Most Beautiful Women: ವಿಶ್ವದ 10 ಅತಿ ಸುಂದರ ಮಹಿಳೆಯರ ಪಟ್ಟಿ ಬಿಡುಗಡೆ – ಇದರಲ್ಲಿದ್ದಾರೆ ಭಾರತದ ಏಕೈಕ ನಟಿ !!

Share the Article

Most Beautiful Women: ಸೌಂದರ್ಯ ಇಂತಹವುದೇ ಅಂತ ಒಂದು ಸ್ಪಷ್ಟ ವ್ಯಾಖ್ಯಾನ ಇಲ್ಲ. ನೋಡುಗರ ದೃಷ್ಟಿಯಲ್ಲಿ ಸೌಂದರ್ಯ ಇರುತ್ತದೆ. ಪ್ರಪಂಚದಾದ್ಯಂತದ ಬಹು ಜನರ ಆದ್ಯತೆಗಳನ್ನು ಸಮೀಕ್ಷೆಯ ಮೂಲಕ ವಿಶ್ವದ 10 ಆಕರ್ಷಕ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಏಕೈಕ ನಟಿಯೊಬ್ಬರು ಸ್ಥಾನ ಪಡೆದಿದ್ದಾರೆ.

ಹೌದು, ಪ್ರಸಕ್ತ ವರ್ಷದ ವಿಶ್ವದ ಅತ್ಯಂತ ಸುಂದರ ಮಹಿಳೆ ಪಟ್ಟಿಯನ್ನು ಗೋಲ್ಡನ್ ರೇಶಿಯೋ(Golden Ratio) ಬಿಡುಗಡೆ ಮಾಡಿದೆ. ಬಾಹ್ಯ ಸೌಂದರ್ಯ ಮಾತ್ರವಲ್ಲ, ಹಲವು ಆಯಾಮ ಹಾಗೂ ಮಾನದಂಡಗಳನ್ನಿಟ್ಟುಕೊಂಡು ಈ ಪಟ್ಟಿ ತಯಾರಿಸಲಾಗಿದೆ. ಈ ಪೈಕಿ ವಿಶ್ವದ ಮೋಸ್ಟ್ ಬ್ಯೂಟಿಫುಲ್ ಮಹಿಳೆ ಅನ್ನೋ ಕಿರೀಟ ನಟಿ ಅನ್ಯ ಟೇಲರ್ ಜಾಯ್(Anya Taylor joy) ಪಾಲಾಗಿದ್ದರೆ ಇದರಲ್ಲಿ 9ನೇ ಸ್ಥಾನವನ್ನು ನಮ್ಮ ಭಾರತದ ಬಾಲಿವುಡ್ ನಟಿ ಪಡೆದುಕೊಂಡಿದ್ದಾರೆ. ಹಾಗಿದ್ರೆ ಆ ನಟಿ ಯಾರು? ಉಳಿದಂತೆ ಟಾಪ್ 10 ಲಿಸ್ಟ್ ನಲ್ಲಿ ಯಾರಿದ್ದಾರೆ? ನೋಡೋಣ ಬನ್ನಿ.

ಟಾಪ್ 10 ಪಟ್ಟಿಯಲ್ಲಿ ಹಾಲಿವುಡ್ ಸೇರಿದಂತೆ ಹಲವು ಸಿನಿಮಾ, ಮಾಡೆಲ್ ಕ್ಷೇತ್ರದ ಸುಂದರ ಮಹಿಳೆಯರು ಕಾಣಿಸಿಕೊಂಡಿದ್ದಾರೆ. ಈ ಪೈಕಿ 9ನೇ ಸ್ಥಾನದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಸ್ಥಾನ ಪಡೆದಿದ್ದಾರೆ. ಗೋಲ್ಡನ್ ರೇಶಿಯೋ ಲಿಸ್ಟ್‌ನಲ್ಲಿ ಅಲಿಯಾ ಭಟ್(Alia Bhat) ಶೇಕಡಾ 91.14 ರೇಟಿಂಗ್ ಪಡೆಯುವ ಮೂಲಕ 9ನೇ ಸ್ಥಾನದಲ್ಲಿದ್ದಾರೆ.

ವಿಶ್ವದ 10 ಅತ್ಯಂತ ಸುಂದರ ಮಹಿಳೆಯರು
1. ಅನ್ಯಾ ಟೇಲರ್-ಜಾಯ್ – 94.66%
2. ಝೆಂಡಯಾ – 94.37%
3. ಬೆಲ್ಲಾ ಹಡಿದ್ – 94.35%
4. ಮಾರ್ಗಾಟ್ ರಾಬಿ – 93.43%
5. ಸಾಂಗ್ ಹೈ-ಕ್ಯೋ – 92.67%
6. ಬೆಯಾನ್ಸ್ – 92.4%
7. ಟೇಲರ್ ಸ್ವಿಫ್ಟ್ – 91.64%
8. ಜಾಂಗ್ ಜಿಯಿ – 91.51%
9. ಆಲಿಯಾ ಭಟ್ – 91.14%
10. ನಜಾನಿನ್ ಬೊನಿಯಾಡಿ – 90.89%

ಏನಿದು ಗೋಲ್ಡನ್ ರೇಶಿಯೋ :
ಸೌಂದರ್ಯವನ್ನು ಅಲೆಯಲು ಗ್ರೀಕ್‌ನಲ್ಲಿ ಕಂಡುಕೊಂಡು ಪುರಾತನ ವಿಧಾನವೇ ಗೋಲ್ಡನ್ ರೇಶಿಯೋ. ಸೌಂದರ್ಯ, ಎತ್ತರ, ಮಾತು, ದೇಹ ಸೇರಿದಂತೆ ಹಲವು ಅಂಶಗಲನ್ನು ಪರಿಣಿಸಿ ಹೆಣ್ಣಿನ ಸೌಂದರ್ಯವನ್ನು ಅಲೆಯಲಾಗುತ್ತದೆ. ಇದೇ ಪಾರ್ಮುಲಾವನ್ನು ಲಿಯಾನಾರ್ಡೋ ಡಾ ವಿನ್ಸಿ ಚನ್ನ ಆರ್ಟ್ ವರ್ಕ್‌ಗೆ ಇದೇ ಲೆಕ್ಕಾಚಾರ ಅನುಸರಿಸುತ್ತಿದ್ದರು.

Leave A Reply

Your email address will not be published.