School Transfer Certificate: ಇನ್ಮುಂದೆ ಶಾಲಾ ಪ್ರವೇಶಕ್ಕೆ ವರ್ಗಾವಣೆ ಪ್ರಮಾಣಪತ್ರದ ಅಗತ್ಯ ಇಲ್ಲ; ಹೈಕೋರ್ಟ್ ಆದೇಶ
School Transfer Certificate: ಪ್ರಸ್ತುತ ತಮಿಳುನಾಡಿನಲ್ಲಿ ಶಾಲಾ ಪ್ರವೇಶಕ್ಕೆ (School Admission) ಯಾವುದೇ ರೀತಿಯ (School Transfer Certificate) ವರ್ಗಾವಣೆ ಪ್ರಮಾಣ ಪತ್ರಗಳ (Transfer Certificates) ಅಗತ್ಯವಿಲ್ಲ. ಯಾಕೆಂದರೆ ಶಾಲಾ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸುವಂತೆಹೊಸ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಹಿಂದಿನ ಶಿಕ್ಷಣ ಸಂಸ್ಥೆಗಳಿಂದ ವರ್ಗಾವಣೆ ಪ್ರಮಾಣಪತ್ರಗಳನ್ನು ತಯಾರಿಸಲು ಒತ್ತಾಯಿಸದಂತೆ ಸೂಚನೆ ನೀಡಿ ರಾಜ್ಯಾದ್ಯಂತ ಶಾಲಾ ಆಡಳಿತ ಮಂಡಳಿಗಳಿಗೆ ಸುತ್ತೋಲೆ ಹೊರಡಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ (Madras High Court) ನಿರ್ದೇಶನ ನೀಡಿದೆ.
ಹೌದು, ಹೈಕೋರ್ಟ್ ಬಾರ್ ಮತ್ತು ಬೆಂಚ್ ವರದಿ ಮಾಡಿದಂತೆ, ವರ್ಗಾವಣೆ ಪ್ರಮಾಣ ಪತ್ರಗಳಲ್ಲಿ ಶಾಲಾ ಶುಲ್ಕವನ್ನು ಪಾವತಿಸದಿರುವ ಅಥವಾ ವಿಳಂಬವಾದ ಪಾವತಿಗೆ ಸಂಬಂಧಿಸಿದ ಅನಗತ್ಯ ನಮೂದುಗಳನ್ನು ಶಾಲೆಗಳು ಮಾಡುವುದಕ್ಕೆ ನ್ಯಾಯಾಲಯವು ನಿಷೇಧ ವಿಧಿಸಿದೆ.
ಶುಲ್ಕ ಬಾಕಿಗಳನ್ನು ತೆರವುಗೊಳಿಸುವವರೆಗೆ ಶಾಲೆಗಳು ಟಿಸಿಗಳನ್ನು ಹಿಡಿದಿಟ್ಟುಕೊಳ್ಳುವುದನ್ನು, ಟಿಸಿಯಲ್ಲಿ ಬಾಕಿ ಇರುವ ಅಥವಾ ಶುಲ್ಕವನ್ನು ಪಾವತಿಸದಿರುವ ನಮೂದುಗಳನ್ನು ಮಾಡುವುದನ್ನು ಇದು ತಡೆಯುತ್ತದೆ. ಯಾಕೆಂದರೆ ಇದು ಶಿಕ್ಷಣ ಹಕ್ಕು (RTE) ಕಾಯಿದೆಯ ಉಲ್ಲಂಘನೆಯಾಗಿದೆ ಮತ್ತು ಮಾನಸಿಕ ಕಿರುಕುಳವನ್ನು ಉಂಟು ಮಾಡುತ್ತದೆ ಎಂದು ಆರ್ಟಿಇ ಕಾಯಿದೆಯ ಸೆಕ್ಷನ್ 17ರ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ.
ಈ ಕುರಿತು ನ್ಯಾಯಮೂರ್ತಿಗಳಾದ ಎಸ್.ಎಂ. ಸುಬ್ರಮಣ್ಯಂ ಮತ್ತು ಸಿ. ಕುಮಾರಪ್ಪನ್ ಅವರ ಪೀಠವು, ಶಾಲೆಗಳು ವಿದ್ಯಾರ್ಥಿಯ ಟಿಸಿಯನ್ನು ಶುಲ್ಕದ ಬಾಕಿ ವಸೂಲಿ ಮಾಡುವ ಸಾಧನವಾಗಿ ದುರ್ಬಳಕೆ ಮಾಡಬಾರದು ಎಂದು ತಿಳಿಸಿದೆ.
Tonel Fungus: ಮಳೆಗಾಲದಲ್ಲಿ ಕಾಡುವ ಉಗುರು ಸೋಂಕು ನಿವಾರಣೆಗೆ ಸುಲಭ ಪರಿಹಾರ ಇಲ್ಲಿದೆ