Sandalwood: ಹೋಮ, ಹವನ, ನಾಗಾರಾಧನೆ ಬೆನ್ನಲ್ಲೇ ಕನ್ನಡದ ಚಿತ್ರರಂಗಕ್ಕೆ 7 ನ್ಯಾಷನಲ್ ಅವಾರ್ಡ್ !! ನೆಟ್ಟಿಗರು ಹೇಳಿದ್ದಿಷ್ಟು

Sandalwood : ಕನ್ನಡ ಚಿತ್ರರಂಗದಲ್ಲಿ(Sandalwood) ಸಾಕಷ್ಟು ಸಮಸ್ಯೆಗಳು ಆಗುತ್ತಿರೋದ್ರಿಂದ ಪರಿಹಾರ ಕಂಡುಕೊಳ್ಳಲು ಕಲಾವಿದರ ಸಂಘ ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಪೂಜೆ, ಹೋಮ ಹವನ, ನಾಗಾರಾಧನೆಯನ್ನು ನಡೆಸಿದೆ. ಈ ಬೆನ್ನಲ್ಲೇ ಕನ್ನಡ ಚಿತ್ರರಂಗಕ್ಕೇ ಸಾಧನೆಗಳ, ಪ್ರಶಸ್ತಿಗಳ ಮಹಾಪೂರವೇ ಹರಿದು ಬಂದಿದೆ.

ಹೌದು, ಕನ್ನಡ ಚಿತ್ರರಂಗ ಮಾಡಿದ್ದ ಹೋಮ, ಹಮನ ಹಾಗೂ ನಾಗರಾಧನೆ ಫಲಕೊಟ್ಟಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನರು ಮಾತನಾಡಿಕೊಳ್ತಿದ್ದಾರೆ. ಯಾಕೆಂದರೆ ಹೋಮ, ಹವನ, ಪೂಜೆ ನಡೆಸಿದ ಕೆಲವೇ ದಿನಗಳಲ್ಲಿ ಕನ್ನಡ ಇಂಡಸ್ಟ್ರಿಗೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಕನ್ನಡಕ್ಕೆ ಬರೋಬ್ಬರಿ 7 ಪ್ರಶಸ್ತಿಗಳು ಲಭಿಸಿವೆ.

ಫೀಚರ್‌ ಫಿಲ್ಮ್ಸ್ ವಿಭಾಗದಲ್ಲಿ ನಾಲ್ಕು ಪ್ರಶಸ್ತಿಗಳು
ಫೀಚರ್‌ ಫಿಲ್ಮ್ಸ್‌ ವಿಭಾಗದಲ್ಲಿ ಕನ್ನಡ ಚಿತ್ರರಂಗಕ್ಕೆ ಒಟ್ಟು ನಾಲ್ಕು ಪ್ರಶಸ್ತಿಗಳು ಲಭಿಸಿವೆ. ಫೀಚರ್‌ ಫಿಲ್ಮ್ಸ್‌ ವಿಭಾಗದಿಂದ ಕನ್ನಡಕ್ಕೆ ಬಂದ 4 ಪ್ರಶಸ್ತಿಗಳ ಪೈಕಿ 2 ಪ್ರಶಸ್ತಿಗಳು ‘ಕೆಜಿಎಫ್‌: ಚಾಪ್ಟರ್‌ 2’ ಪಾಲಾದರೆ, 2 ಪ್ರಶಸ್ತಿಗಳು ‘ಕಾಂತಾರ’ ಚಿತ್ರಕ್ಕೆ ಲಭಿಸಿವೆ.

* ಅತ್ಯುತ್ತಮ ಪ್ರಾದೇಶಿಕ ಚಿತ್ರಗಳ ಪೈಕಿ ‘ಅತ್ಯುತ್ತಮ ಕನ್ನಡ ಸಿನಿಮಾ’ ಪ್ರಶಸ್ತಿ ‘ಕೆಜಿಎಫ್‌ ಚಾಪ್ಟರ್ 2’ ಪಾಲಾಗಿದೆ. ಅತ್ಯುತ್ತಮ ಆಕ್ಷನ್ ಡೈರೆಕ್ಷನ್ ಪ್ರಶಸ್ತಿ ಅರ್ಥಾತ್ ಬೆಸ್ಟ್ ಸ್ಟಂಟ್ ಕೊರಿಯೋಗ್ರಫಿ ಅವಾರ್ಡ್‌ ಸಹ ‘ಕೆಜಿಎಫ್‌ ಚಾಪ್ಟರ್ 2’ ಸಿನಿಮಾದ ಪಾಲಾಗಿದೆ.
* ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿ ಅವರಿಗೆ ಒಲಿದು ಬಂದಿದೆ. ‘ಕಾಂತಾರ’ ಚಿತ್ರದಲ್ಲಿನ ಆಕ್ಟಿಂಗ್‌ಗಾಗಿ ರಿಷಬ್ ಶೆಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೇ, ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ‘ಭರಪೂರ ಮನರಂಜನೆ ನೀಡುವ ಅತ್ಯುತ್ತಮ ಜನಪ್ರಿಯ ಚಿತ್ರ’ ಪ್ರಶಸ್ತಿ ಗಿಟ್ಟಿಸಿದೆ.

ನಾನ್‌ ಫೀಚರ್‌ ವಿಭಾಗದಲ್ಲಿ ಕನ್ನಡಕ್ಕೆ ಸಿಕ್ಕಿದೆ 3 ಪ್ರಶಸ್ತಿಗಳು
ನಾನ್ ಫೀಚರ್‌ ಫಿಲ್ಮ್ಸ್ ವಿಭಾಗದಲ್ಲಿ ಕನ್ನಡ ಚಿತ್ರರಂಗಕ್ಕೆ ಒಟ್ಟು 3 ಪ್ರಶಸ್ತಿಗಳು ಲಭಿಸಿವೆ. ‘ಅತ್ಯುತ್ತಮ ಸಂಕಲನ’ ಪ್ರಶಸ್ತಿಗೆ ‘ಮಧ್ಯಂತರ’ ಚಿತ್ರಕ್ಕಾಗಿ ಸಂಕಲನಕಾರ (ಎಡಿಟರ್) ಸುರೇಶ್ ಅರಸ್‌ ಭಾಜನರಾಗಿದ್ದಾರೆ. ಹಾಗೇ, ‘ಮಧ್ಯಂತರ’ ಚಿತ್ರದ ನಿರ್ದೇಶನಕ್ಕಾಗಿ ‘ಬೆಸ್ಟ್ ಡೆಬ್ಯೂ ಫಿಲ್ಮ್ ಆಫ್ ಎ ಡೈರೆಕ್ಟರ್’ ಪ್ರಶಸ್ತಿ ಬಸ್ತಿ ದಿನೇಶ್ ಶೆಣೈ ಅವರಿಗೆ ಲಭಿಸಿದೆ. ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಚಲನಚಿತ್ರ ಪ್ರಶಸ್ತಿ ಕನ್ನಡದ ‘ರಂಗ ವೈಭೋಗ’ ಚಿತ್ರದ ಪಾಲಾಗಿದೆ. ಈ ಚಿತ್ರವನ್ನ ಸುನೀಲ್ ಪುರಾಣಿಕ್ ನಿರ್ಮಿಸಿ, ನಿರ್ದೇಶಿಸಿದ್ದಾರೆ.

Leave A Reply

Your email address will not be published.