Bigg Boss Kannada 11: ಕುತೂಹಲ ಮೂಡಿಸಿದ ಕನ್ನಡ ಬಿಗ್ಬಾಸ್ 11ರ ಸ್ಪರ್ಧಿಗಳ ಹೆಸರುಗಳು ಇದೇ ನೋಡಿ!
Bigg Boss Kannada 11: ಇನ್ನೇನು ಬಿಗ್ ಬಾಸ್ ಕನ್ನಡ ಸೀಸನ್ 10 ನೆನಪುಗಳು ಮಾಸುವ ಮುನ್ನವೇ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಚಾರವಾಗಿಯೂ ಒಂದಷ್ಟು ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ. ಹೌದು, ಬಿಗ್ ಬಾಸ್ ಸೀಸನ್ 11 (Bigg Boss Kannada 11) ರ ಸ್ಪರ್ಧಿಗಳು ಯಾರಿರಬಹುದು ಎಂಬ ವಿಚಾರ ಓಡಾಡುತ್ತಿದೆ. ಇನ್ನು ಕಿಚ್ಚ ಸುದೀಪ್ ಅವರನ್ನು ಹೊಸ ಗೆಟಪ್ ನಲ್ಲಿ ಕಾಣಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯಕ್ಕೆ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಆರಂಭಗೊಳ್ಳಲು ತೆರೆ ಮರೆಯಲ್ಲಿ ತಯಾರಿ ನಡೆಸುತ್ತಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಈ ಬಾರಿಯ ಬಿಗ್ಬಾಸ್ಗೆ ಈ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎಂದು ಊಹಿಸಲಾಗಿದೆ.
ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾ ಅತಿ ಹೆಚ್ಚು ಆಕ್ಟೀವ್ ಆಗಿರೋ ಈ ಬಾರಿಯ ಬಿಗ್ಬಾಸ್ಗೆ ಬರಲಿದ್ದಾರೆ. ಅಲ್ಲದೇ ಒಮ್ಮೆ ಸೋಶಿಯಲ್ ಮೀಡಿಯಾ, ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಖ್ಯಾತಿ ಸಿಕ್ಕರೆ ಬಿಗ್ ಬಾಸ್ಗೆ ಅವಕಾಶ ಸಿಗುತ್ತದೆ. ಅದರಲ್ಲೂ ಕಿರುತೆರೆ ಸೀರಿಯಲ್ನಲ್ಲಿ ಮೋಡಿ ಮಾಡಿದ ವರುಣ್ ಆರಾಧ್ಯ ಅಥವಾ ಭೂಮಿಕಾ ಬಸವರಾಜ ಬರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ನು, ಕಾಮಿಡಿ ಜೋನ್ನಲ್ಲಿ, ಸುಶ್ಮಿತಾ ದಂಪತಿ ಬರಬಹುದು ಎಂದು ಹೇಳಲಾಗುತ್ತಿದೆ. ಈ ಬಾರಿಯ ಹಿಂದಿ ಬಿಗ್ಬಾಸ್ನಲ್ಲೂ ಇಬ್ಬರು ಪತ್ನಿಯರ ಜೊತೆಗೆ ಯ್ಯೂಟೂಬರ್ ಅಮಾನ್ ಮಲಿಕ್ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ಸುಶ್ಮಿತಾ ಹಾಗೂ ಪತಿ ಜಗಪ್ಪ ಅವರನ್ನು ಒಟ್ಟಿಗೆ ಬಿಗ್ಬಾಸ್ ಮನೆಗೆ ಕಳಿಸಬಹುದು ಎಂದು ವೀಕ್ಷಕರು ಅಂದಾಜಿಸಿದ್ದಾರೆ.
As per reports
The new season of Bigg Boss Kannada Season 11 will start from the 3rd week of October.#BBK11 #BBK10 #biggbosskannada pic.twitter.com/FZ0C53ND1R
— Prajwal M (@Riskyprince17) July 18, 2024
ಇವರ ಜೊತೆ ಜೊತೆಗೆ ನ್ಯೂಸ್ ಚಾನೆಲ್ನಿಂದ ನಿರೂಪಕಿ ಜಾಹ್ನವಿ ಅವರು ಎಂಟ್ರಿ ಕೊಡಬಹುದು ಎಂದು ಹೇಳಲಾಗುತ್ತಿದೆ. ಇವರ ಜೊತೆಗೆ ಯುಟ್ಯೂಬರ್ ವರ್ಷಾ ಕಾವೇರಿ, ತುಕಾಲಿ ಸಂತು ಪತ್ನಿ ಮಾನಸ , ಮಜಾಭಾರತ ಹಾಗೂ ಗಿಚ್ಚಿ ಗಿಲಿ ಖ್ಯಾತಿಯ ಚಂದ್ರಪ್ರಭಾ, ಗೀತಾ ಸೀರಿಯಲ್ ನಟಿ ಭವ್ಯಾ ಗೌಡ, ಚಿತ್ರಾಲ್ ರಂಗಸ್ವಾಮಿ ಹೀಗೆ ಒಂದಷ್ಟು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದೆ.
ಆದ್ರೆ ಒಂದು ವಿಚಾರ ಮಾತ್ರ ಸತ್ಯ. ಕೊನೆ ಕ್ಷಣದ ವರೆಗೂ ನಾನು ಬಿಗ್ ಮನೆಗೆ ಹೋಗ್ತೀನಿ ಅಂತ ಯಾರೂ ಹೇಳೋದಿಲ್ಲ. ಬಿಗ್ಬಾಸ್ ಶುರುವಾದ ಬಳಿಕವೇ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ ಎಂಬುವುದರ ಬಗ್ಗೆ ತಿಳಿದು ಬರಲಿದೆ.
ಅಂದಾಜು ಪ್ರಕಾರ ಅಕ್ಟೋಬರ್ 3ನೇ ವಾರದಿಂದ ಹೊಸ ಸೀಸನ್ ಆರಂಭವಾಗಲಿದೆಯಂತೆ. ಸದ್ಯಕ್ಕೆ ಬಿಗ್ಬಾಸ್ ಕನ್ನಡ ಸೀಸನ್ 11 ಶೋ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಅದರಲ್ಲೂ ಸ್ಪರ್ಧಿಗಳ ಆಯ್ಕೆ ಮಾಡೋದು ಕೂಡ ದೊಡ್ಡ ಟಾಸ್ಕ್ ಆಗಿದೆ. ಇಲ್ಲಿ ವಿಭಿನ್ನ ಕಾರ್ಯ ಕ್ಷೇತ್ರಗಳಿಂದ ಬರುವ ಸ್ಪರ್ಧಿಗಳ ಹೊರತಾಗಿ, ವಿಭಿನ್ನ ಮನಸ್ಥಿತಿಯುಳ್ಳವರು ಬೇಕು. ಹಾಗಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯೇ ದೊಡ್ಡದು ಎನ್ನಬಹುದು.