Namma Metro: ಅಪರ್ಣಾ ಅಗಲಿಕೆ ಬೆನ್ನಲ್ಲೇ ‘ನಮ್ಮ ಮೆಟ್ರೋ’ ಹೊಸ ಮಾರ್ಗದಲ್ಲಿ ಬೇರೆ ಮಹಿಳೆಯ ಧ್ವನಿ !!

Namma Metro: ಕನ್ನಡದ ಹೆಸರಾಂತ ನಿರೂಪಕಿ, ಸ್ವಚ್ಛ ಕನ್ನಡದ ಧ್ವನಿ, ಮಜಾ ಟಾಕೀಸ್‌ನಲ್ಲಿ ಒನ್ ಆಂಡ್ ಒನ್ಲಿ ವರಲಕ್ಷ್ಮೀ ಎಂದೆ ಖ್ಯಾತವಾಗಿದ್ದ ಅಪರ್ಣಾ(Aparna) ವಸ್ತಾರೆ ಮೊನ್ನೆ ಇಡೀ ಕನ್ನಡಿಗರನ್ನು ಅಗಲಿದ್ದಾರೆ. ಆದರೆ ತಮ್ಮ ಧ್ವನಿಯ ಮೂಲಕ, ನಿರೂಪಣೆಗಳ ಮೂಲಕ ಅವರು ಎಂದೆಂದಿಗೂ ಶಾಶ್ವತ. ಅದರಲ್ಲೂ ಬೆಂಗಳೂರು ಮೆಟ್ರೋದಲ್ಲಿ ಕೇಳುವ ಅವರ ಧ್ವನಿಯಿಂದ ಎಂದಿಗೂ ಕನ್ನಡಿಗರಿಂದ ಮರೆಯಾಗುವುದಿಲ್ಲ. ಆದರೀಗ ಬೆಂಗಳೂರಿನ ಹೊಸ ಮಾರ್ಗದ ಮೆಟ್ರೋಗಳಲ್ಲಿ ಬೇರೆ ಮಹಿಳೆಯ ಧ್ವನಿಗೆ ಹುಡುಕಾಟ ನಡೆದಿದೆ.

ಅಪರ್ಣಾ ಅವರು ನಿಧನರಾದಾಗ ಅವರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (Namma Metro) ವಿಶೇಷವಾಗಿ ಶ್ರದ್ಧಾಂಜಲಿ ಸಮರ್ಪಿಸಿತ್ತು. ಹೌದು, ಅಪರ್ಣಾ ಅಗಲಿಕೆ ಬೆನ್ನಲ್ಲೇ ಬಿಎಂಆರ್‌ಸಿಎಲ್, ”ಎಷ್ಟೋ ನಮ್ಮ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ನಿರೂಪಕಿ ಅಪರ್ಣಾ ಅವರದ್ದು. ಕನ್ನಡ ಭಾಷೆ ಮತ್ತು ಉಚ್ಚಾರಣೆಯ ಮೇಲಿನ ಆಕೆಯ ಹಿಡಿತ ಎರಡೂ ಸಮ್ಮೋಹನಗೊಳಿಸುವಂತಿತ್ತು. ನಮ್ಮ ಮೆಟ್ರೋ ರೈಲಿನಲ್ಲಿ ಆಕೆಯ ಧ್ವನಿ ಎಂದೆಂದಿಗೂ ಜೀವಂತವಾಗಿದೆ. ನಮ್ಮ ಮುಂದಿನ ಎಲ್ಲಾ ಪ್ರಯತ್ನಗಳಲ್ಲಿ ನಮ್ಮ ಮೆಟ್ರೋ ಅವಳನ್ನು ಕಳೆದುಕೊಂಡಿದೆ. ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಶ್ರದ್ಧಾಂಜಲಿ ಸಲ್ಲಿಸಿತ್ತು. ಇದು ನಿಜಕ್ಕೂ ಹೆಮ್ಮೆಯ ಕನ್ನಡತಿಗೆ ದೊರೆತ ಗೌರವವೇ ಸರಿ.

Heart Attack: ಈ ಲಕ್ಷಣಗಳು ಇದ್ದಲ್ಲಿ ಕೂಡಲೇ ಅಲರ್ಟ್ ಆಗಿ! ಪ್ರಾಣಾಪಾಯದಿಂದ ಪಾರಾಗಿ!

