Nanjanagudu: ಸಿದ್ದರಾಮಯ್ಯ ಪ್ರತಿಭಟನೆಗೆ ಬರದಿದ್ರೆ ಗ್ಯಾರಂಟಿ ಬಂದ್ – ಗ್ರಾಮದಲ್ಲಿ ಡಂಗೂರ !!

Share the Article

Nanjanagudu: ರಾಜ್ಯದಲ್ಲಿ ಮೂಡಾ ಹಗರಣ ಭಾರೀ ಸದ್ದುಮಾಡುತ್ತಿದ್ದು, ಈ ಮುಡಾ ಹಗರಣದ(Muda Scam) ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thavar Chand Gehlot) ಪ್ರಾಸಿಕ್ಯೂಶನ್ ನಿರ್ಣಯವನ್ನು ಹೊರಡಿಸಿದ್ದಾರೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಅಲ್ಲದೆ ರಾಜ್ಯಾದ್ಯಂತ ರಾಜ್ಯಪಾಲರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ನಿಂದ ಭಾರೀ ಪ್ರತಿಭಟನೆ ನಡೆಸಲಾಗುತ್ತಿದೆ.

ಈ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ವಿಚಿತ್ರವಾದ ಡಂಗೂರ ಸಾರಲಾಗಿದೆ. ಅದೇನೆಂದರೆ ಸಿಎಂ ಪರವಾದ ಪ್ರತಿಭಟನೆಯಲ್ಲಿ ಭಾಗವಹಿಸದಿದ್ದರೆ ಸರ್ಕಾರದಿಂದ ನೀಡಲಾಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಲಾಗುವುದು ಎಂದು ಡಂಗೂರ ಸಾರಲಾಗಿದೆ.

ಹೌದು, ನಂಜನಗೂಡು(Nanjanagudu) ತಾಲೂಕಿನ ಚಿನ್ನದಗುಡಿಹುಂಡಿ ಗ್ರಾಮದಲ್ಲಿ ಡಂಗೂರ ಸಾರಿ ಗ್ರಾಮಸ್ಥರನ್ನು ಪ್ರತಿಭಟನೆಗೆ ಕರೆಯಲಾಗಿದೆ. ಡಂಗೂರ ಸಾರಿದ ವ್ಯಕ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ನಡೆಯುವ ಪ್ರತಿಭಟನೆಗೆ ಬರಬೇಕಂತೆ. ಇಲ್ಲವಾದಲ್ಲಿ ಗೃಹಲಕ್ಷ್ಮಿ ಯೋಜನೆ 2000 ರೂ., ಉಚಿತ ಪ್ರಯಾಣದ ಶಕ್ತಿ ಯೋಜನೆ, ಅಕ್ಕಿ ದುಡ್ಡು, ಉಚಿತ ಕರೆಂಟ್ ಸೇರಿ ಎಲ್ಲ ಗ್ಯಾರಂಟಿ ನಿಂತು ಹೋಗುತ್ತವೆ ಎಂದು ಹೇಳಿ ಡಂಗೂರ ಸಾರಿ ಪ್ರಚಾರ ಮಾಡಿದ್ದಾರೆ. ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದೆ.

Leave A Reply

Your email address will not be published.