Subramanian Swamy: ‘ಮೋದಿ ಯೂಸ್ ಲೆಸ್, ಬೇಗ ಹೊರ ಹಾಕಿ’ – ಪ್ರಬಲ ಬಿಜೆಪಿ ನಾಯಕನಿಂದ ಅಚ್ಚರಿ ಸ್ಟೇಟ್ಮೆಂಟ್!!

Share the Article

Subramanian Swamy: ಬಿಜೆಪಿ ಪಕ್ಷದಲ್ಲಿದ್ದುಕೊಂಡೆ ಬಿಜೆಪಿ ನಾಯಕರನ್ನು, ಪಕ್ಷದ ಕೆಲವು ನಿರ್ಧಾರಗಳನ್ನು ಟೀಕಿಸುತ್ತಾ ಬರುತ್ತಿದ್ದ ಸುಬ್ರಮಣೆಯನ್ ಸ್ವಾಮಿ(Subramanian Swamy) ಅವರು ಇದೀಗ ಪ್ರಧಾನಿ ಮೋದಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಹೌದು, ಇದುವರೆಗೂ ಪರೋಕ್ಷವಾಗಿ ತನ್ನದೇ ಪಕ್ಷದ ನಾಯಕರನ್ನು ಟೀಕಿಸುತ್ತಿದ್ದ ಸುಬ್ರಹ್ಮಣಿಯನ್ ಅವರು ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನ ಬಹಿರಂಗವಾಗಿ ಟೀಕಿಸಿದ್ದು, “ಪ್ರಧಾನಿ ಮೋದಿ ಯೂಸ್ ಲೆಸ್, ಅವರನ್ನ ಹೊರಹಾಕಿ” ಎಂದು ಎಲ್ಲರಿಗೂ ಶಾಕ್ ನೀಡಿದ್ದಾರೆ.

ಇಂಡಿಯಾ ಡೈಲಿ ಲೈವ್ನ ಇಂಡಿಯಾ ಮಂಚ್ನಲ್ಲಿ ಮಾತನಾಡಿದ ಸ್ವಾಮಿ ಅವರು “ಪ್ರಧಾನಿ ಮೋದಿ(PM Modi) ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಿದರೆ ನಮ್ಮ ಪಕ್ಷದ ಹಿತದೃಷ್ಟಿಯಿಂದ ಅವರನ್ನು ಹೊರಹಾಕಬೇಕು. ಇದನ್ನು ನೇರವಾಗಿ ಮಾತನಾಡಲು ಇತರರು ಹೆದರುತ್ತಾರೆ. ಆದರೆ ನನಗೆ ಭಯವಿಲ್ಲ, ಅದಕ್ಕಾಗೀಯೇ ನಾನು ಮಾತನಾಡುತ್ತೇನೆ’ ಎಂದಿದ್ದಾರೆ.

ಬಳಿಕ ಮಾತನಾಡಿದ ಅವರು “ನಾನು ಈ ಹಿಂದೆ ಮೋದಿಗೆ ಸಹಾಯ ಮಾಡಿದ್ದೇನೆ, ಏಕೆಂದರೆ ಆ ಸಮಯದಲ್ಲಿ, ಕಾಂಗ್ರೆಸ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಸೋಲಿಸುವುದು ಅಗತ್ಯವಾಗಿತ್ತು” ಎಂದು ಹೇಳಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

Leave A Reply

Your email address will not be published.