Jharkhand : 3 ತಿಂಗಳ ಹಿಂದೆ ಕಾಣೆಯಾಗಿದ್ದ ಹುಡುಗಿ ಗುಹೆಯೊಳಗೆ ಹಾವಾಗಿ ಪತ್ತೆ !! ಏನಿದು ವಿಸ್ಮಯ?

Share the Article

Jharkhand : ಭೂಮಿ ಮೇಲೆ ಎಷ್ಟೆಲ್ಲಾ ವಿಚಿತ್ರ ಘಟನೆಗಳು ನಡೆಯುತ್ತೆ ಅಂದ್ರೆ ನೀವು ಕೆಲವೊಂದನ್ನ ನಂಬಲು ಸಾಧ್ಯವಾಗುವುದಿಲ್ಲ. ಕೆಲವೊಂದು ಘಟನೆಗಳು ಮಾತ್ರ ಎಂತವರಲ್ಲು ಅಚ್ಚರಿ ಮೂಡಿಸುತ್ತವೆ. ಅಂತೆಯೇ ಇದೀಗ ನಾವು ಹೇಳ ಹೊರಟಿರುವ, ಸೋಷಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸುತ್ತಿರುವ ಘಟನೆಯು ಅಚ್ಚರಿ ಹುಟ್ಟಿಸುವುದು ಮಾತ್ರವಲ್ಲ ಅಘಾತವನ್ನೂ ಉಂಟುಮಾಡುತ್ತದೆ.

ಹೌದು, 3 ತಿಂಗಳ ಹಿಂದಷ್ಟೇ ನಾಪತ್ತೆಯಾಗಿದ್ದ ಮಹಿಳೆಯೊಬ್ಬಳು ಜಾರ್ಖಂಡ್ (Jharkhand) ಗರ್ವಾ ಜಿಲ್ಲೆಯ ಕರಿವಾಡಿಹ್ ಗ್ರಾಮದಲ್ಲಿರುವ ರಾಣಿದಿಹ್ ಗುಪ್ತಾ ಗುಹೆಯಲ್ಲಿ ಪತ್ತೆಯಾಗಿದ್ದಾಳೆ. ಆದರೆ ಆಕೆ ಹಾವಿನಂತೆ ಬದಲಾಗಿರುವುದು ಅಚ್ಚರಿಯ ಜೊತೆಗೆ ಕುತೂಹಲಕ್ಕೂ ಕಾರಣವಾಗಿದೆ. ವಿಡಿಯೋದಲ್ಲಿ ಅವಳು ನೆಲದ ಮೇಲೆ ಹಾವಿನಂತೆ ಮಲಗಿರುವುದು ಕಂಡುಬಂದಿದೆ. ಶಿವ ದೇವಾಲಯದ ಬಳಿಯ ಗುಹೆಯಲ್ಲಿ ಯುವತಿ ಹಾವಿನಂತೆ ವರ್ತಿಸುತ್ತಿರುವುದನ್ನು ಕಂಡ ಜನರು ಆಕೆಯನ್ನು ಹೊರಗೆ ಕರೆದೊಯ್ದು ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ.

ಅಂದಹಾಗೆ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಕಾಡಿನೊಳಗೆ ಪತ್ತೆಯಾಗಿರುವ ಅಚ್ಚರಿಯ ಘಟನೆ ನಡೆದಿದೆ. ನಾಪತ್ತೆಯಾಗಿ ಮೂರು ತಿಂಗಳ ಬಳಿಕ ಕಾಡಿನ ಗುಹೆಯೊಂದರಲ್ಲಿ ಹೀಗೆ ಮಹಿಳೆ ಪತ್ತೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಜನ ಈಕೆಯನ್ನು ನೋಡಲು ಸಾಗರೋಪಾದಿಯಲ್ಲೆ ನೆರೆದಿದ್ದಾರೆ.

ಕೋನೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಣಿದಿಹ್ ಗುಪ್ತಾ ಧಾಮ್ ಗುಹೆಯಲ್ಲಿ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಜನರು ಅಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

 

View this post on Instagram

 

A post shared by purvanchal (@purvanchal51)

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಮಂದಿ ಅಚ್ಚರಿಗೊಂಡಿರುವ ಜೊತೆಗೆ ಶಾಕ್‌ಗೆ ಒಳಗಾಗಿದ್ದಾರೆ. ಅಲ್ಲದೆ ಆಕೆ ಗುಹೆಯೊಳಗೆ ಸೇರಿಕೊಂಡಿದ್ದು ಹೇಗೆ ಎಂಬ ಕುತೂಹಲ ಮೂಡಿದೆ. ಜೊತೆಗೆ ಆಕೆಯ ನಿಜ ಕಥೆ ಬೇರೆಯದ್ದೇ ಇದೆ, ಮೂರು ತಿಂಗಳ ಕಾಲ ಗುಹೆಯೊಳಗೆ ಇರಲು ಸಾಧ್ಯವಾಗಿದ್ದು ಹೇಗೆ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ.

Leave A Reply

Your email address will not be published.