Aparna Vastarey: ಖ್ಯಾತ ನಿರೂಪಕಿ ಅಪರ್ಣಾ ಮರೆಯಾಗುತ್ತಿದ್ದಂತೆ ಮೆಟ್ರೋ ರೈಲಿಗೆ ಕನ್ನಡ ಧ್ವನಿಗೆ ಬಿಎಂಆರ್‌ಸಿಎಲ್‌ ಹುಡುಕಾಟ

Aparna Vastarey: ಖ್ಯಾತ ನಿರೂಪಕಿ ನಟಿ ಅಪರ್ಣಾ ಅವರ ಧ್ವನಿ ನಮ್ಮ ಮೆಟ್ರೋದ ಹಸಿರು ಮತ್ತು ನೇರಳ ಮಾರ್ಗದ ಮೆಟ್ರೋ ಸ್ಟೇಷನ್‌ ರೈಲಿನಲ್ಲಿ  ಬರುತ್ತಿತ್ತು. ಆದರೆ ಅಪರ್ಣಾ ಅವರು ಕ್ಯಾನ್ಸರ್‌ನಿಂದ ನಮ್ಮನ್ನು ಅಗಲಿದ್ದು, ಇದೀಗ ಮೆಟ್ರೋ ಹೊಸ ಮಾರ್ಗಗಳಲ್ಲಿ ಕನ್ನಡ ವಾಯ್ಸ್‌ಗಾಗಿ ಮೆಟ್ರೋ ಅಧಿಕಾರಿಗಳು ಹೊಸ ವಾಯ್ಸ್‌ ಹುಡುಕಾಟದಲ್ಲಿದ್ದಾರೆ.

 

SBI Bank: ಎಸ್‌ಬಿಐ ಬ್ಯಾಂಕ್ ಗ್ರಾಹಕರಿಗೆ ಬ್ಯಾಡ್ ನ್ಯೂಸ್! ಸಾಲದ ಮೇಲೆ ಬಡ್ಡಿದರ ಹೆಚ್ಚಳ!

ಆಂಕರ್‌ಗಳು, ಸಿಂಗರ್‌ಗಳು, ಕನ್ನಡ ರೇಡಿಯೋ ಜಾಕಿಗಳ ವಾಯ್ಸ್‌ಗಳ ಸ್ಯಾಂಪಲನ್ನು ಮೆಟ್ರೋ ಅಧಿಕಾರಿಗಳು ಕೇಳಿದ್ದು, ಹುಡುಕಾಟ ನಡೆಸುತ್ತಿದ್ದಾರೆ.

ಹಳದಿ ಮಾರ್ಗದ ಆರ್ವಿ ರೋಡ್‌ ಟೂ ಬೊಮ್ಮಸಂದ್ರ, ನಾಗಸಂದ್ರ ಟೂ ಮಾದಾವರ ಮಾರ್ಗ ಸಿದ್ಧವಾಗಿದ್ದು, ಈ ಮಾರ್ಗಕ್ಕೂ ಅಪರ್ಣಾ ವಾಯ್ಸ್‌ ಹಾಕುವ ಕುರಿತು ಬಿಎಂಆರ್‌ಸಿಎಲ್‌ ಸಿದ್ಧತೆ ಮಾಡಿತ್ತು. ಆದರೆ ಇದೀಗ ಅಪರ್ಣಾ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಹೊಸ ಧ್ವನಿಯಾಗಿ ಹುಡುಕಾಟ ಮುಂದುವರಿದಿದೆ.

ಉದ್ಘಾಟನೆ ಆಗಿರೋ ಎಲ್ಲಾ ಮಾರ್ಗದಲ್ಲಿ ಅಪರ್ಣಾ ಅವರ ಧ್ವನಿ ಬದಲಾಗೋದಿಲ್ಲ. ಚಲ್ಲಘಟ್ಟ- ವೈಟ್‌ ಫೀಲ್ಡ್‌ ಸಿಲ್ಕ್‌ ಇನ್ಸ್ಟಿಟ್ಯೂಟ್‌- ನಾಗಸಂದ್ರ ಮಾರ್ಗದಲ್ಲಿ ಅಪರ್ಣಾ ಧ್ವನಿ ಮುಂದುವರಿಯಲಿದೆ.

ಹೊಸ ಮಾರ್ಗದಲ್ಲಿ ಅಪರ್ಣಾ ಅವರ ಧ್ವನಿ ಮಿಸ್‌ ಮಾಡಿಕೊಳ್ತೀವಿ ಎಂದು ಪ್ರಯಾಣಿಕರು ಹೇಳಿದ್ದಾರೆ. ಹಾಗೆನೇ ಹೊಸ ಮಾರ್ಗದಲ್ಲಿ ಕನ್ನಡದವರಿಗೆ ಧ್ವನಿ ನೀಡಲು ಅವಕಾಶ ನೀಡಬೇಕು. ಹಾಗೆನೇ ಕನ್ನಡ ಟ್ರಾನ್ಸ್ಲೆಟ್‌ ಮಾಡುವ ವಾಯ್ಸ್‌ಗಳನ್ನು ಪ್ಲೇ ಮಾಡಬಾರದು ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.

Population: ಎರಡಕ್ಕಿಂತ ಹೆಚ್ಚಿನ ಮಕ್ಕಳಿಗೆ ಸರಕಾರಿ ಸೌಲಭ್ಯ ಸಿಗೋದಿಲ್ಲ-ಬಿಜೆಪಿ ಸಚಿವರ ಹೇಳಿಕೆ

Leave A Reply

Your email address will not be published.