ.

ಅಲ್ಲದೆ ಇದನ್ನು ನಾವೆಲ್ಲರೂ ಸೇರಿ ಚಿಗುರಲು ಬಿಡಬಾರದು. ಮೊಳೆಯಲ್ಲೇ ಚಿವುಟಿ ಹಾಕಬೇಕು..’ ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಪೋಸ್ಟ್‌ನ್ನು ಮಾಡಿದ ವ್ಯಕ್ತಿ ಇದ್ದಾರೋ ಅಥವಾ ಯಾರಾದರು ಫೇಕ್‌ ಐಡಿ ಮಾಡಿ ಪೋಸ್ಟ್‌ ಮಾಡಿದ್ದಾರೋ ಅನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಾಗಿದೆ.

Leave A Reply

Your email address will not be published.