NPS Vatsalya: ಇನ್ಮುಂದೆ “ವಾತ್ಸಲ್ಯ” NPS ಯೋಜನೆಯಡಿ ಮಕ್ಕಳಿಗೂ ಸಿಗುತ್ತೆ ಪಿಂಚಣಿ!

NPS Vatsalya: ಕೇಂದ್ರ ಸರ್ಕಾರದ 2024-25ರ ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈ ವರ್ಷದ ಬಜೆಟ್‌ನಲ್ಲಿ “ಎನ್‌ಪಿಎಸ್ ವಾತ್ಸಲ್ಯ ಯೋಜನೆ” (NPS Vatsalya) ಎಂಬ ಹೊಸ ಯೋಜನೆಯೊಂದರ ಕುರಿತು ಪ್ರಸ್ತಾಪ ಮಾಡಿದ್ದಾರೆ. ಇದು ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಹಣ ಉಳಿತಾಯ ಮಾಡುವ ಹೊಸ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಯು ಮಕ್ಕಳ ಪರವಾಗಿ ಪೋಷಕರು ಹಣ ಉಳಿತಾಯ ಮಾಡಲು ಸಹಾಯ ಮಾಡಲಿದೆ.

ವಿತ್ತ ಸಚಿವೆ ಬಜೆಟ್ ಮಂಡನೆಯಲ್ಲಿ ಹೇಳಿರುವಂತೆ “ಎನ್‌ಪಿಎಸ್-ವಾತ್ಸಲ್ಯ, ಮಕ್ಕಳು ವಯಸ್ಕರಾದ ನಂತರ, ಯೋಜನೆಯನ್ನು ಸಾಮಾನ್ಯ ಸಾಮಾನ್ಯ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಖಾತೆಯನ್ನಾಗಿ ಪರಿವರ್ತಿಸಬಹುದು ಅಂದರೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಇದಾಗಿದ್ದು, ಸರ್ಕಾರದಿಂದ ನಡೆಸಲ್ಪಡುವ ಪಿಂಚಣಿ ಯೋಜನೆಯಾಗಿದೆ. ಇದರಿಂದ ನಿವೃತ್ತಿಯ ನಂತರವೂ ಆದಾಯ ಪಡೆಯಬಹುದು.” ಎಂದು ತಿಳಿಸಿದ್ದಾರೆ.

NPS ವಾತ್ಸಲ್ಯ ಯೋಜನೆಯು ಪೋಷಕರು ತಮ್ಮ ಮಕ್ಕಳ ಭವಿಷ್ಯದ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು  ಈ ವಾತ್ಸಲ್ಯ ಯೋಜನೆಯಲ್ಲಿ ಭಾಗವಹಿಸುವ ಮೂಲಕ, ಪೋಷಕರು ತಮ್ಮ ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಅವರ ಆರ್ಥಿಕ ಅಗತ್ಯಗಳಿಗೆ ಈ ಮೊತ್ತ ಉಪಯೋಗವಾಗಲಿದೆ. ಈ ಹೊಸ ಯೋಜನೆಯು ಈಗಾಗಲೇ ಅಸ್ತಿತ್ವದಲ್ಲಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆಯ ರೀತಿಯೇ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ .

Ayushamn Card: 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾದ ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?

Leave A Reply

Your email address will not be published.