Dairymilk Chocolates: ಚಪ್ಪರಿಸಿ ಡೈರಿ ಮಿಲ್ಕ್ ಚಾಕೋಲೇಟ್ ತಿನ್ನೋರು ಇಲ್ನೋಡಿ!
Dairymilk Chocolates: ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚಾಕೊಲೇಟ್ ಅಚ್ಚುಮೆಚ್ಚು. ಇದೀಗ ಬಾಯಿ ಚಪ್ಪರಿಸಿ ಡೈರಿ ಮಿಲ್ಕ್ ಚಾಕಲೇಟ್ ತಿನ್ನೋರಿಗೆ ಇಲ್ಲೊಂದು ಶಾಕ್ ಕಾದಿದೆ. ಹೌದು, ನೀವು ಮಕ್ಕಳಿಗೆ ಪ್ರೀತಿಯಿಂದ ನೀಡುವ ಚಾಕೋಲೇಟ್ಗಳೇ ಅವರ ಜೀವಕ್ಕೆ ಅಪಾಯ ತರಬಹುದು.
Better Sleep: ರಾತ್ರಿ ನಿದ್ದೆ ಬರಲ್ವ? ಹಾಗಿದ್ದರೆ ಇದನ್ನು ತಿಂದು ನೋಡಿ, ಕ್ಷಣ ಮಾತ್ರದಲ್ಲಿ ನಿದ್ದೆ ಬರುತ್ತೆ!
ಇತ್ತೀಚಿನ ದಿನಗಳಲ್ಲಿ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೋಲೇಟ್ಗಳಲ್ಲಿ (Dairymilk Chocolates) ಹುಳುಗಳು ಪತ್ತೆಯಾಗುತ್ತಿರುವ ಸುದ್ದಿಗಳು ಆಗ್ಗಾಗ್ಗೆ ಕೇಳಿ ಬರುತ್ತಿದೆ. ಇದೀಗ ಮಡಿಕೇರಿಯ ಸುಲ್ತಾನ್ ಎಂಬವರು ಖರೀದಿಸಿದ ಡೈರಿ ಮಿಲ್ಕ್ ಸಿಲ್ಕ್ (ಹ್ಯಾಝಲ್ನೆಟ್) ಚಾಕೋಲೇಟ್ನಲ್ಲಿ ಹುಳುಗಳು ಕಂಡು ಬಂದಿವೆ.
ಸುಲ್ತಾನ್ ಎಂಬವರು ಮಕ್ಕಳಿಗೆಂದು ಖರೀದಿಸಿದ ಈ ಚಾಕೋಲೇಟ್ ಅನ್ನು ಓಪನ್ ಮಾಡಿದಾಗ ಅದರಲ್ಲಿನ ಹ್ಯಾಝೆಲ್ನೆಟ್ಗಳಿಂದ ಹುಳುಗಳು ಹೊರಬರುತ್ತಿರುವುದು ಕಂಡು ಬಂದಿದೆ. ಚಾಕೋಲೇಟ್ನ ಎಕ್ಸ್ಪೈರಿ ಡೇಟ್ 22-1-2025 ಇದ್ದು, ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಪೋಷಕರು ಈ ಬಗ್ಗೆ ಎಚ್ಚರವಹಿಸುವಂತೆ ಸೂಚಿಸಿದ್ದಾರೆ.