Union Budget 2024: ಎನ್​ಪಿಎಸ್​ ಯೋಜನೆ ವಿಸ್ತರಣೆ: ಮಕ್ಕಳಿಗಾಗಿ ವಾತ್ಸಲ್ಯ ಯೋಜನೆಯ್ಲಲಿ ಡಬಲ್ ಪ್ರಾಫಿಟ್!

Union Budget 2024: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಬಜೆಟ್ (Union Budget 2024) ಮಂಡನೆ ಮಾಡುವಾಗ, ಇದರಲ್ಲಿ ಮಕ್ಕಳಿಗಾಗಿ ಹೊಸ ಯೋಜನೆಯೊಂದನ್ನು ಘೋಷಿಸಿದ್ದಾರೆ. ಅದರ ಹೆಸರು ಎನ್ ಪಿಎಸ್ ವಾತ್ಸಲ್ಯ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್) ಅಡಿಯಲ್ಲಿ ಅಪ್ರಾಪ್ತರಿಗಾಗಿ ಈ ಯೋಜನೆಯನ್ನು ಶುರು ಮಾಡಬಹುದು. ಮಕ್ಕಳು ವಯಸ್ಸಿಗೆ ಬಂದ ನಂತರ ಇದನ್ನು ಪೂರ್ಣ ಪ್ರಮಾಣದ ಎನ್ ಪಿಎಸ್ ಸ್ಕೀಂ ಆಗಿ ಬದಲಾಯಿಸಬಹುದು.

ಈ ಯೋಜನೆಯಡಿ, ಆರಂಭದಲ್ಲೇ ಮಕ್ಕಳಿಗೆ ಯಾವುದೇ ಲಾಭವಿಲ್ಲ. ಆದರೆ, ಮಕ್ಕಳಿಗೆ ನಿವೃತ್ತಿ ವಯಸ್ಸು ಅಂದರೆ 58ರಿಂದ 60 ವರ್ಷದ ಸಂದರ್ಭದಲ್ಲಿ ಅವರಿಗೆ ಒಂದು ನಿಶ್ಚಿತ ಆದಾಯ ಬರುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಇದಕ್ಕೆ ಸಾಮಾನ್ಯವಾಗಿ ಇದಕ್ಕೆ ಸರ್ಕಾರದಿಂದ ನೀಡಲಾಗುವ ಬಡ್ಡಿಯ ದರ ಉಳಿದ ಉಳಿತಾಯ ಯೋಜನೆಗಳಿಗಿಂತ ಸ್ವಲ್ಪ ಜಾಸ್ತಿ ಇರುತ್ತದೆ. ಹಾಗಾಗಿ, ಇದರಲ್ಲಿ ಹೂಡಿಕೆ ಮಾಡಿದರೆ ಲಾಭ ಜಾಸ್ತಿ.

ಖಾತೆಯನ್ನು ತೆರೆಯುವಾಗ, ನೀವು ಶ್ರೇಣಿ 1 ರಲ್ಲಿ 500 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಇದರ ನಂತರ, 1000 ರೂಗಳನ್ನು ಟೈರ್ 2 ರಲ್ಲಿ ಠೇವಣಿ ಮಾಡಬೇಕು. ಪ್ರತಿ ಹಣಕಾಸು ವರ್ಷದಲ್ಲಿ ಹೂಡಿಕೆ ಮಾಡಬೇಕು.

ನಿವೃತ್ತಿಯ ಸಮಯದಲ್ಲಿ NPS ನಲ್ಲಿ ಠೇವಣಿ ಮಾಡಿದ ಒಟ್ಟು ಮೊತ್ತದ 60 ಪ್ರತಿಶತವನ್ನು ನೀವು ಒಟ್ಟು ಮೊತ್ತದಲ್ಲಿ ಹಿಂಪಡೆಯಬಹುದು, ಉಳಿದ 40 ಪ್ರತಿಶತ ಮೊತ್ತವು ಪಿಂಚಣಿ ಯೋಜನೆಗೆ ಹೋಗುತ್ತದೆ. ಎನ್‌ಪಿಎಸ್‌ನಲ್ಲಿ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಇನ್ನು ಎನ್‌ಪಿಎಸ್ ಕುರಿತು ಸರ್ಕಾರಿ ನೌಕರರ ಗೊಂದಲ ಪರಿಹರಿಸಲು ಶೀಘ್ರದಲ್ಲೇ ಹೊಸ ಘೋಷಣೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ.

Leave A Reply

Your email address will not be published.