H D Kumarswamy: ‘ಮೈಸೂರು ಪಾದಯಾತ್ರೆಯಲ್ಲಿ ಅವನೊಬ್ಬ ಮಾತ್ರ ಇರಬಾರದು, ಹಾಗಿದ್ರೆ ಬರುತ್ತೇನೆ’ – ಷರತ್ತು ವಿಧಿಸಿದ HDK !!
H D Kumarswamy: ಮುಡಾ ಹಗರಣದಲ್ಲಿ(Muda Scam) ಸಿಎಂ ಸಿದ್ದರಾಮಯ್ಯ(CM Siddaramaiah) ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಆದರೆ, ಇದನ್ನು ವಿರೋಧಿಸಿದ H D ಕುಮಾರಸ್ವಾಮಿ(H D kumarswamy) ಅವರು, ಈ ಪಾದಯಾತ್ರೆಗೆ ಜೆಡಿಎಸ್(JDs) ಬೆಂಬಲ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದರು. ಆದರೀಗ ಬಿಜೆಪಿ ನಾಯಕರ ಮನವೊಲಿಕೆಗೆ ಕುಮಾರಸ್ವಾಮಿ ಅಸ್ತು ಎಂದಿದ್ದಾರೆ. ಆದರೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಒಂದು ಕಂಡೀಷನ್ ಹಾಕಿದ್ದಾರೆ.
ಪಾದಯಾತ್ರೆ ಕೈಗೊಂಡ ಬಿಜೆಪಿ ವಿರುದ್ಧ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನವೊಲಿಕೆ ಯತ್ನ ಮಾಡಿದ್ದು, ಈ ವೇಳೆ HDK ಕಂಡೀಷನ್ ಹಾಗಿದ್ದಾರೆ.
ಹೌದು, ಪಾದಯಾತ್ರೆಯಲ್ಲಿ ಪ್ರೀತಂ ಗೌಡ(Preetam Gouda) ಭಾಗಿಯಾಗಬಾರದು. ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಇರದಿದ್ದರೆ ಮಾತ್ರ ಜೆಡಿಎಸ್ ಭಾಗಿಯಾಗಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಗೆ ಜೆಡಿಎಸ್ ಖಡಕ್ ಸಂದೇಶ ರವಾನಿಸಿದೆ.
ಈ ಹಿಂದೆ ಕುಮಾರಸ್ವಾಮಿ ಏನು ಹೇಳಿದ್ರು?
ಕುಮಾರಸ್ವಾಮಿ ಹೇಳಿದ್ದೇನು?
ಪಾದಯಾತ್ರೆ ವಿಚಾರದಲ್ಲಿ ನಮ್ಮನ್ನು (ಜೆಡಿಎಸ್) ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಅದಕ್ಕೆ ನಮ್ಮ ಬೆಂಬಲವಿಲ್ಲ. ಹೀಗಾಗಿ ಇದರಲ್ಲಿ ಭಾಗವಹಿಸದಿರಲು ಜೆಡಿಎಸ್ ನಿರ್ಧರಿಸಿದೆ. ನಾವು ನೈತಿಕ ಬೆಂಬಲವೂ ಕೊಡಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು? ಬೆಂಗಳೂರು ಮೈಸೂರು ವರೆಗೂ ನಮ್ಮ ಶಕ್ತಿ ಇದೆ. ನಮ್ಮನ್ನು ಪರಿಗಣಿಸದಿದ್ದರೆ ಹೇಗೆ? ನನ್ನ ಮನಸ್ಸಿಗೆ ನೋವಾಗಿದೆ, ಯಾಕೆ ಬೆಂಬಲ ಕೊಡಬೇಕು? ಹಿಂದೆ ಸರಿದಿದ್ದೇವೆ ಎಂದು ಹೇಳಿದ್ದರು.