Recharge plans: ಯಾವ ರಿಚಾರ್ಜ್ ಪ್ಲಾನ್ ಬೆಸ್ಟ್ ಅನ್ನೋ ಗೊಂದಲ ಇದ್ಯಾ? ಇಲ್ಲಿದೆ ನೋಡಿ ಏರ್ಟೆಲ್, ಜಿಯೊ, BSNL ಡೇಟಾ ಪ್ಲಾನ್!

Recharge plans: ಭಾರತದ ಟೆಲಿಕಾಂ ಕಂಪನಿಗಳು ಹಲವಾರು ಇವೆ. ಅಂತೆಯೇ ಇದೀಗ ಜಿಯೋ ಮತ್ತು ಏರ್‌ಟೆಲ್ ಮತ್ತು ಬಿಎಸ್​ಎನ್​ಎಲ್ ಕಂಪೆನಿಗಳ ನಡುವಿನ ದರ ಪೈಪೋಟಿ  ದಿನೇ ದಿನೇ ಮುಂದುವರಿಯುತ್ತಲೇ ಇದೆ. ಸದ್ಯಕ್ಕೆ ಈ ಮೂರು ಬಳಕೆದಾರರಿಗೆ ಬೆಸ್ಟ್ ರಿಚಾರ್ಜ್ ಪ್ಲಾನ್ (Recharge plans) ಯಾವುದು ಎಂದು ಇಲ್ಲಿ ತಿಳಿಯಬಹುದಾಗಿದೆ.

 

ಏರ್ಟೆಲ್:

ಏರ್ಟೆಲ್​ನಲ್ಲಿ ಒಂದು ವರ್ಷದ ವ್ಯಾಲಿಡಿಟಿ ಇರುವ ಮೂರು ಪ್ಲಾನ್​ಗಳಿವೆ. 1,999 ರೂ ಪ್ಲಾನ್​ನಲ್ಲಿ ಒಟ್ಟಾರೆ 24 ಜಿಬಿ ಡಾಟಾ ಸಿಗುತ್ತದೆ. ಮೂರು ತಿಂಗಳು ಅಪೋಲೋ ಸಬ್​ಸ್ಕ್ರಿಪ್ಷನ್ ಸಿಗುತ್ತದೆ. ವಿಂಕ್​ನಲ್ಲಿ ಹಲೋ ಟ್ಯೂನ್ ಮತ್ತು ವಿಂಕ್ ಮ್ಯೂಸಿಕ್ ಸಬ್​ಸ್ಕ್ರಿಪ್ಷನ್ ಕೂಡ ಸಿಗುತ್ತದೆ. ದಿನದ ಲೆಕ್ಕದಲ್ಲಿ ಡಾಟಾ ಇರುವುದಿಲ್ಲ.

ಇನ್ನು ಏರ್ಟೆಲ್​ನ 3,599 ರೂ ಪ್ಲಾನ್​ನಲ್ಲಿ ದಿನಕ್ಕೆ ಎರಡು ಜಿಬಿ ಡಾಟಾ ಸಿಗುತ್ತದೆ. ಅನ್​ಲಿಮಿಟೆಡ್ 5ಜಿ ಡಾಟಾ, ಅಪೋಲೋ, ವಿಂಕ್ ಹಲೋ ಟ್ಯೂನ್, ವಿಂಕ್ ಮ್ಯೂಸಿಕ್ ಸಬ್​ಸ್ಕ್ರಿಪ್ಷನ್ ಸಿಗುತ್ತದೆ.

ಏರ್ಟೆಲ್​ನ 3,999 ರೂ ಪ್ಲಾನ್ ಕೂಡ 365 ದಿನದ ವ್ಯಾಲಿಡಿಟಿ ಹೊಂದಿದೆ. ದಿನಕ್ಕೆ 2.5 ಜಿಬಿ ಡಾಟಾ ಇದು ಒದಗಿಸುತ್ತದೆ. ಡಿಸ್ನಿ ಹಾಟ್​ಸ್ಟಾರ್, ಅನ್​ಲಿಮಿಟೆಡ್ ಡಾಟಾ, ಅಪೋಲೋ, ವಿಂಕ್ ಟ್ಯೂನ್, ವಿಂಕ್ ಮ್ಯೂಸಿಕ್ ಸೇವೆ ಕೂಡ ಲಭ್ಯ ಇರುತ್ತದೆ.

ಜಿಯೋ:

ಜಿಯೋದಿಂದ 365 ದಿನಗಳ ವ್ಯಾಲಿಡಿಟಿ ಇರುವ ಎರಡು ರೀಚಾರ್ಜ್ ಪ್ಲಾನ್​ಗಳಿವೆ. 3,599 ರೂ ಪ್ಲಾನ್​ನಲ್ಲಿ ಗ್ರಾಹಕರು ದಿನಕ್ಕೆ 2.5 ಜಿಬಿ ಡಾಟಾ ಬಳಕೆ ಮಾಡಬಹುದು. ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್​ಗೆ ಉಚಿತವಾಗಿ ಸಬ್​ಸ್ಕ್ರಿಪ್ಷನ್ ಕೂಡ ಸಿಗುತ್ತದೆ. ಇನ್ನು ರಿಲಾಯನ್ಸ್ ಜಿಯೋದಿಂದ 365 ದಿನಗಳ ವ್ಯಾಲಿಡಿಟಿ ಇರುವ 3,999 ರೂ ಪ್ಲಾನ್ ಕೂಡ ಇದೆ. 3,599 ರೂ ಪ್ಲಾನ್​ನಂತೆ ಇದೂ ಕೂಡ ದಿನಕ್ಕೆ 2.5 ಜಿಬಿ ಡಾಟಾ ಬಳಕೆಗೆ ಅನುವು ಮಾಡಿಕೊಡುತ್ತದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಜೊತೆಗೆ ಫ್ಯಾನ್ ಕೋಡ್​ಗೂ ಇದು ಉಚಿತವಾಗಿ ಸಬ್​ಸ್ಕ್ರಿಪ್ಷನ್ ಕೊಡುತ್ತದೆ.

