Chikkamagalur: ವೇದಿಕೆ ಮೇಲಿನ ಖುರ್ಚಿಗಾಗಿ ಮಕ್ಕಳಂತೆ ಕಿತ್ತಾಡಿಕೊಂಡ ಶಾಸಕರು,ಪರಿಷತ್ ಸದಸ್ಯರು – ಸಮಾಧಾನ ಮಾಡಲು ಸಚಿವರು, ಅಧಿಕಾರಿಗಳು ಹೈರಾಣು !!
Chikkamagaluru: ಚಿಕ್ಕಮಗಳೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಶಾಸಕರು ಹಾಗೂ ಪರಿಷತ್ ಸದಸ್ಯ ಮಹಾಶಯರುಗಳು ವೇದಿಕೆಯಲ್ಲಿನ ಕುರ್ಚಿಗಾಗಿ ಮಕ್ಕಳಂತೆ ಕಿತ್ತಾಡಿಕೊಂಡ ಘಟನೆ ನಡೆದಿದೆ.
ಹೌದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್(K J Georg) ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ನಡುವೆ ಕುರ್ಚಿ ಗಲಾಟೆ ನಡೆಯಿತು. ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರನ್ನು ಸಮಾಧಾನ ಮಾಡಲು ಅಲ್ಲಿದ್ದ ಅಧಿಕಾರಿಗಳು ಹೈರಾಣಾಗಿದ್ದಾರೆ.
ಉಸ್ತುವಾರಿ ಸಚಿವರು ಸಭೆಯಲ್ಲಿ ಆಸೀನರಾಗುತ್ತಿದ್ದಂತೆ ಶಾಸಕರು ವೇದಿಕೆ ಕುರ್ಚಿಯಲ್ಲಿ ಆಸೀನರಾದರು. ಶಾಸಕರು (MLAs) ಮೇಲೆ ಕೂರುವುದು ತಪ್ಪು ಎಂದು ಸಿ.ಟಿ.ರವಿ (CT Ravi) ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಪರಿಷತ್ ಸದಸ್ಯರಾದ ಸಿ.ಟಿ ರವಿ, ಎಸ್.ಎಲ್ ಭೋಜೇಗೌಡರಿಂದ ಆಕ್ರೋಶ ವ್ಯಕ್ತವಾಯಿತು. ಮೇಲೆ ಕೂತೇ ಕೂರುತ್ತೇನೆ ಎಂದು ಕಡೂರು ಕಾಂಗ್ರೆಸ್ ಶಾಸಕ ಆನಂದ್(Congress MLA Anand) ಪಟ್ಟು ಹಿಡಿದಿದ್ದರು. ಅಲ್ಲದೆ ಪರಿಷತ್ ಸದಸ್ಯ ಸ್ಥಾನ ಸಾಂವಿಧಾನಿಕ ಹುದ್ದೆಯೇ ಅಲ್ಲವೆಂದ ಶಾಸಕ ಆನಂದ್ ಹೇಳಿದರು. ಬಳಿಕ ಅವರ ಮಾತಿಗೆ ಸಿ.ಟಿ.ರವಿ, ಎಸ್.ಎಲ್. ಭೋಜೇಗೌಡ ಕೆಂಡಮಂಡಲವಾದರು. ಆಗ ಎಲ್ಲರನ್ನೂ ಸಮಾಧಾನ ಮಾಡಲು ಸಚಿವ ಕೆ.ಜೆ.ಜಾರ್ಜ್ ಮುಂದಾದರು.
ಮಧ್ಯ ಪ್ರವೇಶಿಸಿದ ಕೆ.ಜೆ.ಜಾರ್ಜ್ ಈ ಗೊಂದಲಕ್ಕೆ ಸ್ಪಷ್ಟನೆ ಪಡೆದು ಮುಂದಿನ ಸಭೆಯಲ್ಲಿ ಅನುಸರಿಸಲಾಗುವುದು ಎಂದರು. ಬಳಿಕ ಸಿ.ಟಿ.ರವಿ ಮತ್ತು ಭೋಜೇಗೌಡ ವೇದಿಕೆ ಕೆಳಗಿನ ಖುರ್ಚಿಯಲ್ಲಿ ಕುಳಿತರು. ಗೊಂದಲದ ಸ್ಪಷ್ಟತೆ ಪಡೆದು ಮುಂದಿನ ಸಭೆಯಲ್ಲಿ ಅನುಸರಿಸೋಣ ಈಗ ವೇದಿಕೆಗೆ ಬನ್ನಿ ಎಂದು ಜಾರ್ಜ್ ಮತ್ತೆ ಮನವಿ ಮಾಡಿದರು. ಆದರೆ ಸಿ.ಟಿ.ರವಿ ಮತ್ತು ಭೋಜೇಗೌಡ ಕೆಳಗಿನ ಆಸನದಲ್ಲೆ ಕುಳಿತು ಸಭೆಯಲ್ಲಿ ಪಾಲ್ಗೊಂಡರು.
Aparna: ಅಪರ್ಣಾಗೆ ಇತ್ತು ಅದೊಂದು ಕೊನೆಯಾಸೆ, ಈಡೇರಲೇ ಇಲ್ಲ ಆ ಮಹದಾಸೆ !!