Aadhar Card: ಆಧಾರ್ ಕಾರ್ಡ್ ಕಳ್ಕೊಂಡಿದ್ದೀರಾ? ಏನಾದರೂ ಕೆಲಸಕ್ಕೆ ಮನೆಯಲ್ಲೇ ಮರೆತು ಬಂದಿದ್ದೀರಾ? ನಿಂತಲ್ಲೇ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ

Aadhar Card: ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬ ಭಾರತೀಯನ ಗುರುತಿನ ಚೀಟಿ ಇದ್ದಂತೆ. ಸರ್ಕಾರದ ಯಾವುದೇ ಪ್ರಯೋಜನವನ್ನು ಪಡೆಯಲು ಈ ಆಧಾರ್ ಕಾರ್ಡ್(Adhar card) ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಈ ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕವಂತೂ ಇದು ಬಹುಮುಖ್ಯವಾಗಿದೆ.

Dharmasthala: ಧರ್ಮಸ್ಥಳ ಭಕ್ತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್?!

ಹೀಗೆ ಸರ್ಕಾರದ ಕೆಲಸಕ್ಕಾಗಿ ಹೋದಾಗ, ಏನಾದರೂ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹೋದಾಗ ಅಥವಾ ಬೇರೇನಾದರೂ ಕೆಲಸಗಳಿಗೆ ಹೋದಾಗ ಕೆಲವೊಮ್ಮೆ ಆಧಾರ್ ಕಾರ್ಡ್ ಬೇಕಾಗುತ್ತದೆ. ಆದರೆ ಒಮ್ಮೊಮ್ಮೆ ನಾವು ಆಧಾರ್ ಕಾರ್ಡ್ ಮನೆಯಲ್ಲೇ ಮರೆತು ಹೋಗಿರುತ್ತೇವೆ. ಇದರ ಹೊರತಾಗಿ ಆಧಾರ್ ಕಾರ್ಡ್ ಕಳೆದುಹೋದ ಸಂದರ್ಭಗಳೂ ಇರುತ್ತವೆ. ಇಂತಹ ಸಂದರ್ಭದಲ್ಲಿ ನಿಂತಲ್ಲೇ ನೀವು ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹದು. ಹೇಗೆಂದು ಈಗ ಹೇಳಿಕೊಡುತ್ತೇವೆ.

ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ:
* ಮೊದಲನೆಯದಾಗಿ, ನೀವು ಗೂಗಲ್ನಲ್ಲಿ ಯುಐಡಿಎಐ ಎಂದು ಟೈಪ್ ಮಾಡಬೇಕು.
* ಇದರೊಂದಿಗೆ, ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಮೊದಲು ಕಾಣಿಸುತ್ತದೆ.
* ಈ ವೆಬ್ಸೈಟ್ (https://uidai.gov.in/hi/) ಕ್ಲಿಕ್ ಮಾಡಿದ ನಂತರ, ವೆಬ್ಸೈಟ್ನ ಮುಖ್ಯ ಪುಟ ಕಾಣಿಸಿಕೊಳ್ಳುತ್ತದೆ.
* ಈಗ ನೀವು ಹಿಂದಿ ಅಥವಾ ಇಂಗ್ಲಿಷ್ ಯಾವುದಾದರೂ ಒಂದು ಭಾಷೆಯೊಂದಿಗೆ ಮುಂದುವರಿಯಬಹುದು.
* ಈಗ ಕೆಳಗೆ ಬನ್ನಿ ಮತ್ತು Get Aadhaar ಅಡಿಯಲ್ಲಿ Download Aadhaar ಕ್ಲಿಕ್ ಮಾಡಿ.
* ಈಗ ನೀವು ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಬೇಕು.
* ಈಗ Send OTP ಮೇಲೆ ಕ್ಲಿಕ್ ಮಾಡಿ.
* ಈಗ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿಯನ್ನು ನಮೂದಿಸಬೇಕು.
* ಕೆಲವೇ ಸೆಕೆಂಡುಗಳಲ್ಲಿ, ಆಧಾರ್ ಕಾರ್ಡ್ ಅನ್ನು ಪಿಡಿಎಫ್ ಫೈಲ್ ಆಗಿ ಡೌನ್ಲೋಡ್ ಮಾಡಲಾಗುತ್ತದೆ.

ಆಧಾರ್ ನಲ್ಲಿ ಮಾಹಿತಿ ಅಪ್ಡೇಟ್ ಮಾಡೋದು ಹೇಗೆ?
* ಸರ್ಕಾರ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡೋ ಗಡುವನ್ನು ಸೆಪ್ಟೆಂಬರ್ 14ರ ವರೆಗೆ ವಿಸ್ತರಿಸಿದೆ.
*ಯುಐಡಿಎಐ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
*myaadhaar ಮೇಲೆ ಕ್ಲಿಕ್ ಮಾಡಿ.
*ಆ ಬಳಿಕ ‘Update Aadhaar’ಆಯ್ಕೆ ಮಾಡಿ.
*ನಿಮ್ಮ ಆಧಾರ್ ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ.
*ಆ ಬಳಿಕ ‘Send OTP’ಬಟನ್ ಮೇಲೆ ಕ್ಲಿಕ್ ಮಾಡಿ.
*ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿ ನಮೂದಿಸಿ.
*Login ಬಟನ್ ಮೇಲೆ ಕ್ಲಿಕ್ ಮಾಡಿ.
*ನಿಮಗೆ ಯಾವ ಮಾಹಿತಿಯನ್ನು ನವೀಕರಿಸಬೇಕು ಅದನ್ನು ಆಯ್ಕೆ ಮಾಡಿ. ಉದಾಹರಣೆಗೆ ವಿಳಾಸ ಬದಲಾಯಿಸಬೇಕಿದ್ದರೆ ‘Address Update’ ಆಯ್ಕೆ ಮಾಡಿ.
*ಈಗ ನಿಮ್ಮ ವಿಳಾಸ ದೃಢೀಕರಣ ದಾಖಲೆಯ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿ.
*ಆ ಬಳಿಕ ‘Submit’ಬಟನ್ ಮೇಲೆ ಕ್ಲಿಕ್ ಮಾಡಿ.
*ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಅಪ್ಡೇಟ್ ರಿಕ್ವೆಸ್ಟ್ ಸಂಖ್ಯೆ (URN) ಬರುತ್ತದೆ.

Ahmedabad: IAS ಗಂಡನನ್ನು ಬಿಟ್ಟು ರೌಡಿ ಜೊತೆ ಓಡಿದ ಪತ್ನಿ; 9 ತಿಂಗಳ ನಂತರ ವಾಪಸು ಬಂದು ಮಾಡಿದ್ದೇನು ಗೊತ್ತೇ?

Leave A Reply

Your email address will not be published.