Pomegranate crop: ದಾಳಿಂಬೆ ಬೆಳೆ ನಿರ್ವಹಣೆ ಹೇಗೆ? ಒಂದಷ್ಟು ಸಲಹೆಗಳು
Pomegranate crop: ದಾಳಿಂಬೆ(Pomegranate) ರೈತರ(Farmer) ಪ್ರಮುಖವಾದ ತೋಟಗಾರಿಕೆ ವಾಣಿಜ್ಯ ಬೆಳೆಯಾಗಿದ್ದು(Commercial crop), ಈ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
– ದಾಳಿಂಬೆಯಲ್ಲಿ ಒಂದು ಮುಖ್ಯ ರೆಂಬೆ ಹಾಗೂ ಉಪರೆಂಬೆಗಳು ಎಲ್ಲ ದಿಕ್ಕುಗಳಲ್ಲಿ ಹರಡಿರುವಂತೆ ಆಕಾರ ಕೊಟ್ಟು ಜುಲೈನಲ್ಲಿ ಚಾಟನಿ ಮಾಡಬೇಕು.
– ಪ್ರತಿ ವರ್ಷ 400:200:200 ಗ್ರಾಂ. ಸಾರಜನಕ, ರಂಜಕ, ಪೋಟ್ಯಾಷ್ ಗೊಬ್ಬರವನ್ನು ಕೊಡುವುದರಿಂದ, ಗಿಡಗಳು ಉತ್ತಮ ಇಳುವರಿ ಕೊಡುತ್ತವೆ.
– ಸೆಪ್ಟೆಂಬರ್ ಮೊದಲ ವಾರದಲ್ಲಿ ಮಣ್ಣಿನ ತೇವಾಂಶವು , a 2.5 2 ದ್ರಾವಣವನ್ನು ಗಿಡಗಳಿಗೆ ಸಿಂಪಡಿಸುವುದರಿಂದ ದಾಳಿಂಬೆ ಇಳುವರಿ ಹೆಚ್ಚಾಗುತ್ತದೆ.
– ದಾಳಿಂಬೆ ಗಿಡಗಳ ನಡುವಿನ ಜಾಗದಲ್ಲಿ ಅಂತರ ಬೇಸಾಯ ಮಾಡಬಹುದು.
– ಪಾತಿಯಲ್ಲಿ ಬೆಳೆದ ಕಸವನ್ನು ಕೈಯಿಂದ ತೆಗೆದು, ಪಾತಿಗೆ ತೋಟದ ಸಸ್ಯ ತಾಜ್ಯಗಳನ್ನು ಹೊದಿಕೆಯಾಗಿ ಹಾಕಿ ಕಳೆ ನಿರ್ವಹಣೆ ಮಾಡಬಹುದಾಗಿದೆ.