ಅದರೆ ಇನ್ನುಮುಂದೆ ಬೆಂಗಳೂರು ಮೆಟ್ರೋದ ವಿಸ್ತರಿತ ಮಾರ್ಗ ಹಾಗೂ ಹೊಸ ಮಾರ್ಗಗಳಲ್ಲಿ ಅಪರ್ಣಾ ಬದಲಾಗಿ ಬೇರೊಬ್ಬ ಮಹಿಳೆಯ ಧ್ವನಿ ನಿಮ್ಮ ಕಿವಿಗೆ ಕೇಳಲಿದೆ. ಹೌದು, ಅಪರ್ಣಾ ನಿಧನ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ಹೊಸ ಮಾರ್ಗಗಳಲ್ಲಿ ಹೊಸ ಧ್ವನಿ ಬರಲಿದೆ. ಬೆಂಗಳೂರು ಮೆಟ್ರೋದಲ್ಲಿ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ‌ ಮೆಟ್ರೋ ನೂತನ ಮಾರ್ಗಗಳಲಲ್ಲಿ ಅಪರ್ಣಾ ಧ್ವನಿ ಕೇಳಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಮೆಟ್ರೋದಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ನೂತನ ಮಾರ್ಗದಲ್ಲಿ ಹೊಸ ಧ್ವನಿಗಾಗಿ ಮೆಟ್ರೋ ಹುಡುಕಾಟ ಮಾಡುತ್ತಿದೆ.

ಯಾವ ಮಾರ್ಗಗಳಲ್ಲಿ ಇರಲ್ಲ ಅಪರ್ಣಾ ಧ್ವನಿ?
ಬೆಂಗಳೂರಿನ ಹೊಸ ಮೆಟ್ರೋ ಮಾರ್ಗಗಳಾದ ಆರ್.ವಿ. ರಸ್ತೆ- ಬೊಮ್ಮಸಂದ್ರ, ಹಸಿರು ಮಾರ್ಗದ ವಿಸ್ತರಿತ ಮಾರ್ಗ ನಾಗಸಂದ್ರ-ಮಾದವಾರ, ನಾಗವಾರ- ಗೊಟ್ಟಿಗೆರೆ – ವಿಮಾನ ನಿಲ್ದಾಣ ಮಾರ್ಗದಲ್ಲಿ ಅಪರ್ಣಾ ಧ್ವನಿ ಕೇಳಲು ಇರುವುದಿಲ್ಲ.

ಎಲ್ಲೆಲ್ಲಿ ಕೇಳಿ ಬರುತ್ತಿದೆ ಅಪರ್ಣಾ ಧ್ವನಿ?
ಈವರೆಗೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರ ಮಾಡುವ ಎಲ್ಲ ಮಾರ್ಗಗಳಲ್ಲಿ ಎಂದಿನಂತೆಯೇ ಅಪರ್ಣಾ ಧ್ವನಿ ಜೀವಂತವಾಗಿರುತ್ತದೆ. ನಮ್ಮ ಮೆಟ್ರೋದ ನೇರಳೆ ಮಾರ್ಗ ರಸ್ತೆಯ ಚಲ್ಲಘಟ್ಟ- ವೈಟ್ ಫೀಲ್ಡ್ ಹಾಗೂ ಹಸಿರು ಮಾರ್ಗದ ಯಲಚೇನಹಳ್ಳಿ- ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಅಪರ್ಣಾ ಧ್ವನಿ ಕೇಳುತ್ತಿದ್ದು, ಅದು ಎಂದಿನಂತೆ ಮುಂದುವರೆಯಲಿದೆ.

ಅಂದಹಾಗೆ ಯಾವುದೇ ಹೊಸ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಿಸುವಂತಿದ್ದರೂ ಅವರಿಂದ ಧ್ವನಿ ಪಡೆಯುತ್ತಾ ಬಂದಿದ್ದಾರೆ. ಎಂದಿಗೂ ಧ್ವನಿ ದಾನಕ್ಕೆ ಇಲ್ಲವೆನ್ನದ ಅಪರ್ಣಾ ಅವರು ಕಳೆದ 13 ವರ್ಷಗಳಿಂದ ನಮ್ಮ ಮೆಟ್ರೋಗೆ ಧ್ವನಿ ನೀಡುತ್ತಾ ಬಂದಿದ್ದರು.

Leave A Reply

Your email address will not be published.