Rajasthan: ಕಾಂಗ್ರೆಸ್ ಜಾರಿಗೊಳಿಸಿದ್ದ ಎರಡು ಉಚಿತ ಯೋಜನೆಗಳನ್ನು ರದ್ದು ಮಾಡಿದ ಬಿಜೆಪಿ ಸರ್ಕಾರ- ಇನ್ಮುಂದೆ ರಾಜ್ಯದ ಜನತೆಗೆ ಸಿಗೋಲ್ಲ ಈ 2 ಫ್ರೀ ಸ್ಕೀಮ್ !!

Rajasthan: ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಎರಡು ಉಚಿತ ಯೋಜನೆಗಳನ್ನು ಇದೀಗ ಬಿಜೆಪಿ ಸರ್ಕಾರ ಬ್ಯಾನ್ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಇನ್ಮುಂದೆ ಈ ಎರಡು ಉಚಿತ ಯೋಜನೆಗಳು ಇರುವುದಿಲ್ಲ. ಹಾಗಂತ ಹೇಳಿ ನಮ್ಮ ರಾಜ್ಯದ ಜನ ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ ಇದು ನಮ್ಮ ಕರ್ನಾಟಕದಲ್ಲಿ ನಡೆದಂತಹ ಬೆಳವಣಿಗೆಯಲ್ಲ. ಬದಲಿಗೆ ರಾಜಸ್ಥಾನದಲ್ಲಿ(Rajasthan )ನಡೆದಿರುವ ರಾಜಕೀಯ ಬೆಳವಣಿಗೆ.

Chetana Chakravarti: ಭಾರತದ ಗಂಡಸರು ‘ಅದನ್ನು’ ಸರಿಯಾಗಿ ಮಾಡೊಲ್ಲ, ಸೋ ಅವರೊಂದಿಗೆ ಡೇಟ್ ಮಾಡಲು ನಂಗೆ ಇಷ್ಟವೇ ಆಗಲ್ಲ !! ಮಹಿಳೆ ವಿಡಿಯೋ ವೈರಲ್

ವಿಧಾನಸಭಾ ಚುನಾವಣೆಯಲ್ಲಿ(Assembly Election) ರಾಜ್ಯದಲ್ಲಿ ಕಾಂಗ್ರೆಸ್ ತಾನು ಗೆದ್ದರೆ ಪಂಚ ಗ್ಯಾರಂಟಿಯನ್ನು ನೀಡುವುದಾಗಿ ಘೋಷಿಸಿ ಅಧಿಕಾರಕ್ಕೆ ಬಂದ ಬಳಿಕ ಆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದೇ ರೀತಿ ಬೇರೆ ಬೇರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಕೂಡ ತಮ್ಮ ರಾಜ್ಯದಲ್ಲಿ ಉಚಿತ ಯೋಜನೆಗಳನ್ನು ಜಾರಿಗೊಳಿಸಿದ್ದವು. ಅಂತೆಯೇ ರಾಜಸ್ಥಾನದಲ್ಲೂ ಕೂಡ. ಆದರೀಗ ರಾಜಸ್ಥಾನದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ(BJP) ಸರ್ಕಾರವು ಕಾಂಗ್ರೆಸ್ ತಂದಿದ್ದ ಎರಡು ಗ್ಯಾರಂಟಿ ಯೋಜನೆಗಳನ್ನು ಬ್ಯಾನ್ ಮಾಡಿದೆ.

ಹೌದು, ರಾಜಸ್ಥಾನದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಕೆಲವು ಉಚಿತ ಸ್ಟೀಂಗಳ ಮೇಲೆ ಪ್ರಹಾರ ನಡೆಸಿರುವ ಬಿಜೆಪಿ ಸರ್ಕಾರ, ಅವುಳಿಗೆ ತಡೆ ನೀಡುವ ತೀರ್ಮಾನ ಕೈಗೊಂಡಿದೆ. ಅಂದರೆ ಹಳೆಯ ಫಲಾನುಭವಿಗಳಿಗೆ ಯೋಜನೆ ಮುಂದುವರಿಸಿ ಹೊಸಬರಿಗೆ ಯೋಜನೆ ಅನ್ವಯ ಆಗದಂತೆ ನಿಯಮ ಮಾರ್ಪಡಿಸಿದೆ. ಹೀಗಾಗಿ ಪ್ರತಿ ಮನೆಗೆ ಮಾಸಿಕ 100 ಯುನಿಟ್ ಉಚಿತ ವಿದ್ಯುತ್(Free Current)ಹಾಗೂ ಮಹಿಳೆಯರಿಗೆ ಉಚಿತ ಮೊಬೈಲ್ ಫೋನ್(Free Mobile Phone)ಅನ್ನು ಇನ್ಮುಂದೆ ಹೊಸದಾಗಿ ಯಾರಿಗೂ ನೀಡುವುದಿಲ್ಲ ಎಂದು ಸರ್ಕಾರ ಘೋಷಿಸಿದೆ.

ಅಂದಹಾಗೆ ಈ ವರ್ಷದ ಮಾರ್ಚ್‌ವರೆಗೆ ಈ ಯೋಜನೆಗೆ 98.23 ಲಕ್ಷ ಕುಟುಂಬಗಳು ಹೆಸರು ನೋಂದಾಯಿಸಿವೆ. ಅವುಗಳಿಗೆ ಮಾತ್ರ ಉಚಿತ ವಿದ್ಯುತ್ ಮುಂದುವರಿಸಲು ಈಗಿನ ಭಜಲ್‌ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಆದರೆ ಈ ಯೋಜನೆಯಡಿ ಇನ್ನು ಹೊಸ ನೋಂದಣಿಗೆ ಅವಕಾಶವಿಲ್ಲ ಎಂದು ಹೇಳಿದೆ. ಜೊತೆಗೆ ಪ್ರತಿ ಮನೆಯ ಒಬ್ಬ ಮಹಿಳೆಗೆ ಮೊಬೈಲ್ ಫೋನ್ ನೀಡುವ ಗೆಹೋಟ್ ಅವರ ಮತ್ತೊಂದು ಯೋಜನೆಗೆ ತಡೆ ನೀಡಲಾಗಿದೆ.

Leave A Reply

Your email address will not be published.