Dakshina Kannada: ಪುತ್ತೂರು ಲಾಡ್ಜ್ ಮೇಲೆ ಪೋಲೀಸರ ದಾಳಿ- ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ !!

Share the Article

Dakshina Kannada: ಜಿಲ್ಲೆಯ ಪುತ್ತೂರಿನ(Putturu) ಹೊರವಲಯ ನೆಹರೂ ನಗರದಲ್ಲಿರುವ ಲಾಡ್ಜ್ ವೊಂದಕ್ಕೆ ಮಂಗಳವಾರ ಮಧ್ಯಾಹ್ನ ಪುತ್ತೂರು ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಪತ್ತೆಯಾಗಿದ್ದಾಳೆ.

ತಡ ರಾತ್ರಿ ಇನೋವಾ ಕಾರಿನಲ್ಲಿ(Innova Car) ಬಂದ ತಂಡವೊಂದಕ್ಕೆ ರೂಂ ನೀಡಿರುವುದೆ ದಾಳಿಗೆ ಕಾರಣ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಇನೋವಾದಲ್ಲಿ ಬಂದ ವ್ಯಕ್ತಿಗಳ ಬಳಿ ಸರಿಯಾದ ದಾಖಲಾತಿ ಪಡೆದುಕೊಳ್ಳದೆ ರೂಂ ನೀಡಲಾಗಿದೆ. ಅಲ್ಲದೆ ಆ ಇನ್ನೊವಾದಲ್ಲಿ ಅನ್ಯಕೋಮಿನ ಜೋಡಿ ಇತ್ತು ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ. ಹೀಗಾಗಿ ಈ ದೂರಿನ ಮೇಲೆ ಪೋಲೀಸರು ದಾಳಿ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ.

ಪುತ್ತೂರು ನಗರ ಠಾಣೆ ಎಎಸ್‌ಐ(Putturu SI) ಅಂಜನೇಯ ರೆಡ್ಡಿ ನೇತ್ರತ್ವದಲ್ಲಿ ಸಿಬ್ಬಂದಿಗಳ ತಂಡ ಲಾಡ್ಜ್‌ಗೆ ತೆರಳಿ ತನಿಖೆ ನಡೆಸಿದ್ದಾರೆ. ಪೊಲೀಸರು ದಾಳಿ ನಡೆಸಿ, ರಿಸೆಪ್ಶನಿಸ್ಟ್ ಹಾಗೂ ಲೆಡ್ಜರ್ ಪುಸ್ತಕವನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಅವರು ರೂಂ ನೀಡುವಾಗ ಪಡೆದುಕೊಳ್ಳುವ ದಾಖಲಾತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ತನಿಖೆಯ ವೇಳೆ ಲಾಡ್ ನವರು ಯಾವುದೇ ಅಕ್ರಮ ನಡೆಸಿದ್ದು ಕಂಡು ಬಂದಿಲ್ಲ ಹೀಗಾಗಿ ಪೊಲೀಸರು ವಿಚಾರಣೆ ನಡೆಸಿ ವಾಪಸ್ಸು ಬಂದಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

Leave A Reply