Harsha Sai: ಬಡವರಿಗೆ ಕಂತೆ ಕಂತೆ ಹಣ ದಾನ ಮಾಡೋ ಯೂಟ್ಯೂಬರ್ ಹರ್ಷ ಸಾಯಿ ಆಸ್ತಿ ಎಷ್ಟು ಗೊತ್ತೆ..?

Harsha Sai: ಸೋಷಿಯಲ್ ಮೀಡಿಯಾ ಯೂಸ್ ಮಾಡುವರಲ್ಲಿ ಹರ್ಷ ಸಾಯಿ(Harsha Sai) ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಆದರಲ್ಲೂ ತೆಲುಗು ರಾಜ್ಯಗಳಲ್ಲಿ ಇವರು ಎಲ್ಲರಿಗೂ ಚಿರಪರಿಚಿತ. ಕಂತೆ ಕಂತೆ ಹಣ ವನ್ನು ನೀಡುತ್ತಾ ಬಡವರಿಗೆ ಸಹಾಯ ಮಾಡುವ ಮೂಲಕ ಉತ್ತಮ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಬಡವರಿಗೆ ಟಿವಿ, ಫ್ರಿಡ್ಜ್ ಕೊಡುವುದು ಮತ್ತು ಹಣದ ಅವಶ್ಯಕತೆ ಇರುವವರಿಗೆ ಆರ್ಥಿಕ ನೆರವನ್ನು ಒದಗಿಸುವುದು ಸೇರಿದಂತೆ ಹಲವು ಒಳ್ಳೆಯ ಕೆಲಸಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಈ ಕಾರಣದಿಂದ ಹರ್ಷ ಸಾಯಿ ಫಾಲೋವರ್ಸ್‌ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಹಾಗಿದ್ರೆ ಈ ಹರ್ಷ ಸಾಯಿ ಬಳಿ ಇರೋ ಒಟ್ಟು ಆಸ್ತಿ ಎಷ್ಟು? ತಿಂಗಳಿಗೆ ಗಳಿಸುವ ಆದಾಯ ಎಷ್ಟು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

 

ಬಡವರಿಗೆ ಸಹಾಯ ಮಾಡುತ್ತಾ ಜನಪ್ರಿಯರಾಗಿರುವ ಹರ್ಷ ಸಾಯಿ ಅವರು 3 ಯೂಟ್ಯೂಬ್ ಚಾನೆಲ್(YouTube Channel)ಗಳನ್ನು ನಡೆಸುತ್ತಿದ್ದಾರೆ. ಈ 3 ಚಾನಲ್‌ಗಳು ಸುಮಾರು 30 ಮಿಲಿಯನ್ ಚಂದಾದಾರರನ್ನು ಹೊಂದಿವೆ. ಈ ವೇಳೆ ಹರ್ಷ ಸಾಯಿ ಅವರ ಆಸ್ತಿ ಮೌಲ್ಯದ ಮಾಹಿತಿ ಬಹಿರಂಗವಾಗಿದೆ. ವರದಿಗಳ ಪ್ರಕಾರ ಅವರ ಆಸ್ತಿ ಮೌಲ್ಯ 20 ರಿಂದ 22 ಕೋಟಿ ಎನ್ನಲಾಗಿದೆ.. ಅಲ್ಲದೆ, ತಿಂಗಳಿಗೆ 25 ಲಕ್ಷದಿಂದ 30 ಲಕ್ಷ ರೂಪಾಯಿ ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಹರ್ಷ ಫೇಮಸ್ ಆಗಿದ್ದು ಹೇಗೆ?
ಹೈದರಾಬಾದ್‌ನ 26 ವರ್ಷದ ಹರ್ಷ ಸಾಯಿ ಲಕ್ಷಾಂತರ ಜನರಿಗೆ ಸ್ಫೂರ್ತಿ. ಕಾಲೇಜಿನಿಂದ ಪದವಿ ಪಡೆದ ನಂತರ, ಹರ್ಷ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದರು. ಅಲ್ಲಿ ಅವರು ಫಿಟ್ನೆಸ್ ಸಂಬಂಧಿತ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು. ಈ ಮೂಲಕ ಸಾಕಷ್ಟು ಫಾಲೋವರ್ಸ್‌ಗಳನ್ನು ಗಳಿಸಿದರು. ಬಳಿಕ ಕೇವಲ 5 ರೂಪಾಯಿ ನಾಣ್ಯ ಕೊಟ್ಟು 4 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಖರೀದಿಸಿ ವಿಡಿಯೋ ಪೋಸ್ಟ್ ಮಾಡಿದರು. ಈ ವೀಡಿಯೊ ಉತ್ತಮ ರೀಚ್ ಆಗುತ್ತಿದ್ದಂತೆ, ಹರ್ಷ ಸಾಯಿ ತಮ್ಮ ಚಾನೆಲ್‌ನಲ್ಲಿ ದೆವ್ವದ ಮನೆಯಲ್ಲಿ ಉಳಿದುಕೊಳ್ಳುವುದು ಸೇರಿದಂತೆ ಹಲವು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ ಮೂಲಕ ಸಾಕಷ್ಟು ಫಾಲೋವರ್ಸ್‌ ಗಳಿಸಿದರು.

Leave A Reply

Your email address will not be published.