New Traffic Rule: ಇನ್ಮುಂದೆ ಸಿಗ್ನಲ್ ಜಂಪ್ ಮಾಡಿದ್ರೆ ದಂಡವಿಲ್ಲ, ಆದ್ರೆ ಈ ಸಂದರ್ಭದಲ್ಲಿ ಮಾತ್ರ !!

New Trafic Rule: ಸಾರಿಗೆ ಇಲಾಖೆಯು ಇತ್ತೀಚಿನ ದಿನಗಳಲ್ಲಿ ಭಾರೀ ಕಠಿಣವಾದಂತಹ ಟ್ರಾಫಿಕ್ ನಿಯಮಗಳನ್ನು(Traffic Rule) ಜಾರಿಗೊಳಿಸಿದೆ. ಅದರಲ್ಲಿ ಸಿಗ್ನಲ್ ಜಂಪ್ ಮಾಡಿದ್ರಂತೂ ದೊಡ್ಡಮೊತ್ತದ ದಂಡವನ್ನೇ ವಿಧಿಸುತ್ತದೆ. ಆದರೀಗ ಅದೊಂದು ಸಂದರ್ಭದಲ್ಲಿ ಏನಾದರೂ ಸಿಗ್ನಲ್ ಜಂಪ್(Signal Jump) ಮಾಡಿದರೆ ದಂಡ ವಿಧಿಸದಿರಲು ಪೋಲಿಸ್ ಇಲಾಖೆಯು(Police Department) ನಿರ್ಧರಿಸಿದೆ.

UP: ಉತ್ತರ ಪ್ರದೇಶ ರಾಜಕೀಯದಲ್ಲಿ ಮಹಾನ್ ಸಂಚಲನ? ಸಿಎಂ ಸ್ಥಾನದಿಂದ ಯೋಗಿಯನ್ನು ಕೆಳಗಿಳಿಸಲು BJP ಹೈಕಮಾಂಡ್ ಪ್ಲಾನ್?!

ಹೌದು, ಸಿಗ್ನಲ್ ಇರುವ ಸಂದರ್ಭದಲ್ಲಿ ಆಂಬುಲೆನ್ಸ್(Ambulence) ಬಂದಾಗ ಇತರ ವಾಹನಗಳು ದಾರಿ ಮಾಡಿಕೊಡಲು ಸಿಗ್ನಲ್ ಜಂಪ್ ಮಾಡಿದ್ರೆ ಅವುಗಳಿಗೆ ದಂಡ ವಿಧಿಸದಿರಲು ಪೋಲಿಸ್ ಇಲಾಖೆಯು ನಿರ್ಧರಿಸಿದೆ. ಏಕೆಂದರೆ ಹಿಂದಿನಿಂದ ಆಂಬುಲೆನ್ಸ್ ಬಂದಾಗ ಮುಂದಿರುವ ವಾಹನಗಳಿಗೆ ಬೇರೆಲ್ಲೂ ಹೋಗಲು ಜಾಗ ಇರೋದಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ಅವುಗಳು ಸಿಗ್ನಲ್ ಜಂಪ್ ಮಾಡಲೇ ಬೇಕು, ನಿಯಮ ಮುರಿಯಲೇ ಬೇಕು. ಹೀಗಾಗಿ ಇದು ತಪ್ಪಾಗಿ ಪರಿಣಮಿಸುವುದಿಲ್ಲ. ಇದರಿಂದ ಸಾರಿಗೆ ಇಲಾಖೆಯು ಈ ಹೊಸ ಸುದ್ದಿಯನ್ನು ಪ್ರಕಟಿಸಿದ್ದು, ಆಂಬುಲೆನ್ಸ್ ಗೆ ದಾರಿಮಾಡಿಕೊಡಲು ಸಿಗ್ನಲ್ ಜಂಪ್ ಮಾಡಿದ್ರೆ ಯಾವುದೇ ಕಾರಣಕ್ಕೂ ಅಂತಹ ವಾಹನಗಳಿಗೆ ದಂಡ ವಿಧಿಸುವುದಿಲ್ಲ ಎಂದು ಹೇಳಿದೆ.

ಅಲ್ಲದೆ ನೀವು ಆಂಬುಲೆನ್ಸ್ ಬಂದಾಗ ದಾರಿ ಬಿಡಲು ಸಿಗ್ನಲ್ ಜಂಪ್ ಮಾಡಿದಾಗ ಒಂದು ವೇಳೆ ಪೋಲೀಸರು ದಂಡ ಹಾಕಿದ್ರೆ ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್ಮೆಂಟ್ ಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ಮಾಹಿತಿ ನೀಡಿ ದಂಡವನ್ನು ತೆರವುಮಾಡಿಕೊಳ್ಳಬಹುದು. ಅಥವಾ ಕರ್ನಾಟಕ ಸ್ಟೇಟ್ ಪೋಲೀಸ್ ಆಪ್ ಮೂಲಕ ದೂರನ್ನು ಕೂಡ ದಾಖಲಿಸಬಹುದು ಎಂದು ಪೋಲೀಸ್ ಜಂಟಿ ಆಯುಕ್ತರು ತಿಳಿಸಿದ್ದಾರೆ.

School Holiday: ಬೈಂದೂರು, ಹೆಬ್ರಿ ತಾಲೂಕಿನ ಎಲ್ಲಾ ಶಾಲೆಗಳಿಗೆ, ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಣೆ

1 Comment
  1. KevinSaf says

    check it out wasabi wallet coinjoin

Leave A Reply

Your email address will not be published.