PM Modi: ದೇಶವನ್ನುದ್ದೇಶಿಸಿ ಸ್ವತಂತ್ರೋತ್ಸವದಲ್ಲಿ 11ನೇ ಬಾರಿ ಮೋದಿ ಭಾಷಣ – ಇಲ್ಲಿವೆ ಪ್ರಮುಖ ಅಂಶಗಳು !!

PM Modi: ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ದಿಲ್ಲಿಯ ಕೆಂಪುಕೋಟೆಯಲ್ಲಿ ಗುರುವಾರ ಧ್ವಜಾರೋಹಣ(Flag Hoisting)ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಐತಿಹಾಸಿಕ ಮೂರನೇ ಅವಧಿಗೆ ಆಯ್ಕೆಯಾದ ಬಳಿಕ ಇದು ಸ್ವಾತಂತ್ರ್ಯ ದಿನದ ಅವರ ಮೊದಲ ಭಾಷಣವಾಗಿದೆ. ಹಾಗೂ ಸತತ 11ನೇ ಸ್ವಾತಂತ್ರ್ಯೋತ್ಸವ ಭಾಷಣವಾಗಿದೆ. ಈ ವೇಳೆ ಅವರು ಅನೇಕ ಘೋಷಣೆಗಳನ್ನು ಮಾಡಿದರು. ಅವರ ಮಾತುಗಳ ಆಯ್ದ ಅಂಶಗಳು ಇಲ್ಲಿವೆ.

ಭಾಷಣದ ಪ್ರಮುಖ ಅಂಶಗಳು
• ವೇತನ ಸಹಿತ ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲಾಗಿದೆ. ತಾಯಿಯ ಆರೈಕೆಯಲ್ಲಿ ಬೆಳೆಯುವ ಮಗು ಮಾದರಿ ಪ್ರಜೆ ಯಾಗಬಲ್ಲ ಎಂಬ ಉದಾತ್ತ ಚಿಂತನೆಯೇ ಇಂತಹ ನಿರ್ಧಾರಕ್ಕೆ ಕಾರಣ
* ಉದ್ಯೋಗ, ನಾವೀನ್ಯತೆ, ಉದ್ಯಮಶೀಲತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ‘ಮಹಿಳೆ ಕೇಂದ್ರಿತ ಅಭಿವೃದ್ಧಿ ಮಾದರಿ’ಗೆ ಉತ್ತೇಜನ ನೀಡಲಾಗಿದೆ

* ವಾಯುಪಡೆ, ನೌಕಾಪಡೆ, ಸೇನೆ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಮಹಿಳೆಯರು ಛಾಪು ಮೂಡಿಸಿದ್ದಾರೆ
* ವಿಕಸಿತ ಭಾರತ 2047’ ಎಂಬುದು ಕೇವಲ ಪದಪುಂಜವಲ್ಲ. 140 ಕೋಟಿ ಭಾರತೀಯರ ಕನಸು ಮತ್ತು ಸಂಕಲ್ಪ
* ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಲು ಬಾಹ್ಯಾಕಾಶ ಕ್ಷೇತ್ರದಲ್ಲಿ- ಯೂ ಪ್ರಗತಿ ಅಗತ್ಯ. ಉಜ್ವಲ ಭವಿಷ್ಯ ಇರುವ ಈ ಕ್ಷೇತ್ರವನ್ನು ಬಲಪಡಿಸಲಾಗುತ್ತಿದೆ

* ಚಂದ್ರಯಾನ ಕಾರ್ಯಕ್ರಮದ ಯಶಸ್ಸು ದೇಶದ ಯುವ ಸಮುದಾಯದಲ್ಲಿ ವೈಜ್ಞಾನಿಕ ಮನೋಧರ್ಮ ಹೆಚ್ಚುವಂತೆ ಮಾಡಿದೆ. ಯುವ ಜನರಲ್ಲಿ ಇಂತಹ ಬದಲಾವಣೆಯನ್ನು ಶೈಕ್ಷಣಿಕ ಸಂಸ್ಥೆಗಳು ಪೋಷಿಸಬೇಕು
* ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಮುಂದಿನ ಐದು ವರ್ಷಗಳಲ್ಲಿ 75 ಸಾವಿರ ಹೊಸ ವೈದ್ಯಕೀಯ ಸೀಟುಗಳನ್ನು ಸೃಷ್ಟಿಸಲಾಗುವುದು

* 5ಜಿ ತಂತ್ರಜ್ಞಾನಕ್ಕೆ ತ್ವರಿತವಾಗಿ ಚಾಲನೆ ನೀಡಲಾಗಿದ್ದರೂ, 6ಜಿ ತಂತ್ರಜ್ಞಾನ ಕುರಿತು ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ
* ‘ಭಾರತದಲ್ಲಿ ವಿನ್ಯಾಸಗೊಳಿಸಿ’ ಎಂಬ ಮಂತ್ರದಿಂದ ಶುರುವಾದ ನಮ್ಮ ಪಯಣ, ಈಗ ‘ವಿಶ್ವಕ್ಕಾಗಿ ವಿನ್ಯಾಸಗೊಳಿಸಿ’ ಎಂಬ ಧೈಯವಾಕ್ಯದೊಂದಿಗೆ ಸಾಗಬೇಕಿದೆ
* 2036ರ ಒಲಿಂಪಿಕ್ಸ್‌ನ ಆತಿಥ್ಯ ವಹಿಸಬೇಕು ಎಂಬುದು ಭಾರತದ ಕನಸು. ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ.

Leave A Reply

Your email address will not be published.