Sheelu Abraham: ‘ಬೇಕೆಂದು 10 ಸಲ ಮಲಗಿ ಅತ್ಯಾಚಾರ ಅನ್ನೋದು ಸರಿಯಲ್ಲ, ಮದುವೆ ಆದ್ಮೇಲೆ ಅಫೇರ್ ಇರೋದೂ ತಪ್ಪಲ್ಲ’ ಎಂದ ಮಲೆಯಾಳಂ ನಟಿ !!

Sheelu Abraham: ವಿವಾಹೇತರ ಸಂಬಂಧಗಳನ್ನು ದೂರಬಾರದು, ಅಂತಹ ಸಂಬಂಧಗಳಲ್ಲಿ ತೊಡಗಿರುವವರ ದೃಷ್ಟಿಕೋನದಿಂದ ಅದು ಸರಿ ಅನಿಸುತ್ತದೆ. ಕೆಲವೊಂದು ಸನ್ನಿವೇಶಗಳು ಅಂತಹ ಸಂಬಂಧಗಳಿಗೆ ಕಾರಣವಾಗುತ್ತವೆ. ಅಲ್ಲದೆ ಹೀಗೆ ಸ್ವ ಇಚ್ಛೆಯಿಂದ ಮಲಗಿದ ಬಳಿಕ ಅದನ್ನು ಅತ್ಯಾಚಾರ ಅಂಐಲೂ ಹೇಳಬಾರದು ಎಂದು ಖ್ಯಾತ ಮಲಯಾಳಂ ನಟಿ ಶೀಲು ಅಬ್ರಹಾಂ(Shree Abraham) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೌದು, ಕಳೆದ ಒಂದು ದಶಕದಿಂದ ದೇವರ ನಾಡು ಕೇರಳದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ಶೀಲು ಅಬ್ರಹಾಂ, ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವಾಹೇತರ ಸಂಬಂಧ ತಪ್ಪಲ್ಲ ಎಂದಿದ್ದಾರೆ. ಅವರ ಅವರ ದೃಷ್ಟಿಕೋನದಲ್ಲಿ ಅವರು ತೆಗೆದುಕೊಂಡ ನಿರ್ಧಾರ ಸರಿಯಾಗಿಯೇ ಇರುತ್ತೆ ಎಂದಿದ್ದಾರೆ. ವೈವಾಹಿಕ ಜೀವನದಲ್ಲಿನ ಕೆಲ ಲೋಪ ದೋಷಗಳಿಂದ, ವಿವಾಹೇತರ ಸಂಬಂಧ ಶುರುವಾಗುತ್ತೆ ಎಂದಿರುವ ಶೀಲು ಇಂತಹ ಸಂಬಂಧವನ್ನು ತಪ್ಪು ಎಂದು ಹೇಳಲು ಆಗಲ್ಲ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಅವರು ‘ವೈವಾಹಿಕ ಜೀವನದಲ್ಲಿನ ದೋಷಗಳು ವಿವಾಹೇತರ ಸಂಬಂಧಗಳಿಗೆ ಕಾರಣವಾಗಬಹುದು. ಅದನ್ನು ದೂಷಿಸಲು ಸಾಧ್ಯವಿಲ್ಲ. ಇದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಅತ್ಯಾಚಾರ ತಪ್ಪು. ಆದರೆ, ಇಷ್ಟಪಟ್ಟು ಹೋಗುವುದರಲ್ಲಿ ತಪ್ಪೇನಿಲ್ಲ. ಇಷ್ಟಪಟ್ಟು ಹತ್ತು ಬಾರಿ ಹೋದ ಮೇಲೆ ನನ್ನ ಮೇಲೆ ಬಲಾತ್ಕಾರವಾಯಿತು ಎಂದು ಹೇಳುವುದು ಸರಿಯಲ್ಲ. ಚಿತ್ರರಂಗದಲ್ಲಿ ಗಂಡು-ಹೆಣ್ಣಿನ ನಡುವಿನ ಸಂಬಂಧ ನೇರವಾಗಿ ಜನರಿಗೆ ಗೊತ್ತಿರದಿದ್ದರೂ ತಿಳಿವಳಿಕೆ ಇದೆ. ಎಷ್ಟೋ ವರ್ಷಗಳಿಂದ ಪರಿಚಯವಿರುವವರು ಕೂಡ ಕೇಸು ಹಾಕಿಕೊಂಡು ಬರುತ್ತಾರೆ ಎಂದು ಶೀಲು ಹೇಳಿದ್ದಾರೆ.
