Wayanad Tragedy: ವಯನಾಡಿನ ಭೀಕರ ದುರಂತದಲ್ಲಿ ಕಾಣೆಯಾದವರು ಎಷ್ಟು..? : ನಾಪತ್ತೆಯಾದವರಿಗಾಗಿ ಬರೋಬ್ಬರಿ 3000 ಮಂದಿಯಿಂದ ಶೋಧ ಕಾರ್ಯ ಆರಂಭ

Wayanad Tragedy: ಕಳೆದ ಎರಡು ದಿನಗಳ ಹಿಂದೆ ಸ್ವರ್ಗದಂತಿದ್ದ ವಯನಾಡು ನರಕವಾಗಿ ಮಾರ್ಪಟ್ಟಿದೆ. ಮಣ್ಣಲ್ಲಿ ಮಣ್ಣಾದ ಜೀವಗಳ ಸಂಖ್ಯೆ 300 ದಾಟಿದೆ. ಈ ಮಧ್ಯೆ ಕಾಣೆಯಾಗಿರುವವರ ಸಂಖ್ಯೆ 206 ಅನ್ನೋದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಸೇನೆ ಹಾಗೂ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಮಕ ದಳ ಸೇರಿದಂತೆ ಎಲ್ಲಾ ತಂಡಗಳನ್ನು ಅವಿರತತ ಶ್ರಮ ವಹಿಸಿ ನಾಪತ್ತೆಯಾದವರ ಪತ್ತೆ ಕಾರ್ಯದಲ್ಲಿ ತೊಡಗಿದೆ.

ಭೂ ಕುಸಿತಕ್ಕೆ ಒಳಗಾದ ಜಾಗ ಸರಿ ಸುಮಾರು 8 ಕಿ ಮೀಟರ್‌ನಷ್ಟು ದೂರ ವ್ಯಾಪಿಸಿದೆ ಎಂದು ನಿನ್ನೆ ನಾಸಾ ಬಿಡುಗಡೆ ಮಾಡಿದ ವರದಿಯಲ್ಲಿ ಬಯಲಾಗಿದೆ. ಹಾಗಾಗಿ ಕಣ್ಮರೆಯಾದವರನ್ನು ಪತ್ತೆ ಮಾಡಲು ಇಂದಿನಿಂದ ಬರೋಬ್ಬರಿ 3 ಸಾವಿರ ಮಂದಿ ಕಾರ್ಯಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಈ ಬಗ್ಗೆ ವಯನಾಡು (Wayanad) ಜಿಲ್ಲಾಧಿಕಾರಿ ಮೇಘಾಶ್ರೀ (Meghashree) ಮಾಹಿತಿ ನೀಡಿದ್ದಾರೆ.

 

ವಯನಾಡಿನ ಜಿಲ್ಲಾಧಿಕಾರಿ ಕರ್ನಾಟಕದ ಚಿತ್ರದುರ್ಗದ ಮೂಲದವರು. ಅವರು ಕ್ಷಣ ಕ್ಷಣದ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡುತ್ತಿದ್ದಾರೆ. ಎಷ್ಟು ಜನ ಸಾವೀಗೀಡಾಗಿದ್ದಾರೆ ಎನ್ನುವುದಕ್ಕೆ ಇನ್ನು ನಿಖರ ಮಾಹಿತಿ ದೊರೆತಿಲ್ಲ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಮೃತಪಟ್ಟವರಲ್ಲಿ ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರು ಇರುವುದರಿಂದ ಪಕ್ಕಾ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ, ಹವಾಮಾನ ವೈಪರಿತ್ಯ ಮಧ್ಯೆಯೂ ಸುಮಾರು ಮೂ ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೇಘಾಶ್ರೀ ಹೇಳಿದ್ದಾರೆ.

ಈ ಭೀಕರ ಭೂಕುಸಿತ ಉಂಟಾದ ಸ್ಥಳದಲ್ಲಿ ಎಷ್ಟು ಮನೆಗಳೀದ್ದವು..? , ಎಷ್ಟು ಮಂದಿ ವಾಸವಾಗಿದ್ದರು ಎಂಬುದಕ್ಕೆ ರೇಷನ್‌ ಕಾರ್ಡ್‌ ನ್ನು ಪರಿಶೀಲನೆ ಮಾಡಲಾಗುತ್ತಿದೆ. ಸ್ತತಳೀಯರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಇನ್ನು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವವರ ಹತ್ತಿರ ತಮ್ಮ ಮನೆಯವರ ಬಗ್ಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರಿಂದ ಅವರ ಮನೆಯಲ್ಲಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ 206 ಜನ ನಾಪತ್ತೆಯಾಗಿದ್ದಾರೆ. ಆದರೆ ಇದು ಪಕ್ಕಾ ಮಾಹಿತಿ ಅಲ್ಲ. ಇನ್ನೆಷ್ಟು ಜನ ನಾಪತ್ತೆಯಾಗಿದ್ದಾರೆ ಅನ್ನುವುದರ ಬಗ್ಗೆ ಅಧಿಕೃತ ಮಾಹಿತಿ ದೊರೆಯಬೇಕಷ್ಟೆ. ಎಲ್ಲದಕ್ಕಿಂತ ಹೆಚ್ಚಾಗಿ ಸ್ಥಳೀಯ ನೆರವು ಅತ್ಯಗತ್ಯ. ಹಾಗೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ನಾಗರೀಕರು ಕೂಡ ಕಾರ್ಯಚರಣೆಗೆ ಸ್ಪಂದಿಸುತ್ತಿದ್ದಾರೆ. ನಾಪತ್ತೆಯಗಿರುವ ಪ್ರವಾಸಿಗರ ಬಗ್ಗೆ ಮಾಹಿತಿ ಕಲೆ ಹಾಕಿ ಅವರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಡಿಸಿ ಮಾಹಿತಿ ನೀಡಿದರು.

Gruha Lakshmi Scheme: ಮಹಿಳೆಯರೇ ಗಮನಿಸಿ! ಆಗಸ್ಟ್‌ ತಿಂಗಳ ಈ ದಿನ ಖಾತೆಗೆ ಬರಲಿದೆ ₹4,000; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

Leave A Reply

Your email address will not be published.