Soil salinity: ಕೃಷಿಯಲ್ಲಿ ಮಣ್ಣಿನ ರಸಸಾರದ ಮಹತ್ವ ಏನು? ಮಣ್ಣಿನ ರಸಸಾರ ಸರಿಪಡಿಸೋದು ಹೇಗೆ?

Soil salinity: ಕೃಷಿಯಲ್ಲಿ(Agriculture) ಮಣ್ಣಿನ ರಸಸಾರ ಒಂದು ಪ್ರಮುಖ ಅಂಶವಾಗಿದೆ. ಇದು ಸಸ್ಯಗಳಿಂದ(Plant) ಅಗತ್ಯವಾದ ಪೋಷಕಾಂಶಗಳ(Nutrition) ಲಭ್ಯತೆ ಮತ್ತು ಹೀರಿಕೊಳ್ಳುವಿಕೆಯನ್ನು ನಿರ್ಧರಿಸುತ್ತದೆ. ಕೃಷಿಯಲ್ಲಿ ಮಣ್ಣಿನ ರಸಸಾರ ಸರಿಪಡಿಸಲು ಅನುಸರಿಸಬೇಕಾದ ಮಾರ್ಗೊಪಾಯಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.

 

ಪೋಷಕಾಂಶಗಳ ಲಭ್ಯತೆ: ಮಣ್ಣಿನ ರಸಸಾರ ನೈಟ್ರೋಜನ್, ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಸೂಕ್ಷ್ಮ ಪೋಷಕಾಂಶಗಳಂತಹ ವಿವಿಧ ಪೋಷಕಾಂಶಗಳ ಕರಗುವಿಕೆ ಮತ್ತು ಲಭ್ಯತೆಯ ಮೇಲೆ ಪ್ರಭಾವ ಬೀರುತ್ತದೆ. ಕಡಿಮೆ ರಸಸಾರ ಎಂದರೆ ಆಮ್ಲಯ ಮಣ್ಣಿನಲ್ಲಿ, ಪೋಷಕಾಂಶಗಳು ಕಡಿಮೆ ಲಭ್ಯವಿದ್ದರೆ, ಇತರೆ ಹೆಚ್ಚು ಲಭ್ಯವಾಗುತ್ತವೆ. ಅಲ್ಲದೆ, ಹೆಚ್ಚಿನ ರಸಸಾರ ಎಂದರೆ ಕ್ಷಾರೀಯ ಮಣ್ಣಿನಲ್ಲಿ, ಕೆಲವು ಪೋಷಕಾಂಶಗಳ ಲಭ್ಯತೆ ಕಡಿಮೆಯಾಗಬಹುದು.

ಬೆಳೆ ಬೆಳವಣಿಗೆ ಮತ್ತು ಇಳುವರಿ: ವಿವಿಧ ಬೆಳೆಗಳಿಗೆ ವಿಭಿನ್ನ ಮಣ್ಣಿನ ರಸಸಾರ ಅಗತ್ಯವಿರುತ್ತದೆ. ಉದಾಹರಣೆಗೆ ಸಿಟ್ರಸ್ ಹಣ್ಣಗಳಿಗೆ ಸ್ವಲ್ಪ ಕ್ಷಾರೀಯ ಮಣ್ಣು ಬೇಕಾಗುತ್ತದೆ, ಆದರೆ ಬಾಳೆಹಣ್ಣಿನ ಬೆಳೆಗೆ ಸ್ವಲ್ಪ ಕ್ಷಾರೀಯದಿಂದ ಸ್ವಲ್ಪ ಆಮ್ಮಿಯ ಮಣ್ಣಿನ ಅಗತ್ಯವಿರುತ್ತದೆ. ಆದ್ದರಿಂದ ಬೆಳೆಗಳ ಅವಶ್ಯಕತೆಗೆ ಅನುಗುಣವಾಗಿ ಮಣ್ಣಿನ ರಸಸಾರವನ್ನು ಕಾಪಾಡಿಕೊಳ್ಳುವುದು ಆರೋಗ್ಯಕರ ಬೆಳೆ ಬೆಳವಣಿಗೆ ಮತ್ತು ಗರಿಷ್ಠ ಇಳುವರಿಗಾಗಿ ಮುಖ್ಯವಾಗಿದೆ.

ಸೂಕ್ಷ್ಮಜೀವಿಗಳು: ಮಣ್ಣಿನ ರಸಸಾರ ಮಣ್ಣಿನ ಸೂಕ್ಷ್ಮಜೀವಿಗಳು ಮತ್ತು ಅವುಗಳ ವೈವಿಧ್ಯತೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸೂಕ್ಷ್ಮ ಜೀವಿಗಳು ಪೋಷಕಾಂಶಗಳ ಸೈಕ್ಲಿಂಗ್, ಸಾವಯವ ಪದಾರ್ಥಗಳ ವಿಭಜನೆ ಮತ್ತು ರೋಗ ನಿಯಂತ್ರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಆದ್ದರಿಂದ ಸರಿಯಾದ ಮಣ್ಣಿನ ರಸಸಾರವನ್ನು ಕಾಪಾಡಿಕೊಳ್ಳುವುದು ಅವಶ್ಯವಾಗಿದೆ.

ಮಣ್ಣಿನ ರಚನೆ: ಮಣ್ಣಿನ ರಸಸಾರ ರಚನೆ ಮಣ್ಣಿನ ಗುಣಲಕ್ಷಣಗಳ ಮೇಲೆ ಪ್ರಭಾವ ಬೀರಬಹುದು. ಆಮ್ಮಿಯ ಮಣ್ಣುಗಳು ಅಲ್ಯೂಮಿನಿಯಂ ಮತ್ತು ಕಬ್ಬಿಣದ ಸಾಂದ್ರತೆಯನ್ನು ಹೆಚ್ಚಿಸಬಹುದು, ಇದು ಮಣ್ಣಿನ ಸಂಕೋಚನಕ್ಕೆ ಕಾರಣವಾಗಬಹುದು. ಮಣ್ಣಿನ ರಸಸಾರನ ಸರಿಯಾದ ನಿರ್ವಹಣೆ ಮಣ್ಣಿನ ರಚನೆ ಸುಧಾರಿಸುತ್ತದೆ.

ಮಣ್ಣಿನ ರಸಸಾರವನ್ನು ರಸಸಾರ ಮೀಟರ್ ಬಳಸಿ ಅಥವಾ ಮಣ್ಣಿನ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸುವ ಮೂಲಕ ಅಳೆಯಬಹುದಾಗಿದೆ.

5 Comments
  1. MichaelLiemo says

    ventolin pharmacy: Ventolin inhaler best price – buy ventolin tablets uk
    order ventolin

  2. Josephquees says

    ventolin australia buy: Buy Albuterol inhaler online – ventolin uk

  3. Josephquees says

    lasix pills: buy furosemide – lasix generic

  4. Josephquees says

    Semaglutide pharmacy price: rybelsus cost – Semaglutide pharmacy price

  5. Timothydub says

    indian pharmacy: Indian pharmacy online – reputable indian pharmacies

Leave A Reply

Your email address will not be published.