Chaitra Achar: ‘ಹುಡುಗರ ಯಾವ ಬಾಡಿ ಪಾರ್ಟ್ ನಿಮಗಿಷ್ಟ?’ ಚೈತ್ರಾ ಆಚಾರ್ ಗೆ ಹೀಗೊಂದು ಪ್ರಶ್ನೆ- ಜಾಣ ಉತ್ತರ ಕೊಟ್ಟ ನಟಿ !!

Chaitra Achar: ಇಂದು ಸಾಧಾರಣವಾಗಿ ಎಲ್ಲಾ ನಟಿಯರೂ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಇದರಲ್ಲಿ ಸಕ್ರಿಯವಾಗಿರುವ ಮೂಲಕ ಅವರು ಅಭಿಮಾನಿಗಳೊಂದಿಗೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ. ಆಗಾಗ ಫೋಟೋ, ವಿಡಿಯೋ ಶೇರ್ ಮಾಡುವುದು, ಏನಾದರೂ ಪ್ರಶ್ನೆ ಕೇಳಿ, ಉತ್ತರಿಸುವೆ ಅನ್ನೋದು ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಅಭಿಮಾನಿಗಳ ಜೊತೆ ಹತ್ತಿರಾಗುತ್ತಾರೆ. ಅಂತೆಯೇ ಕನ್ನಡದ ಖ್ಯಾತ ಯುವ ನಟಿ ಚೈತ್ರಾ ಆಚಾರ್(Chaitra Achar) ಅವರು ಕೂಡ ಇನ್ಸ್ಟಾಗ್ರಾಮ್ ನಲ್ಲಿ ಪ್ರಶ್ನೆ ಕೇಳಿ ಉತ್ತರಿಸುತ್ತೇನೆ ಎಂದು ಸ್ಟೋರಿ ಹಾಕಿದ್ದಾರೆ. ಈ ವೇಳೆ ನಟಿಗೆ ಹಲವು ಪ್ರಶ್ನೆಗಳು ಎದುರಾಗಿದ್ದು ಅದರಲ್ಲಿ ಒಂದು ಪ್ರಶ್ನೆ ಮಾತ್ರ ನಟಿಗೆ ಅಚ್ಚರಿ, ಅಘಾತ ಎಲ್ಲವನ್ನೂ ಉಂಟು ಮಾಡಿದೆ.
ಹೌದು, ಕನ್ನಡದ ಆಲಿಯಾ ಭಟ್, ಸ್ಯಾಂಡಲ್ ವುಡ್ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ ಇತ್ತೀಚೆಗೆ ಸಾಕಷ್ಟು ಖ್ಯಾತಿ ಗಳಿಸುತ್ತಿದ್ದಾರೆ. ಇತ್ತೀಚೆಗೆ ನಟಿ ಇನ್ಸ್ಟಾಗ್ರಾಮ್ ನಲ್ಲಿ ಲೆಟ್ಸ್ ಟಾಕ್ (Lets talk) ಎನ್ನುತ್ತಲೇ ಮಾತು ಶುರು ಮಾಡಿದಾಗ (Chaitra Achar) ಮುಂದೆ ಬಂದ ಪ್ರಶ್ನೆ, ಹುಡುಗರ ಯಾವ ಬಾಡಿ ಪಾರ್ಟ್ (Body Part) ಇಷ್ಟ ಅಂತ. ಈ ವೇಳೆ ಅವರು ಇದಕ್ಕೆ ಬುದ್ಧಿವಂತಿಕೆಯ ಉತ್ತರ ನೀಡಿದ್ದಾರೆ. ಅದೇನೆಂದರೆ ಈ ಪ್ರಶ್ನೆ ಎದುರಾದಾಗ ನಟಿ ಸ್ವಲ್ಪ ಹೊತ್ತು ಆಲೋಚನೆ ಮಾಡಿ ಏನ್ ಹೇಳೋದು ಅಂತಾ ಗೊತ್ತಾಗದೆ ನುಣುಚಿಕೊಂಡಿದ್ದಾರೆ. ಗಾಡ್ ಬ್ಲೆಸ್ ಯು ಎನ್ನುತ್ತಲೇ ಮುಂದಿನ ಪ್ರಶ್ನೆಗೆ ಜಿಗಿದಿದ್ದಾರೆ.
ಅಂದಹಾಗೆ ಚೈತ್ರಾ ಆಚಾರ್, ಸೂಪರ್ ಸ್ಟಾರ್ ಸಿದ್ಧಾರ್ಥ್(Siddarth) ಜೊತೆ ತಮಿಳು(Tamilu) ಚಿತ್ರದಲ್ಲಿ ನಟಿಸಲಿದ್ದಾರೆ. ನಿನ್ನೆ ಅದ್ರ ಮುಹೂರ್ತ ನಡೆದಿದೆ. ಅದ್ರ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡ ನಂತ್ರ ಚೈತ್ರಾ ಆಚಾರ್ ಪ್ರಶ್ನೆಗೆ ಉತ್ತರಿಸುವ ಯತ್ನ ಮಾಡಿದ್ರು.