Anchor Aparna: ಸಾವಿರ ಕನಸು ಹೊತ್ತ ಅಪರ್ಣಾ ಬದುಕು ಯಾಕೆ ಹೀಗಾಯ್ತು?; ಬ್ರಹ್ಮಾಂಡ ಗುರೂಜಿಯಿಂದ ಶಾಕಿಂಗ್ ಹೇಳಿಕೆ

Anchor Aparna: ಅಚ್ಚಗನ್ನಡವನ್ನು ಸ್ವಚ್ಛವಾಗಿ ಮಾತನಾಡಿ ನಿರೂಪಣೆ ಮಾಡುತ್ತಾ ಜನರ ಮನಗೆದಿದ್ದ ಕನ್ನಡತಿ ಅಪರ್ಣಾ ಬಗ್ಗೆ ಎಷ್ಟು ಹೊಗಳಿದರು ಸಾಲದು. ಆದ್ರೆ ಅವರು ಇನ್ನು ನಮಗೆಲ್ಲರಿಗೂ ಕೇವಲ ನೆನಪಿನ ಬುತ್ತಿ ಅಷ್ಟೇ. ಹೌದು, ಈಗಾಗಲೇ ಶ್ವಾಸಕೋಶ ಕ್ಯಾನ್ಸರ್‌ನಿಂದ ಅಪರ್ಣ ನಮ್ಮನೆಲ್ಲ ಅಗಲಿ ಐದು ದಿನಗಳು ಕಳೆದಿದೆ. ಇದೀಗ ಅಪರ್ಣಾ (Anchor Aparna) ಅವರ ಕುರಿತಾಗಿ ಖಾಸಗಿವಾಹಿನಿ ಜತೆ ಮಾತನಾಡಿದ ಬ್ರಹ್ಮಾಂಡ ಗುರೂಜಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

 

SBI Bank: ಎಸ್‌ಬಿಐ ಬ್ಯಾಂಕ್ ಗ್ರಾಹಕರಿಗೆ ಬ್ಯಾಡ್ ನ್ಯೂಸ್! ಸಾಲದ ಮೇಲೆ ಬಡ್ಡಿದರ ಹೆಚ್ಚಳ!

ಬ್ರಹ್ಮಾಂಡ ಗುರೂಜಿ ಮತ್ತು ಅಪರ್ಣ ಅವರದ್ದು ಒಂದು ಉತ್ತಮ ನಂಟು ಅಂದರೆ ತಪ್ಪಾಗಲಾರದು. ಇವರಿಬ್ಬರು  ಇತ್ತೀಚೆಗೆ ನಡೆದ ಸಿನಿಮಾ 90 ಅನ್ನುವ ಕಾರ್ಯಕ್ರಮದಲ್ಲಿ ಅಪರ್ಣಾ ಹಾಗೂ ಬ್ರಹ್ಮಾಂಡ ಗುರೂಜಿ ಇಬ್ಬರೂ ಭಾಗವಹಿಸಿದ್ದರು. ಇದೀಗ ಆ ಘಳಿಗೆಯನ್ನು ನೆನಪಿಸಿಕೊಂಡಿರುವ ಬ್ರಹ್ಮಾಂಡ ಗುರೂಜಿ ಮಾತನಾಡಿ, ಅಪರ್ಣ ನಾನು ಎರಡು ವಾರಗಳು ಬಿಗ್ ಬಾಸ್ ಶೋ ನಲ್ಲಿ ಒಟ್ಟಿಗೆ ಇದ್ದೆವು. ಅದಲ್ಲದೆ ಮೊನ್ನೆ ಸಿನಿಮಾ 90 ಅಂತ ಮಾಡಿದ್ವಿ. ಆ ಕಾರ್ಯಕ್ರಮಕ್ಕೆ ಬಂದಾಗ ಮಾತಾಡಿದ್ವಿ. ಆ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಇನ್ನು ಅಪರ್ಣಾ ಸಾವಿಗೆ, ಆರೋಗ್ಯ ಹದಗೆಟ್ಟಿದ್ದಕ್ಕೆ ಶನಿ ಕಾಟವೇ ಕಾರಣ ಅಂತಲೂ ಹೇಳಿದ್ದಾರೆ. ವೈಟ್ ಪ್ಯಾಚಸ್ ಬಂದರೂ ಶನಿಯಿಂದಲೇ ಬರುತ್ತೆ. ಶನಿಶ್ವೇರನ ಮುಖಾಂತರವಾಗಿ ಬರುವಂತಹದ್ದು ಕ್ಯಾನ್ಸರ್. ಇದ್ರಿಂದ ಕೆಲವರು ಹೊರ ಬರುತ್ತಾರೆ. ಕೆಲವರು ಹೊರ ಬರುವುದಕ್ಕೆ ಸಾಧ್ಯವಾಗುವುದೇ ಇಲ್ಲ.

