Olympics News: ಪುರುಷ ಅಥ್ಲೀಟ್ ಜೊತೆ ಸೆಣಸಿದ ಮಹಿಳಾ ಅಥ್ಲೀಟ್, 46 ಸೆಕೆಂಡ್ ನಲ್ಲೇ ಪಂದ್ಯ ಅಂತ್ಯ ವೇದಿಕೆಯಲ್ಲೇ ಬಿಕ್ಕಿಬಿಕ್ಕಿ ಅತ್ತ ಬಾಕ್ಸರ್ !
Olympics News: : ಪ್ಯಾರಿಸ್ ನಲ್ಲಿ ನಡೆಯುತ್ತಿರುವ Olympics 2024 ಕ್ರೀಡಾಕೂಟದಲ್ಲಿ ಹೊಸದೊಂದು ವಿವಾದ ಭಾರಿ ಸುದ್ದಿ ಮಾಡಿದ್ದು, ಮಹಿಳಾ ಬಾಕ್ಸರ್ ಜೊತೆ ”ಜೈವಿಕ ಪುರುಷ” ಬಾಕ್ಸರ್ ಸೆಣಸಾಡಿದ್ದು, ಪಂದ್ಯ ಕೇವಲ 45 ಸೆಕೆಂಡ್ ನಲ್ಲೇ ಅಂತ್ಯವಾಗಿ ವೇದಿಕೆಯಲ್ಲೇ ಮಹಿಳಾ ಬಾಕ್ಸರ್ ಬಿಕ್ಕಿ ಬಿಕ್ಕಿ ಅತ್ತ ಘಟನೆ ಇದೀಗ ವೈರಲ್ ಆಗುತ್ತಿದೆ.
ಹೌದು.. Paris Olympics 2024 ಕ್ರೀಡಾಕೂಟದಲ್ಲಿ ಭಾರಿ ವಿವಾದವೊಂದು ಕೇಳಿಬಂದಿದ್ದು, ಮಹಿಳಾ ಬಾಕ್ಸರ್ ವಿರುದ್ಧ ಪುರುಷ ಬಾಕ್ಸರ್ ಸ್ಪರ್ಧಿಸಿದ್ದು ಆ ಮೂಲಕ ವಂಚನೆ ಎಸಗಿದ ಆರೋಪವೊಂದು ಆಯೋಜಕರ ವಿರುದ್ಧ ಕೇಳಿ ಬಂದಿದೆ. ಅಲ್ಲಿ ಮಹಿಳೆಯರ ಬಾಕ್ಸಿಂಗ್ ನಲ್ಲಿ ಪುರುಷ ಸ್ಪರ್ಧಿಯೊಬ್ಬರು ಕಣಕ್ಕಿಳಿದಿದ್ದು, ಅಲ್ಲಿ ಕೇವಲ 46 ಸೆಕೆಂಡ್ಗಳಲ್ಲಿ ಎದುರಾಳಿಯನ್ನು ಪುರುಷ ಎಂದು ಆರೋಪಿಸಲಾಗಿರುವ ವ್ಯಕ್ತಿ ಸೋಲಿಸಿದ್ದು ಜಾಗತಿಕವಾಗಿ ಕ್ರೀಡಾಭಿಮಾನಿಗಳಲ್ಲಿ ಆಕ್ರೋಶ ಉಂಟುಮಾಡಿದೆ. ಪುರುಷ ಸ್ಪರ್ಧಿಯ ಪ0ಚ್ ಗೆ ತತ್ತರಿಸಿದ ಇಟಲಿಯ ಮಹಿಳಾ ಸ್ಪರ್ಧಿ ರಿಂಗ್ನಲ್ಲಿ ಕಣ್ಣೀರು ಹಾಕುವ ಜತೆಗೆ ಬಳಿಕ ಮಾಧ್ಯಮದ ಮುಂದೆಯೂ ಬೇಸರ ವ್ಯಕ್ತಪಡಿಸಿದ್ದಾರೆ. (Angela Carini vs Imane Khelif)
ಮಹಿಳೆಯರ 66 ಕೆಜಿ ವಿಭಾಗದ ಬಾಕ್ಸಿಂಗ್ ವಿಭಾಗದ ಪಂದ್ಯದಲ್ಲಿ ಮೊನ್ನೆ ಅಲ್ಜೇರಿಯಾದ Imane Khelif ಮತ್ತು ಇಟಲಿಯ Angela Carini ಪರಸ್ಪರ ಗುದ್ದಾಟ ನಡೆಸಿದ್ದರು. ಪಂದ್ಯ ಶುರುವಾಗುತ್ತಿದ್ದಂತೆಯೇ ಇಟಲಿಯ Angela Cariniಗೆ ಅಲ್ಜೇರಿಯಾದ Imane Khelif ಹೊಡೆತ ಬಲವಾಗಿ ಕೊಟ್ಟಿದ್ದರು. ಆ ಏಟು ಹೇಗಿತ್ತು ಅಂದ್ರೆ ಇಟಲಿಯ Angela Carini ತತ್ತರಿಸಿ ಹೋಗಿದ್ದಳು. ಇದಾದ ಕೆಲವೇ ಸೆಕೆಂಡ್ ಗಳಲ್ಲಿ Angela Carini ಪಂದ್ಯವನ್ನು ರದ್ದು ಮಾಡುವಂತೆ ರೆಫರಿಗಳನ್ನು ಕೋರಿದರು. ಅಭ್ಯರ್ಥಿಯ ಆಶಯದಂತೆ ರೆಫರಿಗಳು ಪಂದ್ಯ ರದ್ದು ಮಾಡಿ ಎದುರಾಳಿ Imane Khelif ರನ್ನು ವಿಜಯಿ ಎಂದು ಘೋಷಣೆ ಮಾಡಿದರು.
