Paris Olympics 2024: 5 ದಶಕಗಳ ನಂತರ ನನಸಾದ ಕನಸು : 52 ವರ್ಷಗಳ ನಂತರ ಆಸ್ಟ್ರೇಲಿಯಾಕ್ಕೆ ಮಣ್ಣು ಮುಕ್ಕಿಸಿದ ಭಾರತ ಹಾಕಿ ತಂಡ
Paris Olympics 2024: ಕಳೆದ ಒಂದು ವಾರದಿಂದ ಪ್ಯಾರೀಸ್‌ನಲ್ಲಿ ಕ್ರೀಡಾ ಹಬ್ಬ ನಡೆಯುತ್ತಿದೆ. ನಮ್ಮ ದೇಶದ ಕ್ರೀಡಾ ಪಟುಗಳು ತಮ್ಮ ಸಾಮರ್ಥ್ಯವನ್ನು ತೋರುತ್ತಿದ್ದಾರೆ. ಈಗಾಗಲೇ ೩ ಕಂಚಿನ ಪದಕ ನಮ್ಮದಾಗಿದೆ. ಇದೀಗ ನಿನ್ನೆ ನಡೆದ ಪ್ಯಾರಿಸ್ ಒಲಿಂಪಿಕ್ಸ್ 2024ರ (Paris Olympics 2024) ಪುರುಷರ ಹಾಕಿ ಪೂಲ್ ಬಿ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಬರೋಬ್ಬರಿ 52 ವರ್ಷಗಳ ನಂತರ ಭಾರಿ ಆಘಾತವನ್ನೇ ಭಾರತ ತಂಡ ನೀಡಿದೆ. ಆಸ್ಟ್ರೇಲಿಯಾ ಹಾಕಿ ತಂಡವನ್ನು 3-2 ಗೋಲುಗಳಿಂದ ಸೋಲಿಸುವ ಮೂಲಕ ಭಾರತದ (India) ಹಾಕಿ (Hockey) ತಂಡವು ಐತಿಹಾಸಿಕ ಸಾಧನೆ ಮಾಡಿದೆ.
ಸರಿಯಾಗಿ 52 ವರ್ಷಗಳ ಹಿಂದೆ ಅಂದರೆ 1972ರ ಒಲಿಂಪಿಕ್ಸ್ ನಂತರ ಭಾರತ ಈವರೆಗೆ ಒಂದೇ ಒಂದು ಬಾರಿ ಹಾಕಿಯಲ್ಲಿ ಆಸ್ಟ್ರೇಲಿಯಾ (Australia) ತಂಡವನ್ನು ಸೋಲಿಸಲಿಲ್ಲ. ಇದೇ ಮೊದಲು ಬಾರಿಗೆ ಈ ಸಾಧನೆ ಮಾಡಿದೆ. ಕಳೆದ ಬಾರಿ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು ರಜತ ಪದಕ ಜಯಿಸಿತ್ತು.
ಭಾರತ ಪರ ಅಭಿಷೇಕ್ ಮತ್ತು ಹರ್ಮನ್‌ಪ್ರೀತ್ ಸಿಂಗ್ (2) ಗೋಲು ಗಳಿಸಿದರು. ಥಾಮಸ್ ಕ್ರೇಗ್ ಮತ್ತು ಬ್ಲೇಕ್ ಗೋವರ್ಸ್ ಆಸ್ಟ್ರೇಲಿಯಾ ಪರ ಗೋಲು ಗಳಿಸಿದರು. ಈ ಗೆಲುವಿನೊಂದಿಗೆ ಭಾರತ (10 ಅಂಕಗಳು, 5 ಪಂದ್ಯಗಳು) ಪೂಲ್ ಬಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.
ಪೂಲ್‌ನಲ್ಲಿ ಬೆಲ್ಜಿಯಂ ಮುನ್ನಡೆ ಸಾಧಿಸಿದರೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಭಾರತವು ನ್ಯೂಜಿಲೆಂಡ್ ವಿರುದ್ಧ ಜಯದೊಂದಿಗೆ ಓಟ ಆರಂಭಿಸಿತು. ಅರ್ಜೆಂಟೀನಾ ವಿರುದ್ಧದ ಪಂದ್ಯ ಡ್ರಾ ಆಯಿತು. ಐರ್ಲೆಂಡ್ ತಂಡದ ವಿರುದ್ಧ ಭಾರತ ಗೆಲುವು ದಾಖಲಿಸಿದೆ
ventolin pharmacy australia: cheap ventolin generic usa – buy ventolin australia
where can i buy ventolin in uk
neurontin prescription medication: neurontin tablets – prescription medication neurontin
100 mg prednisone daily: prednisone 300mg – prednisone 50 mg price
india pharmacy mail order: indian pharmacy paypal – top 10 online pharmacy in india
Muchas gracias. ?Como puedo iniciar sesion?