Wayanad Tragedy: ವಯನಾಡು ದುರಂತ : ಕರ್ನಾಕಟದ ನಾಲ್ವರು ಸಾವನ್ನಪ್ಪಿರುವ ಶಂಕೆ : ಬೆಂಗಳೂರಿನ ಪ್ರವಾಸಿಗರೂ ಕಣ್ಣರೆ : ಕನ್ನಡಿಗ ಯುವಕರ ತಂಡದಿಂದ ರಕ್ಷಣಾ ಕಾರ್ಯ

Wayanad Tragedy:  ಕೇರಳದ ವಯನಾಡು ದುರಂತ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಎಂದೂ ಕಂಡು ಕೇಳರಿಯದ ಈ ದುರ್ಘಟನೆಗೆ (Wayanad Landslides) ನೂರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಒಟ್ಟು ಸಾವಿನ ಸಂಖ್ಯೆ 143ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆಯಾಗಿದೆ. ಅಲ್ಲದೆ ಅಲ್ಲಿಯ ನೂರಾರು ನಿವಾಸಿಗಳು ಆಶ್ರಯ ಕಳೆದುಕೊಂಡಿದ್ದಾರೆ. ಕೇವಲ ಅಲ್ಲಿ ನಿವಾಸಿಗಳಲ್ಲೆದೆ, ವಯನಾಡಿನ ಮೆಪ್ಪಾಡಿಯಲ್ಲಿ ಸಂಭವಿಸಿದ ಘೋರ ಗುಡ್ಡಕುಸಿತ ದುರಂತದಲ್ಲಿ ನಾಲ್ವರು ಕನ್ನಡಿಗರೂ (Kannadigas) ಪ್ರಾಣ ತೆತ್ತಿದ್ದಾರೆ. ಅಲ್ಲದೇ ಮಂಡ್ಯದ ಇಬ್ಬರು ಹಾಗೂ ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಇಬ್ಬರು ಕನ್ನಡಿಗರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಇದುವರೆಗೆ 150ಕ್ಕೋ ಹೆಚ್ಚು ಮಂದಿ ಸಾವನ್ನಪ್ಪಿದ್ದು, 3 ಸಾವಿರಕ್ಕೂ ಅಧಿಕ ಮಂದಿಗೆ ನಿರಾತ್ರಿತ ಕೇಂದ್ರದಲ್ಲಿ ಆಸರೆ ನೀಡಲಾಗಿದೆ. 500ಕ್ಕೂ ಹೆಚ್ಚು ಜನರನ್ನ ರಕ್ಷಣೆ ಮಾಡಲಾಗಿದ್ದು, ಇನ್ನೂ 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಈ ಪೈಕಿ ನಮ್ಮ ರಾಜ್ಯದ ಕನ್ನಡಿಗರೂ ಇದ್ದಾರೆ ಎಂದು ರಕ್ಷಣಾ ತಂಡಗಳು ಮಾಹಿತಿ ನೀಡಿವೆ.

ಚಾಮರಾಜನಗರದ ನಾಲ್ವರ ದುರ್ಮರಣ:
ದೇವರನಾಡಲ್ಲಿ ಸಂಭವಿಸಿದ ಭೂಕುಸಿತಕ್ಕೆ ಚಾಮರಾಜನಗರ (Chamarajanagara) ಮೂಲದ ಪುಟ್ಟಸಿದ್ದಶೆಟ್ಟಿ (62), ರಾಣಿ ಮದರ್ (50), ರಾಜನ್, ರಜಿನಿ ಎಂಬವರು ಸಾವನ್ನಪ್ಪಿದ್ದಾರೆ. ರಾಜನ್ ಮತ್ತು ರಜನಿ ದಂಪತಿ ನಾಪತ್ತೆಯಾಗಿದ್ದಾರೆ. ಅಲ್ಲದೇ ಮಂಡ್ಯ ಕೆ.ಆರ್ ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮ ಲೀಲಾವತಿ, ನಿಹಾಲ್ ಎಂಬವರೂ ನಾಪತ್ತೆಯಾಗಿದ್ದಾರೆ. ಮೂವರು (ಅನಿಲ್, ಪತ್ನಿ ಝಾನ್ಸಿ, ತಂದೆ ದೇವರಾಜು) ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗ್ಳೂರಿಂದ ಹೋಗಿದ್ದ ಇಬ್ಬರು ಕಣ್ಮರೆ:
ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು, ವಯನಾಡ್‌ಗೆ ತೆರಳಿದ್ದ 4 ಪ್ರವಾಸಿಗರು ಹಾಗೂ ಬೆಂಗಳೂರಿನ ಒಬ್ಬ ಚಾಲಕ ಪ್ರವಾಹದಲ್ಲಿ ಸಿಲುಕಿದ್ದರೂ ಈ ಪೈಕಿ ಇಬ್ಬರು ಪ್ರವಾಸಿಗರು ಹಾಗೂ ಬೆಂಗಳೂರಿನ (Bengaluru Tourists) ಚಾಲಕ ಸುರಕ್ಷಿತವಾಗಿದ್ದಾರೆ. ಮತ್ತಿಬ್ಬರು ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹಾಗೆ
ರಕ್ಷಣಾ ಕಾರ್ಯಕ್ಕೆ ಕನ್ನಡಿಗರ ಯುವಕರ ತಂಡ ಹೋಗಿದೆ. ಮಡಿಕೇರಿ ಮೂಲದ ಸ್ವಯಂ ಸೇವಾ ಸಂಘಟನೆಯ 15 ಯುವಕರು ಅಂಬುಲೆನ್ಸ್‌ ಸಮೇತ ರಕ್ಷಣಾ ಸ್ಥಳಕ್ಕೆ ದೌಡಾಯಿಸಿದ್ದು, ಸೇವೆ ಸಲ್ಲಿಸುತ್ತಿದ್ದಾರೆ.

Kodi Shri: ನುಡಿದದ್ದೆಲ್ಲಾ ನಿಜವಾಗುತ್ತಿದ್ದಂತೆ ರಾಜ್ಯ ರಾಜಕೀಯದ ಕುರಿತು ಅಚ್ಚರಿ ಭವಿಷ್ಯ ಹೇಳಿದ ಕೋಡಿ ಶ್ರೀ !!

Leave A Reply

Your email address will not be published.