ವಿವಾದವಾಗಿ ಬದಲಾದ ಪಂದ್ಯ
ಈ ಬಾಕ್ಷಿಂಗ್ ಪಂದ್ಯದಲ್ಲಿ ಇಟಲಿಯ Angela Carini ಅವರ ಎದುರಾಳಿಯಾಗಿದ್ದ ಅಲ್ಜೇರಿಯಾದ Imane Khelif ಅಸಲಿಗೆ ಮಹಿಳೆಯೇ ಅಲ್ಲ ಅನ್ನೋದು ದೂರು. ಆಕೆ ಜೈವಿಕವಾಗಿ ಪುರುಷ ಎಂಬ ಆರೋಪ ಈಗ ಬಲವಾಗಿ ಕೇಳಿಬರುತ್ತಿದೆ. ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೇಲಿಫ್ ಈ ಹಿಂದೆ ಅಂದರೆ ಕಳೆದ ವರ್ಷ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಕಳೆದ ವರ್ಷ ವಿಶ್ವ ಚಾಂಪಿಯನ್ಶಿಪ್ನಲ್ಲಿ ಲಿಂಗ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಹಾಗಿದ್ದರೂ ಅವರಿಗೆ ಈ ಬಾರಿ ಒಲಿಂಪಿಕ್ಸ್ನಲ್ಲಿ ಅವಕಾಶ ಕೊಟ್ಟಿರುವುದು ವಿವಾದ ಹುಟ್ಟುಹಾಕಿದೆ. 25 ವರ್ಷದ ಖೆಲಿಫಾ ಅವರ ದೇಹದಲ್ಲಿ ಪುರುಷರ ದೇಹದಲ್ಲಿರುವ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಾಗಿದೆ ಎಂದು ಕಳೆದ ವರ್ಷ ಬೆಳಕಿಗೆ ಬಂದಿತ್ತು.
ಶುಕ್ರವಾರ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಖೇಲಿಫ್ ಮತ್ತು ತೈವಾನ್ ನ ಲಿನ್ ಯು-ಟಿಂಗ್ ಕಳೆದ ವರ್ಷ ವಿಶ್ವ ಚಾಂಪಿಯನ್ ಶಿಪ್ ಗೆ ಅನರ್ಹರಾಗಿದ್ದರು. ಆದರೆ ಪ್ಯಾರಿಸ್ ನಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ಕೊಡಲಾಗಿದೆ. ಟೆಸ್ಟೋಸ್ಟೆರಾನ್ ಮಟ್ಟದ ಅರ್ಹತಾ ಮಾನದಂಡಗಳನ್ನು ಪೂರೈಸಲು ವಿಫಲವಾದ ನಂತರ 25 ವರ್ಷದ ಖೇಲಿಫ್ ಅವರನ್ನು ಅಂದು ಅನರ್ಹಗೊಳಿಸಲಾಗಿತ್ತು ಎನ್ನಲಾಗಿದೆ. ಈಗ ಹಾಲಿ ಕ್ರೀಡಾಕೂಟದಲ್ಲಿ ಮಹಿಳೆಯರ 66 ಕೆ.ಜಿ ವಿಭಾಗದಲ್ಲಿ ಖೇಲಿಫ್ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದರು. ಈ ಪಂದ್ಯದಲ್ಲಿ ಇಟಲಿಯ ಕ್ಯಾರಿನಿ ಅವರ ವಿರುದ್ಧ ಸೆಣಸಿದ್ದು, ಕ್ಯಾರಿನಿ ಕೊಟ್ಟ ಮೂಗಿನ ಪಂಚ್ ಆಕೆಯನ್ನು ಗಂಭೀರವಾಗಿ ಗಾಯಗೊಳ್ಳುವಂತೆ ಮಾಡಿತು. ಆಕೆ ತಕ್ಷಣ ಸ್ಪರ್ಧೆಯನ್ನು ನಿಲ್ಲಿಸಲು ಮನವಿ ಮಾಡಿದರು.