ಬಿಎಸ್​ಎನ್​ಎಲ್​:

ಬಿಎಸ್​ಎನ್​ಎಲ್ ನಲ್ಲಿ 365 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್​ಗಳ ಸಂಖ್ಯೆ ಬರೋಬ್ಬರಿ 10 ಇವೆ. ಕೇವಲ 321 ರೂನಿಂದ ಆರಂಭವಾಗಿ 2,999 ರೂವರೆಗೆ ಬೇರೆ ಬೇರೆ ಆಫರ್ ಪ್ಲಾನ್​ಗಳಿವೆ. ಡಾಟಾ ಬಳಕೆ ತಕ್ಕಂತೆ ಪ್ಲಾನ್ ವೈವಿಧ್ಯತೆ ಇದೆ.

ಬಿಎಸ್​ಎನ್​ಎಲ್ ನ 321 ರೂ ಪ್ಲಾನ್​ನಲ್ಲಿ 15ಜಿಬಿ ಡಾಟಾ ಸಿಗುತ್ತದೆ. 1,198 ರೂ ಪ್ಲಾನ್​ನಲ್ಲಿ 3ಜಿಬಿ ಡಾಟಾ ಸಿಗುತ್ತದೆ. 1,999 ರೂ ಪ್ಲಾನ್​ನಲ್ಲಿ 600 ಜಿಬಿಯಷ್ಟು ಡಾಟಾ ಕೊಡುತ್ತದೆ. 1,498 ರೂ ಪ್ಲಾನ್​ಲ್ಲಿ 120 ಜಿಬಿ ಡಾಟಾ ಸಿಗುತ್ತದೆ. 2,999 ರೂ ಪ್ಲಾನ್​ ಕೂಡ ಸಾಕಷ್ಟು ಡಾಟಾ ಬಳಕೆಗೆ ಅವಕಾಶ ಕೊಡುತ್ತದೆ.

 

ಇನ್ನು, ದಿನದ ಲೆಕ್ಕದಲ್ಲಿ ಡಾಟಾ ಕೊಡುವ ವರ್ಷದ ವ್ಯಾಲಿಡಿಟಿಯ ಪ್ಯಾಕ್​ಗಳನ್ನು ಬಿಎಸ್​ಎನ್​ಎಲ್ ಹೊಂದಿದೆ. 1,515 ರೂನಲ್ಲಿ ದಿನಕ್ಕೆ 2 ಜಿಬಿ ಡಾಟಾ ಸಿಗುತ್ತದೆ. 2,999 ರೂ ಪ್ಲಾನ್​ನಲ್ಲಿ ದಿನಕ್ಕೆ 3 ಜಿಬಿ ಡಾಟಾ ಸಿಗುತ್ತದೆ. 1,551 ರೂ ಪ್ಲಾನ್​ಲ್ಲಿ ದಿನಕ್ಕೆ 2ಜಿಬಿ ಡಾಟಾ ಸಿಗುತ್ತದೆ. 1,859 ರೂ ಪ್ಲಾನ್​ನಲ್ಲಿ ದಿನಕ್ಕೆ 2 ಜಿಬಿ ಡಾಟಾ ಸಿಗುತ್ತೆ.

ಏರ್​ಟೆಲ್ ಮತ್ತು ಜಿಯೋ ಸಂಸ್ಥೆಗಳು 5ಜಿ ನೆಟ್ವರ್ಕ್ ಹೊಂದಿದೆ. ಇಲ್ಲಿ ಬಳಕೆದಾರರು ಬಹಳ ಉನ್ನತ ಸ್ಪೀಡ್​ನ ಡಾಟಾ ಪಡೆಯಬಹುದು. ಆದ್ರೆ ಬಿಎಸ್​ಎನ್​ಎಲ್ ಇನ್ನೂ ಕೂಡ 5ಜಿಗೆ ಅಪ್​ಗ್ರೇಡ್ ಆಗಿಲ್ಲ. 3ಜಿ ಮತ್ತು 4ಜಿ ಡಾಟಾ ಸ್ಪೀಡ್ ಮಾತ್ರ ಬಿಎಸ್​ಎನ್​ಎಲ್ ಪ್ಲಾನ್​ಗಳಲ್ಲಿ ಲಭ್ಯ ಇರುತ್ತದೆ. ಬಹಳ ಹೈಸ್ಪೀಡ್ ಡಾಟಾದ ಅಗತ್ಯ ಇಲ್ಲ ಎನ್ನುವವರು ಬಿಎಸ್​ಎನ್​ಎಲ್ ಪ್ಲಾನ್ ಆಯ್ಕೆ ಮಾಡಬಹುದು.

2 Comments
  1. tlovertonet says

    I got what you intend, regards for posting.Woh I am lucky to find this website through google. “I was walking down the street wearing glasses when the prescription ran out.” by Steven Wright.

  2. cbd einweg vape says

    I conceive you have noted some very interesting details , appreciate it for the post.

Leave A Reply

Your email address will not be published.