Viral Video: ‘100 ಕೋಟಿ ಜನರೇ.. ದನದ ಮಾಂಸ ಬೆರೆಸಿದ ಲಡ್ಡೂಗಳನ್ನು ತಿಂದಿದ್ದೀರಿ, ಈಗ ಮಜಾ ಬಂತಾ ?’ – ಕಾಂಗ್ರೆಸ್ ಬೆಂಬಲಿಗನಿಂದ ಹಿಂದೂಗಳ ಲೇವಡಿ !!

Share the Article

Viral Video: ತಿರುಪತಿ ಲಡ್ಡು(Tirupati Laddu) ವಿವಾದ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ನೂರಾರು ಕೋಟಿ ಜನರು ನಂಬುವ ಬಾಲಾಜಿ ಕ್ಷೇತ್ರದಲ್ಲಿ ಇಂತಹ ಒಂದು ದುರ್ಘಟನೆ ನಡೆದೆರುವುದು ನಿಜಕ್ಕೂ ಭಕ್ತಾದಿಗಳಿಗೆ ನೋವುಂಟುಮಾಡಿದೆ. ಈ ಕುರಿತು ಇದೀಗ ತನಿಖೆ ನಡೆಯುತ್ತಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಬೆಂಬಲಿತನೊಬ್ಬ ಈ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂಗಳ ಭಾವನಗೆ ನೋವುಂಟಾಗುವಂತ ಹೇಳಿಕೆ ನೀಡಿ, ಲೇವಡಿ ಮಾಡಿ ವಿಡಿಯೋ ಹರಿಬಿಟ್ಟಿದ್ದಾನೆ.

ಹೌದು, ಕಾಂಗ್ರೆಸ್ ಬೆಂಬಲಿಗ ಪಿಯೂಷ್ ಮಾನುಷ(Piyush Manusha) ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ ಹಿಂದೂಗಳ ಅಪಹಾಸ್ಯ ಮಾಡಿದ್ದಾರೆ. ಇದರಲ್ಲಿ ಆತ 100 ಕೋಟಿ ಜನರೇ.. ದನದ ಮಾಂಸ ಬೆರೆಸಿದ ಲಡ್ಡೂಗಳನ್ನು ತಿಂದಿದ್ದೀರಿ, ಈಗ ನಿಮಗೆ ಮಜಾ ಬಂತಾ ?’ ಎಂದು ಪ್ರಶ್ನಿಸಿ ಹಿಂದೂಗಳನ್ನು ಲೇವಡಿ ಮಾಡಿದ್ದನ್ನು ಕಾಣಬಹುದು.

ಇಷ್ಟೇ ಅಲ್ಲದೆ ಆತ ‘ಇಷ್ಟು ದಿನ ನೀವು ಬೇರೆಯವರ ತಟ್ಟೆಗಳಲ್ಲಿ ‘ಅವರು ದನದ ಮಾಂಸ ತಿನ್ನುತ್ತಾರೋ ಇಲ್ಲವೋ’ ಎಂದು ನೋಡುತ್ತಿದ್ದಿರಿ. ನೀವು ಅವರ ಊಟದ ಡಬ್ಬಿಗಳನ್ನು ಪರಿಶೀಲಿಸಿದ್ದೀರಿ, ನೀವು ಅವರ ಫ್ರಿಜ್ ಪರಿಶೀಲಿಸಿದ್ದೀರಿ. ನೀವು ಅವರಿಗೆ ಹೊಡೆದಿದ್ದೀರಿ. ಇಲ್ಲಿಯವರೆಗೆ ಕನಿಷ್ಠ 100 ಕೋಟಿ ಜನರು ತಿರುಪತಿಗೆ ಹೋಗಿರಬೇಕು. ಅವರಿಗೆ ಲಡ್ಡು ಸಿಕ್ಕಿರಬಹುದು ಏನಾಯಿತು? ಈಗ ನಿಮಗೆ ಗೋಮಾಂಸ ಇಷ್ಟವಾಯಿತೇ ? ನಿಮಗೆ ಮಜಾ ಬಂತೇ? ನಿಮ್ಮ ಕೆಲಸ ಮುಗಿಯಿತು. ಕನಿಷ್ಟ ಪಕ್ಷ ಈಗಲಾದರೂ ಇತರರ ತಟ್ಟೆಗಳನ್ನು ನೋಡಬೇಡಿ. ನಿಮ್ಮ ಕೆಲಸ ಮಾಡಿರಿ ಎಂದು ಹೇಳಿ ವಿಡಿಯೋ ಹರಿಬಿಟ್ಟಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಭಾರೀ ಆಕ್ರೋಶ ಕೇಳಿಬರುತ್ತಿದೆ.

Leave A Reply