”ಪುರುಷ” ಬಾಕ್ಸರ್ ನೊಂದಿಗೆ ತಮ್ಮ ಪಂದ್ಯ ಆಯೋಜನೆ ಮಾಡಿರುವುದಕ್ಕೆ ಇಟಲಿಯ Angela Carini ಅಸಮಾಧಾನ ವ್ಯಕ್ತಪಡಿಸಿದ್ದು ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಹಿಳಾ ಬಾಕ್ಸರ್ ಜೊತೆ ಪುರುಷ ಸ್ಪರ್ಧಿಗೆ ಅವಕಾಶ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ಆಕೆ ನಾನು ಅಗಲಿರುವ ತಂದೆಗಾಗಿ ಇಲ್ಲಿ ಸ್ಪರ್ಧೆಗೆ ಬಂದಿದ್ದೆ. ಆದರೆ, ಇದು ಅನ್ಯಾಯ. ಪುರುಷ ಸ್ಪರ್ಧಿಯ ಪಂಚ್ ಎದುರಿಸುವುದು ಅಸಾಧ್ಯ ಎಂದು ಕ್ಯಾರಿನಿ ಹೇಳಿಕೊಂಡಿದ್ದಾರೆ.
ಇಟಲಿ ಪ್ರಧಾನಿ ಮೆಲೋನಿ ಅಸಮಾಧಾನ
ಇನ್ನು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಜಾರ್ಜಿಯಾ ಮೆಲೋನಿ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕ್ಯಾರಿನಿ ಮತ್ತು ಇತರ ಮಹಿಳಾ ಕ್ರೀಡಾಪಟುಗಳು ದೈಹಿಕ ಮತ್ತು ಮಾನಸಿಕ ಹಿಂಸೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಪದಕದತ್ತ ನನ್ನ ಚಿತ್ತ
ಆದರೆ ವಿವಾದದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖೇಲಿಫ್, “ಅಂತಹ ಪ್ರಮುಖ ಸ್ಪರ್ಧೆಯಲ್ಲಿ ಗೆಲ್ಲುವುದು ಯಾವಾಗಲೂ ತೃಪ್ತಿಕರವಾಗಿದೆ, ನಾನು ಪದಕದ ಗುರಿಯತ್ತ ಗಮನ ಹರಿಸಿದ್ದೇನೆ” ಎಂದು ಹೇಳಿದ್ದಾರೆ. ಅಂತೆಯೇ ಖೇಲಿಫ್ ಬೆನ್ನಿಗೆ ಅಲ್ಜೀರಿಯಾದ ಒಲಿಂಪಿಕ್ ಸಮಿತಿ ನಿಂತಿದ್ದು, “ನಮ್ಮ ಅಥ್ಲೀಟ್ ಇಮಾನೆ ಖೇಲಿಫ್ ವಿರುದ್ಧ ಕೆಲವು ವಿದೇಶಿ ಮಾಧ್ಯಮಗಳು ದುರುದ್ದೇಶಪೂರಿತ, ಅನೈತಿಕ ದಾಳಿಗಳನ್ನು ನಡೆಸಿವೆ” ಎಂದು ಕಿಡಿಕಾರಿದೆ.
The Olympics allowed a biological man, Imane Khelif, to fight as a woman despite his XY chromosomes. The end result?
“I have never been hit so hard in my life.”
Italian Olympian Angela Carini lasted 46 seconds before quitting due to how painful it was. It’s just shameful that… pic.twitter.com/OWhKggM7qe
— Robby Starbuck (@robbystarbuck) August 1, 2024
npZThklNSCUJGDI