Cotton Crop: ಹತ್ತಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಹೇಗೆ? ಪೋಷಕಾಂಶಗಳ ಕೊರತೆ ನೀಗಿಸುವ ಕ್ರಮವೇನು?
Cotton Crop: ಹತ್ತಿಯನ್ನು ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ(Seedling) ಮಾಡಿದ್ದು, ಅದು ಈಗ ಹೂ ಮತ್ತು ಕಾಯಿಯಾಗುವ(Flower) ಹಂತದಲ್ಲಿದೆ, ಹತ್ತಿಗೆ ಸಿಂಪರಣೆ ಮೂಲಕ ಪೋಷಕಾಂಶಗಳ(Nutrition) ಪೂರೈಕೆ ಮತ್ತು ಸಸ್ಯ ಸಂರಕ್ಷಣಾ ಕ್ರಮಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
– ಹತ್ತಿಯಲ್ಲಿ ಪೋಷಕಾಂಶಗಳ ಕೊರತೆ(Lake of nutrition) ಪೂರೈಸಲು 19:19:19 5 13:0:45 2 45-60 2 5 10 по ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು ಸೂಕ್ತವಾಗಿದೆ.
– ಶೇ.1 ರಷ್ಟು ಮ್ಯಾಗ್ನಿಸಿಯಂ ಸಲ್ವೇಟ್ 10 ಗ್ರಾಂ ಪ್ರತಿ ಲೀ ನೀರಿಗೆ ಸಿಂಪಡಿಸುವುದರಿಂದ ಎಲೆ ಕೆಂಪಾಗುವಿಕೆಯನ್ನು ನಿಯಂತ್ರಿಸಬಹುದು.
– ಪ್ರತಿ ಎಕರೆಗೆ 2 ರಿಂದ 3 ಮೋಹಕ ಬಲೆಗಳನ್ನು ಇಡುವುದರಿಂದ, ಪ್ರಾಥಮಿಕ ಹಂತದಲ್ಲಿಯೇ ಗುಲಾಬಿ ಬಣ್ಣದ ಕಾಯಿಕೊರಕದ ಬಾಧೆ ಕಡಿಮೆ ಮಾಡಬಹುದು.
– ಬಿತ್ತನೆಯಾದ 80 ದಿನಗಳ ನಂತರ ಎರಡು ಬಾರಿ ಎರಡು ವಾರಗಳ ಅಂತರದಲ್ಲಿ ಶೇ.2 ರಷ್ಟು ಯೂರಿಯಾ ಅಥವಾ ಶೇ. 1 ರಷ್ಟು ಪೋಟ್ಯಾಷಿಯಂ ನೈಟ್ರೇಟ್ ದ್ರಾವಣ ಸಿಂಪರಣೆ ಮಾಡವುದು ಸೂಕ್ತ ಕ್ರಮವಾಗಿದೆ.
– ಹೂ ಬಿಡಲು ಪ್ರಾರಂಭವಾದಾಗ ಮತ್ತು ಪೂರ್ತಿ ಹೂ ಅರಳಿದಾಗ ಪ್ರತೀ ಲೀಟರ್ ನೀರಿಗೆ 0.25 ಮಿಲೀ ಅಲ್ಲಾ-ನ್ಯಾಪ್ತಲಿನ್ ಅಸಿಟಿಕ್ ಅಸಿಡ್ ಶೇ. 4.5 ಎಸ್ ಎಲ್ ಸಿಂಪಡಿಸುವುದರಿಂದ ಮೊಗ್ಗು, ಹೂ ಮತ್ತು ಕಾಯಿ ಉದುರುವಿಕೆಯನ್ನು ಕಡಿಮೆ ಮಾಡಬಹುದಾಗಿದೆ.
– ಬಿಟಿ ಹತ್ತಿಗೆ 55, 75 ಮತ್ತು 95 ದಿನಗಳಲ್ಲಿ ನೈಟ್ರೋಬೆನ್ ಜಿನ್ ಶೇ. 20 ರಷ್ಟು ಇಸಿ 1.0 ಮಿಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.