ಇಷ್ಟೇ ಅಲ್ಲದೆ ವಿವಾಹದಾಚೆಗಿನ ಸಂಬಂಧಗಳಲ್ಲಿ, ಪುರುಷರು ಎಷ್ಟೇ ಸಂಬಂಧಗಳನ್ನು ಹೊಂದಿದ್ದರೂ ಹೇಗೋ ತಪ್ಪಿಸಿಕೊಳ್ಳುತ್ತಾರೆ. ಆದರೆ ಮಹಿಳೆಯರು ಯಾವಾಗಲೂ ಇಂಥ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ವಿವಾಹೇತರ ಸಂಬಂಧಗಳಿಗೆ ಹೋಗುವವರನ್ನು ನಾನು ದೂಷಿಸುವುದಿಲ್ಲ. ಏಕೆಂದರೆ ಅವರ ಕಡೆಯಿಂದ ಯಾವುದೋ ಒಂದು ಕಾರಣ, ಒತ್ತಡ ಇರುತ್ತದೆ. ನಾವು ಹೊರಗೆ ನಿಂತು ಅವರ ಸ್ಥಿತಿಯನ್ನು ನೋಡಿದರೆ ಅವರದು ನಮಗೆ ತಪ್ಪೆಂದು ಕಾಣುತ್ತದೆ. ಆದರೆ ನಮಗೆ ಕಾಣುವುದು ನಿಜವಲ್ಲ. ಸತ್ಯ ಇನ್ನೇನೋ ಇರುತ್ತದೆ ಎಂದಿದ್ದಾರೆ ಶೀಲು ಅಬ್ರಹಾಂ ಅವರು.
ಇದರೊಂದಿಗೆ ಫಿಲಂ ಇಂಡಸ್ಟ್ರಿ ಒಳಗಿನ ಸಂಬಂಧಗಳ ಬಗ್ಗೆ ಸಾರ್ವಜನಿಕರಿಗೆ ನೇರವಾಗಿ ತಿಳಿದಿರೋಲ್ಲ. ಅವರಿಗೆ ಆಗಾಗ ಗಾಸಿಪ್‌ಗಳ ಮೂಲಕ ತಿಳಿಯಬಹುದು. ಹಲವು ವರ್ಷಗಳಿಂದ ಒಬ್ಬರಿಗೊಬ್ಬರು ಆತ್ಮೀಯ ಸಂಬಂಧ ಹೊಂದಿರುವ ಜನರೇ ಇದ್ದಕ್ಕಿದ್ದಂತೆ ಅವರ ವಿರುದ್ಧ ಕೇಸ್ ಹಾಕುವುದು ನೋಡಬಹುದು. ಅದನ್ನು ನೋಡಿದಾಗ ಆಶ್ಚರ್ಯ ಆಗಬಹುದು. ಆದರೆ ಇದು ಸಂಬಂಧದ ದುರ್ಬಳಕೆ. ಸಿನಿಮಾ ಇಂಡಸ್ಟ್ರಿಯಲ್ಲಿ ಇಂಥ ಹಲವು ಸಂಬಂಧಗಳು ನಡೆಯುತ್ತವೆ. ಹಲವು ನಟಿಯರು ತಮಗೆ ಅವಕಾಶಗಳಿಗಾಗಿ ನಿರ್ದೇಶಕರು, ನಿರ್ಮಾಪಕರ ಜೊತೆಗೆ ಮಲಗುವುದೂ ಇದೆ. ಹಾಗೇ ನಿರ್ದೇಶಕರು, ನಿರ್ಮಾಪಕರು ನಟಿಯರನ್ನು ಬಳಸಿಕೊಳ್ಳುವುದೂ ಇವೆ. ಆದರೆ ಇದೆಲ್ಲ ಸಾಮಾನ್ಯ ಸಂಗತಿ ಎಂದು ತಿಳಿಯಬಾರದು. ಇಂಥ ಘಟನೆಗಳು ವಿರಳ ಎನ್ನುತ್ತಾರೆ ಈ ನಟಿ.
ಅಂದ್ಹಾಗೇ ಶೀಲು ಬ್ಯಾಡ್ ಬಾಯ್ಸ್ ಎಂಬ ಚಿತ್ರದಲ್ಲಿ ಆಕ್ಟ್ ಮಾಡಿದ್ದಾರೆ. ಪ್ರಿಯಾ ವಾರಿಯರ್ ಹಿಂದೆ ಅಭಿನಯಿಸಿದ್ದ ಒರು ಅಡಾರ್ ಲವ್ ಚಿತ್ರ ನಿರ್ದೇಶಿಸಿದ್ದ ಒಮರ್ ಲುಲು ಈ ಚಿತ್ರವನ್ನು ನಿರ್ದೇಶಿಸಿದ್ಧಾರೆ. ವಿಪರ್ಯಾಸ ಎಂದರೆ ಈ ಒಮರ್ ಲುಲ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಇದೆ. ಚಿತ್ರದಲ್ಲಿ ಅವಕಾಶ ನೀಡುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿ ಆ ನಂತರ ಮೋಸ ಮಾಡಿದ ಅಪವಾದ ಇದೆ. ಈ ಬಗ್ಗೆ ಮಾತನಾಡುತ್ತಲ್ಲೆ ನಟಿ ಮೇಲೆ ಹೇಳಿರುವ ಎಲ್ಲಾ ಮಾತುಗಳನ್ನು ಬಹಿರಂಗಪಡಿಸಿದ್ದಾರೆ.