ಇನ್ನು ವೈವಾಹಿಕ ಜೀವನವು ಮಾತಿನಷ್ಟೇ ಪ್ರಶಾಂತ ಆಗಿತ್ತು. ಇವಳು ಎಷ್ಟು ಮಾತಾಡುತ್ತಿದ್ದಳೋ, ಗಂಡ ಅಷ್ಟೇ ಕಡಿಮೆ ಮಾತಾಡುತ್ತಿದ್ದರು. ಆದ್ರೆ ಅಪರ್ಣಾ ಅವರಿಗೆ ಮಕ್ಕಳು ಇಲ್ಲ ಅನ್ನುವ ಬೇಸರದಲ್ಲಿ ಇದ್ದರು ಸಹ  ಒಬ್ಬರನ್ನೊಬ್ಬರು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಜೊತೆಗೆ ಮಕ್ಕಳನ್ನು ಅವರು ಗಿಗಳಲ್ಲಿ ಕಾಣುತ್ತಿದ್ದರು. ಹೀಗಾಗಿ ಇಬ್ಬರಲ್ಲೂ ಅನ್ನೋನ್ಯತೆಯಿತ್ತು ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.

ಇನ್ನು ಅಪರ್ಣಕ್ಕೆ ಕ್ಯಾನ್ಸರ್ ಇರುವ ಬಗ್ಗೆ ಬ್ರಹ್ಮಾಂಡ ಗುರೂಜಿ ಬಳಿ ಹೇಳಿಕೊಂಡಿದ್ದರಂತೆ. ಹಾಗೇ ಏನಾದರೂ ಸಮಸ್ಯೆಗಳು ಎದುರಾದಾಗ, ತಮಗೆ ಸಂಪರ್ಕ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಯಾವುದಾದರೂ ಸಮಸ್ಯೆ ಎದುರಾದಾಗ ಯಾವ ಕ್ಷೇತ್ರಕ್ಕೆ ಹೋಗಬೇಕು ಅಂತ ಕೇಳುತ್ತಿದ್ದರು. ಆ ಬಗ್ಗೆ ಹೇಳಿದಾಗ, ಅಲ್ಲಿಗೂ ಹೋಗಿ ಬರುತ್ತಿದ್ದರು. ಎರಡೂ ಮುಕ್ಕಾಲು ವರ್ಷದಿಂದ ಒದ್ದಾಡಿದ್ರು. ಆಗ ಇಂತಹ ಕ್ಷೇತ್ರಕ್ಕೆ ಹೋಗಿ ಬನ್ನಿ ಅಂತನೂ ಹೇಳಿದ್ದೆ. ಆದರೆ, ದೈವ ಇಚ್ಚೆ ಅಂತ ಇರುತ್ತಲ್ಲ.” ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.

Belthangady: ವಿದ್ಯುತ್‌ ಶಾಕ್‌ ಹೊಡೆದು ಯುವಕ ಸಾವು

 

Leave A Reply

Your email address will not be published.