GT Mall Bangalore: ಪಂಚೆಯುಟ್ಟು ಬಂದ ರೈತನಿಗೆ ಅವಮಾನ ಪ್ರಕರಣ: ಜಿ.ಟಿ. ಮಾಲ್‌ 7 ದಿನ ಬಂದ್‌- ಸಚಿವ ಭೈರತಿ ಸುರೇಶ್‌ ಘೋಷಣೆ

GT Mall Bangalore: ರೈತನಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಜಿ.ಟಿ. ಮಾಲ್‌ 7 ದಿನ ಬಂದ್‌ ಆಗಲಿದೆ ಎಂದು ಸದನದಲ್ಲಿ ಸಚಿವ ಭೈರತಿ ಸುರೇಶ್‌ ಘೋಷಣೆ ಮಾಡಿದ್ದಾರೆ.

ಬಹುತೇಕ ಶಾಸಕರು ಈ ಪ್ರಕರಣದ ಒತ್ತಾಯ ಮಾಡಿದ್ದರಿಂದ ಮಾಗಡಿ ರಸ್ತೆಯಲ್ಲಿ ಜಿಟಿ ಮಾಲ್‌ 7 ದಿನ ಜಿಟಿ ಮಾಲ್‌ ಬಂದ್‌ ಮಾಡಿಸುತ್ತೇವೆ. ಈಗಾಗಲೇ ಈ ಕುರಿತು ಬಿಬಿಎಂಪಿ ಆಯುಕ್ತರ ಜೊತೆ ಮಾತನಾಡಿದ್ದು, ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ ಎಂದು ಸದನದಲ್ಲಿ ಸಚಿವ ಭೈರತಿ ಸುರೇಶ್‌ ಹೇಳಿದ್ದಾರೆ.

ಘಟನೆ ವಿವರ:
ಬೆಂಗಳೂರಿನ ವಿಜಯನಗರದ ನಿವಾಸಿಯಾದ ನಾಗರಾಜ್‌ ಅವರು ತಮ್ಮ ತಂದೆಯನ್ನು ಸಿನಿಮಾ ನೋಡಲೆಂದು ಜಿಟಿ ಮಾಲ್‌ಗೆ ಕರೆದುಕೊಂಡು ಹೋಗಿದ್ದಾರೆ. ಇವರ ತಂದೆ ಮೂಲತಃ ರೈತರಾಗಿದ್ದು, ಬೆಂಗಳೂರಿನ ತಮ್ಮ ಮಗನ ಮನೆಗೆಂದು ಬಂದಿದ್ದರು. ಜಿಟಿ ಮಾಲ್‌ ಗೆ ಸಿನಿಮಾ ತೋರಿಸೋಣ ಅಪ್ಪನಿಗೆ ಎಂದು ಕರೆದುಕೊಂಡು ಬಂದ ಸಂದರ್ಭದಲ್ಲಿ ನಾಗರಾಜ್‌ ಅವರ ತಂದೆ ಪಂಚೆ ಉಟ್ಟಿದ್ದಾರೆಂಬ ಕಾರಣಕ್ಕೆ ಪ್ರವೇಶ ನಿರಾಕರಿಸಿದ್ದು, ಎಷ್ಟೇ ವಾದ ಮಾಡಿದರೂ ಭದ್ರತಾ ಸಿಬ್ಬಂದಿ ಮಾಲ್‌ನ ಒಳಗೆ ಬಿಡಲಿಲ್ಲ.

ಇದರಿಂದ ನೊಂದ ನಾಗರಾಜ್‌ ವೀಡಿಯೋ ಮಾಡಿ ಘಟನೆಯ ಬಗ್ಗೆ ಹೇಳಿದ್ದಾರೆ. ಕೂಡಲೇ ವೀಡಿಯೋ ವೈರಲ್‌ ಆಗಿದ್ದು, ಆಕ್ರೋಶಗೊಂಡ ಜನ ಮಾಲ್‌ಗೆ ಮುತ್ತಿಗೆ ಹಾಕಿದ್ದಾರೆ. ಕನ್ನಡ ಸಂಘಟನೆಯ ಕಾರ್ಯಕರ್ತರು ಪಂಚೆಯುಟ್ಟು ಮಾಲ್‌ಗೆ ಬಂದಿದ್ದು, ಕನ್ನಡ ಸಂಘಟನೆಯ ರೂಪೇಶ್‌ ರಾಜಣ್ಣ ಹಾಗೂ ಮತ್ತಿತರರು ಪಂಚೆ ಧರಿಸಿದ್ದು, ಜಿಟಿ ಮಾಲ್‌ ಮುಂದೆ ಪ್ರತಿಭಟನೆ ನಡೆಸಿದ್ದರು.

Reservation issue for Kannadigas: ಏನು ಈ ಉದ್ಯಮಿಗಳ ದರ್ಪ? ಮೀಸಲಾತಿ ವಿಚಾರದಲ್ಲಿ ಕನ್ನಡಿಗರ ಸ್ವಾಭಿಮಾನವನ್ನೇ ಕೆಣಕಿದ ಕಂಪೆನಿ ಒಡೆಯರು

Leave A Reply

Your email address will not be published.