Tata Group: ಅತ್ಯಮೂಲ್ಯ ಬ್ರಾಂಡ್ ಟಾಟಾ ಗ್ರೂಪ್ ನ ಉತ್ತರಾಧಿಕಾರಿ ಒಬ್ಬ ಮಹಿಳೆ! ಆ ಮಹಿಳೆ ಯಾರು ಗೊತ್ತಾ?!

Tata Group: ಅತೀ ದೊಡ್ಡ ಮತ್ತು ನಂಬಿಕೆಗೆ ಹೆಸರಾಗಿರುವ ಟಾಟಾ ಗ್ರೂಪಿನ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಆದ್ರೆ ಟಾಟಾ ಗ್ರೂಪಿನ (Tata Group) ಮುಂದಿನ ಉತ್ತರಾಧಿಕಾರಿ ಯಾರು ಎನ್ನುವ ಕುತೂಹಲ ಇದ್ದೇ ಇರುತ್ತದೆ. ಈ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಟಾಟಾ ಕಂಪನಿ ಬೆಳೆದಿರುವ ಹಿಂದೆ ಇರುವುದು ಜೆಆರ್ ಡಿ ಟಾಟಾ ಮತ್ತು ರತನ್ ಟಾಟಾ ಅವರ ಹಲವು ವರ್ಷಗಳ ಪರಿಶ್ರಮ ಇದೆ. ಆದ್ರೆ ವಯಸ್ಸಿನ ಕಾರಣದಿಂದಾಗಿ ಇನ್ನು ಮುಂದೆ ರತನ್ ಟಾಟಾ ಈ ಸಂಸ್ಥೆಗೆ ಭದ್ರತೆ ಮತ್ತು ಜವಾಬ್ದಾರಿ ಮುನ್ನಡೆಸುವುದು ಕಷ್ಟ. ಹಾಗಾಗಿ ಈ ಬೃಹತ್ ಸಾಮ್ರಾಜ್ಯದ ಜವಾಬ್ದಾರಿಯನ್ನು ಯಾರಿಗಾದರೂ ವಹಿಸಲೇ ಬೇಕು. ಅದಕ್ಕಾಗಿ 34 ವರ್ಷದ ಮಾಯಾ ಟಾಟಾ ದೇಶದ ಅತ್ಯಂತ ಪ್ರಭಾವಶಾಲಿ ವ್ಯಾಪಾರ ಸಾಮ್ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಹೊರಲಿದ್ದಾರೆ.
ಹೌದು, ಮಾಯಾ ಟಾಟಾ ಅವರು ಟಾಟಾ ಗ್ರೂಪಿಗೆ ಸಂಬಂಧಿಸಿದ ಪ್ರಮುಖ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಮಾಯಾ, ರತನ್ ಟಾಟಾ ಅವರ ಸಹೋದರನ ಮಗಳು. ಮಾಯಾ ಟಾಟಾ ಅವರು ನೋಯೆಲ್ ಟಾಟಾ ಮತ್ತು ಆಲೂ ಮಿಸ್ತ್ರಿ ದಂಪತಿಯ ಪುತ್ರಿ. ನೋಯೆಲ್ ಟಾಟಾ, ರತನ್ ಟಾಟಾ ಅವರ ಮಲ ಸಹೋದರ. ಅವರ ತಾಯಿ,ಅಲ್ಲು ಮಿಸ್ತ್ರಿ, ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ದಿವಂಗತ ಸೈರಸ್ ಮಿಸ್ತ್ರಿ ಅವರ ಸಹೋದರಿ. ಮಿಸ್ತ್ರಿ ಕುಟುಂಬವು ಸೈರಸ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಮತ್ತು ಸ್ಟರ್ಲಿಂಗ್ ಇನ್ವೆಸ್ಟ್‌ಮೆಂಟ್ ಗ್ರೂಪ್ ಮೂಲಕ ಟಾಟಾ ಸನ್ಸ್‌ನಲ್ಲಿ 18.4% ಪಾಲನ್ನು ಹೊಂದಿದೆ. ಟಾಟಾ ಸನ್ಸ್‌ನಲ್ಲಿ ಅವರ ಪಾಲನ್ನು ಪರಿಗಣಿಸಿ, ಭವಿಷ್ಯದಲ್ಲಿ ಅವರೇ ಟಾಟಾ ಗ್ರೂಪ್ ಅನ್ನು ಮುನ್ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ.
ಈಗಾಗಲೇ 34ರ ಹರೆಯದ ಮಾಯಾ ಟಾಟಾ ಗ್ರೂಪ್‌ನಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಅವರು ವಾರ್ವಿಕ್ ವಿಶ್ವವಿದ್ಯಾನಿಲಯ ಮತ್ತು UK ಯ ಬೇಯೆಸ್ ಬಿಸಿನೆಸ್ ಸ್ಕೂಲ್ ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. ಟಾಟಾ ಕ್ಯಾಪಿಟಲ್‌ನ ಪ್ರಮುಖ ಖಾಸಗಿ ಇಕ್ವಿಟಿ ಫಂಡ್ ಟಾಟಾ ಆಪರ್ಚುನಿಟೀಸ್ ಫಂಡ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಇಲ್ಲಿ ಅವರು ಬಂಡವಾಳ ನಿರ್ವಹಣೆ ಮತ್ತು ಹೂಡಿಕೆದಾರರ ಸಂಬಂಧಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಮೂಲಗಳ ಪ್ರಕಾರ ಹಂತ ಹಂತವಾಗಿ ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸಲು ಇವರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಟಾಟಾ ಸನ್ಸ್‌ನ ಎಜಿಎಂನಲ್ಲಿ ಮಾಯಾ ಅವರ ಪಾತ್ರವನ್ನು ನೋಡಿದ ನಂತರ, ಭವಿಷ್ಯದಲ್ಲಿ ಈ ಸಾಮ್ರಾಜ್ಯದ ಜವಾಬ್ದಾರಿ ಮಾಯಾ ಟಾಟಾ ಕೈಗೆ ಹೋದರೆ ಆಶ್ಚರ್ಯವಿಲ್ಲ ಎನ್ನಲಾಗಿದೆ.