Nano Urea: ಕೃಷಿಯಲ್ಲಿ ನ್ಯಾನೋ ಯೂರಿಯಾ ಬಳಕೆ: ಹರಳು ಹಾಗೂ ದ್ರವ ರೂಪದ ಯೂರಿಯಾದಲ್ಲಿ ಯಾವುದು ಬೆಸ್ಟ್..?

Nano Urea: ನ್ಯಾನೋ ತಂತ್ರಜ್ಞಾನ(Nano technology) ತಾಂತ್ರಿಕತೆ ಕೃಷಿಯಲ್ಲಿ(Agriculture) ಸಸ್ಯಗಳಲ್ಲಿ ರೋಗ ಪತ್ತೆಗೆ ತ್ಯಾಜ್ಯ ನೀರು ಪರೀಕ್ಷಿಸಲು, ಸಸ್ಯಗಳಲ್ಲಿ ಪೋಷಕಾಂಶ ಹೀರುವ ಶಕ್ತಿ ವೃದ್ಧಿಸಲು ಪೂರಕವಾಗಿದೆ. ಯೂರಿಯಾ(Urea) ಪ್ರಮುಖ ಸಾರಜನಕ ರೂಪದ ರಸಗೊಬ್ಬರ(Fertilizer), ನ್ಯಾನೋ ಅಂದರೆ ಚಿಕ್ಕದು ಅಂದರೆ ಕಡಿಮೆ ಪ್ರಮಾಣದಲ್ಲಿ ಸಿಂಪಡಿಸುವ ದ್ರವರೂಪದ ಗೊಬ್ಬರ. ಇದರ ಬಳಕೆ ಕುರಿತು ವಿಜಯಪುರ ಕೃಷಿ ಕಾಲೇಜು ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.

– ಸಾಂಪ್ರದಾಯಿಕ ಯೂರಿಯಾ ಹರಳುಗಳ ಗಾತ್ರ 2.82 ರಿಂದ 3.06 ಮಿಮೀ ಇರುತ್ತದೆ. ಆದರೆ ನ್ಯಾನೋ ಯೂರಿಯಾ ಕಣಗಳ ಗಾತ್ರದ 20-50 ನ್ಯಾನೋ ಮೀಟರ್ ಇರುತ್ತದೆ.
– ನ್ಯಾನೋ ಯೂರಿಯಾವನ್ನು ಬೆಳೆಯ ಸೂಕ್ತ ಹಂತಗಳಲ್ಲಿ ಸಿಂಪರಣೆ ಮಾಡಬೇಕು. ಇದು ದ್ರವರೂಪದಲ್ಲಿ ದೊರೆಯುತ್ತದೆ.

– ನ್ಯಾನೋ ಯೂರಿಯಾ ಸಿಂಪರಣೆಯ ಮೂಲಕ ಬೆಳೆಗೆ ಒದಗಿಸಬೇಕು. ಪ್ರತಿ ಲೀಟರ್ ನೀರಿಗೆ 3-4 ಮೀಲಿ ನ್ಯಾನೋ ಯೂರಿಯಾವನ್ನು ಸಿಂಪಡಿಸಲು ಶಿಫಾರಸ್ಸು ಮಾಡಲಾಗಿದೆ.
– ಪ್ರತಿ ಎಕರೆಗೆ ಸಿದ್ದಪಡಿಸಿದ 150 ಲೀಟರ್ ದ್ರಾವಣ ಸಿಂಪರಣೆಗೆ ಸಾಕಾಗುತ್ತದೆ. ಮೊದಲನೆಯ ಸಿಂಪರಣೆಯನ್ನು ಬಿತ್ತನೆಯಾದ 30 0 35 1 ದಿನಗಳಲ್ಲಿ ಮತ್ತು ಎರಡನೇ ಸಿಂಪರಣೆಯನ್ನು ಹೂವಾಡುವದಕ್ಕಿಂತ ಮೊದಲು ಸಿಂಪಡಿಸಬೇಕು.
– ನ್ಯಾನೋ ಸಣ್ಣ ಸಣ್ಣ ಕಣಗಳಿಂದ ಕೂಡಿದ ದ್ರವ್ಯರೂಪದ ಗೊಬ್ಬರ. ಇದು ಶೇ.4ರಷ್ಟು ನ್ಯಾನೋ ಸಾರಜನಕ ಕಣಗಳನ್ನು ಹೊಂದಿರಲ್ಪಡುತ್ತದೆ. ಸುಮಾರು 50 ಕೆಜಿ ಬ್ಯಾಗ್‍ ರಸಗೊಬ್ಬರ ಉಪಯೋಗಿಸುವ ಸ್ಥಳದಲ್ಲಿ ಕೇವಲ 250 ಮಿ.ಲೀ.ನಷ್ಟು ನ್ಯಾನೋ ಯೂರಿಯಾ ಬಳಕೆ ಮಾಡಿದರೆ ಸಾಕಾಗುತ್ತದೆ.. ಇದರಿಂದ ರೈತರಿಗೆ ತ್ರಾಸದಾಯಕ, ವೆಚ್ಚದಾಯಕ ಸಾಗಣೆ ವೆಚ್ಚ ಉಳಿಯುತ್ತದೆ.

– ಭೂಮಿಗೆ ಬಳಸುವ ಯೂರಿಯಾ ರಸಗೊಬ್ಬರದಿಂದ ಬೆಳೆಗಳಿಗೆ ಶೇ.20- 25 ಮಾತ್ರವೇ ಲಭ್ಯವಾಗುತ್ತದೆ. ಉಳಿದ ಪ್ರಮಾಣ ನಾನಾ ಕಾರಣಗಳಿಂದ ಗಿಡಗಳಿಗೆ ದೊರೆಯದೇ ನಷ್ಟವಾಗುತ್ತದೆ. ಆದರೆ ಈ ನ್ಯಾನೋ ಯೂರಿಯಾ ಗೊಬ್ಬರವು ಚಿಕ್ಕ ಗಾತ್ರದ ಕಣಗಳನ್ನು ಹೊಂದಿರುವ ಕಾರಣ, ಬೆಳೆಗಳಿಗೆ ಬೇಕಾಗುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸಿ ಶೇ.80 ರಷ್ಟು ಗೊಬ್ಬರವನ್ನು ಗಿಡಗಳು ಬಳಸಿಕೊಳ್ಳುವಂತೆ ಮಾಡುತ್ತದೆ.

1 Comment
  1. Techno rozen says

    Techno rozen Nice post. I learn something totally new and challenging on websites

Leave A Reply

Your email address will not be published.